Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಮುಂಬೈ vs ಹೈದರಾಬಾದ್ ಪಂದ್ಯ ಮುಂದೂಡಿಕೆ!

IPL 2021: Tonight match between MI vs SRH set to be postponed, after Wriddhiman Saha tests positive for COVID-19

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಗೆ ಕೋವಿಡ್-19 ಕಾರ್ಮೋಡ ಕವಿದಿದೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ಮುಂದೂಡಲ್ಪಟ್ಟಿತ್ತು. ಈಗ ಬುಧವಾರ (ಮೇ 4) ನಡೆಯಲಿದ್ದ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯ ಕೂಡ ಮುಂದೂಡಬೇಕಾದ ಅನುವಾರ್ಯತೆ ನಿರ್ಮಾಣವಾಗಿದೆ.

ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಾಹಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಹೀಗಾಗಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದ್ದ ಹೈದರಾಬಾದ್ ಮತ್ತು ಮುಂಬೈ ನಡುವಿನ ಐಪಿಎಲ್ 31ನೇ ಪಂದ್ಯ ಮುಂದೂಡಲ್ಪಡುವುದರಲ್ಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್‌ನ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗಿ ಸಂದೀಪ್ ವಾರಿಯರ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆದ್ದರಿಂದ ಮೇ 3ರಂದು ನಡೆಯಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮುಂದೂಡಲ್ಪಟ್ಟಿತ್ತು.

ಹೈದರಾಬಾದ್ vs ಮುಂಬೈ ಪಂದ್ಯದ ಬಳಿಕ ಈ ಆವೃತ್ತಿಯ ಐಪಿಎಲ್ ಪಂದ್ಯಗಳು ಸ್ವಲ್ಪ ದಿನಗಳ ಕಾಲ ನಿಲುಗಡೆಯಾಗಲಿವೆ ಎಂಬ ವಿಚಾರ ಕೇಳಿಬಂದಿತ್ತು. ಈಗ ಹೈದರಾಬಾದ್-ಮುಂಬೈ ಪಂದ್ಯಕ್ಕೂ ಹಿನ್ನಡೆಯಾಗಿದೆ. ಹೀಗಾಗಿ ಏಪ್ರಿಲ್ 29ರಂದು ನಡೆದ ಪಂಜಾಬ್-ಡೆಲ್ಲಿ ಪಂದ್ಯದ ಬಳಿಕ ಸದ್ಯಕ್ಕೆ ಪಂದ್ಯಗಳು ನಡೆಯುವ ಸಾಧ್ಯತೆ ಇಲ್ಲದಾಗಿದೆ. ಮುಂದಿನ ಸೂಚನೆಯವರೆಗೂ ಕಾಯಬೇಕಾಗಿದೆ.

Story first published: Tuesday, May 4, 2021, 13:47 [IST]
Other articles published on May 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+