'ಐಪಿಎಲ್ 2021'ಕ್ಕೆ ಹಿನ್ನಡೆ, ಪಂದ್ಯಗಳು ಸ್ವಲ್ಪ ದಿನಗಳ ಕಾಲ ಸ್ಥಗಿತ!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಗೆ ಸಂಕಷ್ಟ ಎದುರಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಇಬ್ಬರು ಆಟಗಾರರಿಗೆ ಕೋವಿಡ್-19 ಸೋಂಕಿರುವುದು ಪತ್ತೆಯಾದ ಬಳಿಕ ಐಪಿಎಲ್‌ನ ಒಂದು ಪಂದ್ಯ ಮುಂದೂಡಲ್ಪಟ್ಟಿತ್ತು. ಇದೀಗ ಮತ್ತೊಂದು ಹಿನ್ನಡೆಯ ಸಂಗತಿ ಕೇಳಿ ಬಂದಿದೆ. 2021ರ ಐಪಿಎಲ್ ಸ್ವಲ್ಪ ದಿನಗಳ ಕಾಲ ನಿಲುಗಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೋಲ್ಕತ್ತಾ ನೈಟ್ ರೈಡರ್ಸ್‌ನ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗಿ ಸಂದೀಪ್ ವಾರಿಯರ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಮೇ 3ರಂದು ನಡೆಯಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮುಂದೂಡಲ್ಪಟ್ಟಿತ್ತು.

ಚೆನ್ನೈ-ರಾಜಸ್ಥಾನ್ ಪಂದ್ಯ ಮುಂದೂಡಿಕೆ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಕೂಡ ಮುಂದೂಡಲ್ಪಡುವ ಸಾಧ್ಯತೆಯಿದೆ ಎನ್ನಲಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿಗೆ ಎರಡನೇ ಪರೀಕ್ಷೆಯಲ್ಲೂ ಕೋವಿಡ್-19 ಪಾಸಿಟಿವ್ ಬಂದಿರುವುದರಿಂದ ಮೇ 5ರಂದು ನಡೆಯಲಿರುವ ಸಿಎಸ್‌ಕೆ-ಆರ್‌ಆರ್ ಪಂದ್ಯ ಮುಂದೂಡಲ್ಪಡುವ ಸಾಧ್ಯತೆಯಿದೆ ಎನ್ನಲಾಗಿತ್ತು.

ಎಷ್ಟು ದಿನಗಳ ಕಾಲ ಪಂದ್ಯಗಳು ನಿಲುಗಡೆ?
ಕೋಲ್ಕತ್ತಾ ಮತ್ತು ಬೆಂಗಳೂರು ನಡುವಿನ ಪಂದ್ಯ ರದ್ದಾದ ಬಳಿಕ ಮರುದಿನ ಅಂದರೆ ಮೇ 4ರಂದು ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ಪಂದ್ಯ ನಡೆಯಲಿದೆ. ಈ ಪಂದ್ಯದ ಬಳಿಕ ಸ್ವಲ್ಪ ದಿನಗಳ ಕಾಲ ಐಪಿಎಲ್ ಪಂದ್ಯಗಳು ನಿಲುಗಡೆಯಾಗಲಿವೆ. ಆದರೆ ಯಾವ ದಿನಾಂಕದವರೆಗೆ ಎಷ್ಟು ಪಂದ್ಯಗಳು ಮುಂದೂಡಲ್ಪಡಲಿವೆ ಎಂಬುವುದರ ಬಗ್ಗೆ ಸ್ಪಷ್ಟನೆ ಲಭಿಸಿಲ್ಲ.

ಪಂದ್ಯಗಳ ನಿಲುಗಡೆಗೆ ಕಾರಣವೇನು?
ಭಾರತದಲ್ಲಿ ಕೋವಿಡ್-19 ದ್ವಿತೀಯ ಅಲೆ ತಲ್ಲಣ ಸೃಷ್ಟಿಸಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಸೌಲಭ್ಯಗಳ ಕೊರತೆ ಎದುರಾಗುತ್ತಿದೆ. ಹೀಗಾಗಿ ಇಂಥ ಸಂದರ್ಭ ಐಪಿಎಲ್ ನಡೆಸೋದು ಸರಿಯಲ್ಲ ಎಂಬಂತ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ, ಟೂರ್ನಿ ಮಧ್ಯದಲ್ಲಿ ಕೆಕೆಆರ್‌ನ ಇಬ್ಬರು ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಒಬ್ಬರು (ಬೌಲಿಂಗ್ ಕೋಚ್ ಎಲ್ ಬಾಲಾಜಿ) ಸೋಂಕಿಗೀಡಾಗಿರುವುದು ಕಂಡುಬಂದಿದೆ. ಹೀಗಾಗಿ ಐಪಿಎಲ್ ಪಂದ್ಯಗಳು ನಿಲುಗಡೆಯಾಗುವ ಸಾಧ್ಯತೆ ಹೆಚ್ಚಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications