ಐಪಿಎಲ್ : 20 ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಟಾಪ್ 5 ಆಟಗಾರರು

ಟಿ ಟ್ವೆಂಟಿ ಪಂದ್ಯವೊಂದರ ಕೊನೆಯ 5 ಓವರ್‌ಗಳು ಪ್ರಮುಖವಾದವು. ಕೊನೆಯ 5 ಓವರ್‌ಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ ಮುಗಿಸುವ ತಂಡ ಬಹುತೇಕ ಪಂದ್ಯಗಳನ್ನು ಗೆದ್ದುಕೊಂಡಿದೆ. ಇಷ್ಟು ವರ್ಷಗಳಲ್ಲಿ ಐಪಿಎಲ್ ಪಂದ್ಯಗಳ ಕೊನೆಯ 5 ಓವರ್‌ಗಳಲ್ಲಿ ಹಲವಾರು ಬಿಗ್ ಬ್ಯಾಟ್ಸ್‌ಮನ್‌ಗಳು ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ತೋರಿಸಿದ್ದಾರೆ.
ಎಬಿ ಡಿವಿಲಿಯರ್ಸ್, ಎಂಎಸ್ ಧೋನಿ, ಆ್ಯಂಡ್ರೆ ರಸೆಲ್, ಕಿರಾನ್ ಪೊಲಾರ್ಡ್ ಹಾಗೂ ಇನ್ನಿತರ ಬಿಗ್ ಹಿಟ್ಟರ್ಸ್ ಐಪಿಎಲ್ ಪಂದ್ಯಗಳ ಕೊನೆಯ ಕೆಲವು ಓವರ್‌ಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸುವುದರ ಮೂಲಕ ಮನರಂಜನೆಯನ್ನು ನೀಡಿದ್ದಾರೆ. ಹೀಗೆ ಐಪಿಎಲ್ ಪಂದ್ಯಗಳ 20 ನೇ ಓವರ್ ನಲ್ಲಿ ಇದುವರೆಗೂ ಒಟ್ಟಾರೆ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ..
5. ಹರ್ಭಜನ್ ಸಿಂಗ್ ( 15 ಸಿಕ್ಸರ್ )
ಐಪಿಎಲ್ ಕೊನೆಯ ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಹರ್ಭಜನ್ ಸಿಂಗ್ ಅವರು ಸ್ಥಾನ ಪಡೆದುಕೊಂಡಿರುವುದು ನಿಜಕ್ಕೂ ಅಚ್ಚರಿಯ ವಿಷಯ. ಹರ್ಭಜನ್ ಒಟ್ಟಾರೆ ಐಪಿಎಲ್ ಟೂರ್ನಿಯ ಕೊನೆಯ ಓವರ್‌ನಲ್ಲಿ ಇದುವರೆಗೂ 15 ಸಿಕ್ಸರ್ ಬಾರಿಸಿದ್ದಾರೆ.
4. ಹಾರ್ದಿಕ್ ಪಾಂಡ್ಯ ( 21 ಸಿಕ್ಸರ್ )
ಐಪಿಎಲ್ ಪಂದ್ಯದ ಕೊನೆಯ ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಆಟಗಾರರ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಇದುವರೆಗೂ ಹಾರ್ದಿಕ್ ಪಾಂಡ್ಯ ಬ್ಯಾಟ್ ಮಾಡಿರುವ ಕೊನೆಯ ಓವರ್‌ಗಳಲ್ಲಿ ಒಟ್ಟು 21 ಸಿಕ್ಸರ್ ಬಾರಿಸಿದ್ದಾರೆ.
3. ರೋಹಿತ್ ಶರ್ಮಾ ( 23 ಸಿಕ್ಸರ್ )
ಹಿಟ್ ಮ್ಯಾನ್ ಎಂದೇ ಹೆಸರನ್ನು ಪಡೆದಿರುವ ರೋಹಿತ್ ಶರ್ಮಾ ಐಪಿಎಲ್ ಕೊನೆಯ ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ರೋಹಿತ್ ಇದುವರೆಗೂ ಆಡಿರುವ ಐಪಿಎಲ್ 20 ನೇ ಓವರುಗಳಲ್ಲಿ ಬಾರಿಸಿರುವುದು ಒಟ್ಟು 23 ಸಿಕ್ಸರ್
2. ಕಿರಾನ್ ಪೊಲಾರ್ಡ್ ( 26 ಸಿಕ್ಸರ್ )
ವೆಸ್ಟ್ ಇಂಡೀಸ್ ದೈತ್ಯ ಕಿರಾನ್ ಪೊಲಾರ್ಡ್ ಐಪಿಎಲ್ 20 ನೇ ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಕಿರಾನ್ ಪೊಲಾರ್ಡ್ ಇದುವರೆಗೂ ಐಪಿಎಲ್ ಕೊನೆಯ ಓವರ್‌ಗಳಲ್ಲಿ ಒಟ್ಟು 26 ಸಿಕ್ಸರ್ ಸಿಡಿಸಿದ್ದಾರೆ.
1. ಎಂಎಸ್ ಧೋನಿ ( 49 ಸಿಕ್ಸರ್ )
ಐಪಿಎಲ್ 20 ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿರುವುದು ಬೆಸ್ಟ್ ಫಿನಿಶರ್ ಎಂದೇ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ. ಇದುವರೆಗೂ ಧೋನಿ ಐಪಿಎಲ್ ಅಂತಿಮ ಓವರ್‌ನಲ್ಲಿ 49 ಸಿಕ್ಸರ್ ಬಾರಿಸುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications