Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021 : 'ಪಂಜಾಬ್ ಕಿಂಗ್ಸ್ ಹೊಸ ಜರ್ಸಿ ಆರ್‌ಸಿಬಿ ಜರ್ಸಿಯ ಕಾಪಿ' ಎಂದು ನೆಟ್ಟಿಗರ ಟ್ರೋಲ್

 IPL 2021: Twitter trolls Punjab Kings for copying RCB’s 2009 old jersey

14ನೇ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ ಹತ್ತಿರ ಬರುತ್ತಿದ್ದಂತೆ ಕಿಂಗ್ಸ್ ಇಲೆವೆನ್ ಪಂಜಾಬ್‍ನಿಂದ ಪಂಜಾಬ್ ಕಿಂಗ್ಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದ ಪಂಜಾಬ್ ತಂಡ ತನ್ನ ಹೊಸ ಜರ್ಸಿಯನ್ನು ಸಹ ಅನಾವರಣಗೊಳಿಸಿದೆ. ಪಂಜಾಬ್ ಕಿಂಗ್ಸ್ ತನ್ನ ಹೊಸ ಜರ್ಸಿಯನ್ನು ಅನಾವರಣಗೊಳಿಸಿದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾಗಿದೆ.

ಹೊಸ ಜರ್ಸಿ ಅನಾವರಣಗೊಳ್ಳುತ್ತಿದ್ದಂತೆ ಪಂಜಾಬ್ ಕಿಂಗ್ಸ್ ತಂಡದ ಅಭಿಮಾನಿಗಳು ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಳೆಯ ಜರ್ಸಿಯನ್ನು ಕಾಪಿ ಮಾಡಿದ್ದೀರಾ ಎಂದು ದೂಷಿಸುತ್ತಿದ್ದಾರೆ. ಟ್ವಿಟ್ಟರ್ ಮೂಲಕ ತಮ್ಮ ತಂಡದ ಹೊಸ ಜರ್ಸಿ ವಿಡಿಯೋವನ್ನು ಬಿಡುಗಡೆ ಮಾಡಿದ ಪಂಜಾಬ್ ಕಿಂಗ್ಸ್ ಟ್ವಿಟರ್ ಮುಖಾಂತರವೇ ಅಭಿಮಾನಿಗಳಿಂದ ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

2008-09ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಧರಿಸಿದ್ದ ಜರ್ಸಿಯನ್ನೇ ಕಾಪಿ ಮಾಡಿ ಇದೀಗ ಹೊಸ ಜರ್ಸಿ ಎಂದು ಹೇಳಿ ಬಿಡುಗಡೆ ಮಾಡಿದ್ದೀರ ಅಷ್ಟೇ ಹೊರತು ಸ್ವಂತವಾಗಿ ಜರ್ಸಿಯನ್ನು ತಯಾರಿಸಿಲ್ಲ ಎಂದೆಲ್ಲಾ ನೆಟ್ಟಿಗರು ಪಂಜಾಬ್ ಕಿಂಗ್ಸ್ ತಂಡದ ಪೋಸ್ಟ್‌ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈಗಲೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜರ್ಸಿ ಮತ್ತು ಪಂಜಾಬ್ ಕಿಂಗ್ಸ್ ತಂಡದ ಜರ್ಸಿಗಳ ನಡುವೆ ಅಷ್ಟೇನೂ ವ್ಯತ್ಯಾಸವಿಲ್ಲ ಎರಡೂ ತಂಡಗಳು ಒಟ್ಟಿಗೆ ಪಂದ್ಯವಾಡಿದಾಗ ಯಾವ ಆಟಗಾರ ಯಾವ ತಂಡಕ್ಕೆ ಸೇರಿದವನು ಎಂದು ಗೊಂದಲ ಉಂಟಾದರೂ ಅಚ್ಚರಿಯಿಲ್ಲ ಎಂದೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ.

ಟ್ವಿಟರ್ ಮೂಲಕ ಹೊಸ ಜರ್ಸಿ ಲಾಂಚ್ ಮಾಡಿದ ಪಂಜಾಬ್ ತಂಡಕ್ಕೆ ನೆಟ್ಟಿಗರು ನೀಡಿದ ನಕಾರಾತ್ಮಕ ಪ್ರತಿಕ್ರಿಯೆಗಳು ಮುಂದೆ ಇವೆ ನೋಡಿ..

Story first published: Wednesday, March 31, 2021, 10:40 [IST]
Other articles published on Mar 31, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+