ಮುಂದಿನ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರು ಯಾರು? ಸಂಭಾವನೆ ಎಷ್ಟು?

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿರುವಂತೆಯೇ ಐಪಿಎಲ್ ಬಗೆಗೂ ಕುತೂಹಲ ಹೆಚ್ಚಾಗುತ್ತಿದೆ. ಐಪಿಎಲ್ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿದ್ದು ಎಲ್ಲಾ ತಂಡಗಳು ಬಿಡುಗಡೆಗೊಳಿಸಲು ಬಯಸಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಮೂರನೇ ಪಂದ್ಯದ ನಡುವಿನ ಅವಧಿಯಲ್ಲಿ ಫೆಬ್ರವರಿ 18ರಂದು ಚೆನ್ನೈನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದೆ.
ಆದರೆ ಈಗಾಗಲೇ ತಂಡದಲ್ಲಿ ಉಳಿದುಕೊಂಡಿರುವ ಆಟಗಾರರಲ್ಲಿ ಹಲವಾರು ಆಟಗಾರರು ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲ ಆಟಗಾರರಂತು ಕಳೆದ ಹಲವು ಆವೃತ್ತಿಗಳಿಂದ ಸ್ಥಿರವಾಗಿ ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಪಡೆದುಕೊಳ್ಳುತ್ತಿದ್ದಾರೆ.
ಹಾಗಾದರೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆಯುವ ಐವರು ಆಟಗಾರರು ಹಾಗೂ ಅವರ ಸಂಭಾವನೆಯನ್ನು ಬನ್ನಿ ನೋಡೋಣ..

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಆರಂಭಿಕ ಆವೃತ್ತಿಯಿಂದ ಒಂದೇ ತಂಡವನ್ನು ಪ್ರತಿನಿಧಿಸುತ್ತಿರುವ ಏಕೈಕ ಆಟಗಾರ. ಆರ್‌ಸಿಬಿ ತಮಡ ಆರಂಭದಿಂದಲೂ ಪ್ರತಿ ಮಹಾ ಹರಾಜಿನಲ್ಲಿಯೂ ವಿರಾಟ್ ಕೊಹ್ಲಿಯನ್ನು ಉಳಿಸಿಕೊಂಡೇ ಬಂದಿದೆ. 2013ರಿಂದ ನಾಯಕನಾಗಿರುವ ವಿರಾಟ್ ಕೊಹ್ಲಿ ಮುಂಬರುವ ಆವೃತ್ತಿಗೆ 17 ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯಲಿದ್ದಾರೆ.

ಕೆಕೆಆರ್ ಬೌಲಿಂಗ್ ಅಸ್ತ್ರ ಪ್ಯಾಟ್ ಕಮ್ಮಿನ್ಸ್
ಆಸ್ಟ್ರೇಲಿಯಾ ತಂಡದ ಉಪನಾಯಕ ಪ್ಯಾಟ್ ಕಮ್ಮಿನ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಪ್ರತಿಭಾನ್ವಿತ ಆಟಗಾರ. ಕಳೆದ ಆವೃತ್ತಿಗೂ ಮುನ್ನ ನಡೆದ ಮಿನಿ ಹರಾಜಿನಲ್ಲಿ ಕೆಕೆಆರ್ ಪ್ಯಾಟ್ ಕಮ್ಮಿನ್ಸ್ ಅವರನ್ನು 15.5 ಕೋಟಿ ಮೊತ್ತಕ್ಕೆ ಖರೀದಿಸಿತ್ತು. ಈ ಬಾರಿಯೂ ಅವರನ್ನು ತಂಡದಲ್ಲೇ ಕೆಕೆಆರ್ ಉಳಿಸಿಕೊಂಡಿರುವ ಕಾರಣ ಮುಂದಿನ ಆವೃತ್ತಿಗೆ ಪ್ಯಾಟ್ ಕಮ್ಮಿನ್ಸ್ 15.5 ಕೋಟಿ ರೂಪಾಯಿ ಮೊತ್ತವನ್ನು ಸಂಭಾವನೆಯಾಘಿ ಪಡೆಯಲಿದ್ದಾರೆ.

ಸಿಎಸ್‌ಕೆ ನಾಯಕ ಎಂಎಸ್ ಧೋನಿ
ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿರುವ ಎಂಎಸ್ ಧೋನಿ ಆರಂಭಿಕ ಆವೃತ್ತಿಯಿಂದಲೂ ಚೆನ್ನೈ ತಂಡದ ನಾಯಕನಾಗಿದ್ದಾರೆ. ಚೆನ್ನೈ ತಂಡವನ್ನು ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ಧೋನಿಯನ್ನು ಸಿಎಸ್‌ಕೆ ಫ್ರಾಂಚೈಸಿ ಮುಂದಿನ ಆವೃತ್ತಿಗೂ ರೀಟೈನ್ ಮಾಡಿಕೊಂಡಿದೆ. ಹೀಗಾಗಿ ಅವರು 15 ಕೋಟಿ ರೂಪಾಯಿಯನ್ನು ಮುಂದಿನ ಆವೃತ್ತಿಗೆ ಆದಾಯವಾಗಿ ಪಡೆಯಲಿದ್ದಾರೆ.

ಮುಂಬೈ ಕ್ಯಾಪ್ಟನ್ ರೋಹಿತ್ ಶರ್ಮಾ
ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮುಂಬೈ ತಂಡವನ್ನು ದಾಖಲೆಯ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿ ತಾನೋರ್ವ ಅರ್ಹ ನಾಯಕ ಎಂದು ಸಾಬೀತುಪಡಿಸಿದ್ದಾರೆ. ಮುಂದಿನ ಆವೃತ್ತಿಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದು ಅವರು 15 ಕೋಟಿ ರೂಪಾಯಿ ಆದಾಯವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ.

ಆಲ್‌ರೌಂಡರ್ ಸುನಿಲ್ ನರೈನ್
ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಸುನಿಲ್ ನರೈನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಲ್‌ರೌಂಡರ್ ಆಗಿ ಹೆಚ್ಚು ಕೊಡುಗೆ ನೀಡಿದ ಆಟಗಾರ. ಕಳೆದ ಹಲವು ಆವೃತ್ತಿಗಳಲ್ಲಿ ಕೆಕೆಆರ್ ತಂಡಕ್ಕೆ ಬೌಲಿಂಗ್ ಜೊತೆಗೆ ಬ್ಯಾಟ್ ಮೂಲಕವೂ ಆಸರೆಯಾಗಿದ್ದಾರೆ. ಈ ಬಾರಿಯೂ ನರೈನ್ ಕೆಕೆಆರ್ ತಂಡದಲ್ಲೇ ಮುಂದುವರಿದಿದ್ದು 12.5 ಕೋಟಿ ರೂಪಾಯಿ ಆದಾಯವಾಗಿ ಪಡೆದುಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications