For Quick Alerts
ALLOW NOTIFICATIONS  
For Daily Alerts
 

ವಾಂಖೆಡೆ ಸ್ಟೇಡಿಯಂನಲ್ಲಿ ಕೊರೊನಾ ಪ್ರಕರಣಗಳು ಮತ್ತೂ ಏರಿಕೆ

IPL 2021: Two ground staff, one plumber test Covid 19 positive at the Wankhede Stadium

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಬಾಕಿ ಉಳಿದಿವೆ. ಏಪ್ರಿಲ್ 9ರಿಂದ ಐಪಿಎಲ್ ಪಂದ್ಯಗಳು ಆರಂಭಗೊಳ್ಳಲಿವೆ. ಈ ನಡುವೆ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಕೊರೊನಾ ಪ್ರಕರಣಗಳು ಇನ್ನೂ ಏರಿಕೆ ಕಂಡಿವೆ.

ಈ ಮೊದಲು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಮೈದಾನದ ಸಿಬ್ಬಂದಿ ಮತ್ತು 5 ಮಂದಿ ಕಾರ್ಯಕ್ರಮ ನಿರ್ವಹಣಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಇನ್ನೂ ಇಬ್ಬರು ಮೈದಾನ ಸಿಬ್ಬಂದಿ ಮತ್ತು ಓರ್ವ ಪ್ಲಂಬರ್‌ಗೆ ಕೋವಿಡ್-19 ಸೋಂಕಿರುವುದು ಕಾಣಿಸಿಕೊಂಡಿದೆ.

ಮೈದಾನದೊಳಗಿನ ಸಿಬ್ಬಂದಿಗಳಲ್ಲಿ ಕೊರೊನಾ ಪ್ರಕರಣಗಳು ಏರುತ್ತಿರುವ ಬಗ್ಗೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಖಾತರಿಪಡಿಸಿದೆ. ಹೀಗಾಗಿ ಮೈದಾನದ ಸಿಬ್ಬಂದಿ ಕೂಡ ಎಲ್ಲಿಯೂ ಪ್ರಯಾಣಿಸದಂತೆ, ಮೈದಾನದೊಳಗೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

'ವಾಖೆಡೆ ಸ್ಟೇಡಿಯಂನಲ್ಲಿ ಇನ್ನೂ ಇಬ್ಬರು ಮೈದಾನ ಸಿಬ್ಬಂದಿಗಳಿಗೆ ಮತ್ತು ಒಬ್ಬ ಪ್ಲಂಬರ್‌ಗೆ ಕೋವಿಡ್ ಪಾಸಿಟಿವ್ ಬಂದಿದೆ. ಇದಕ್ಕೂ ಮುನ್ನ 10 ಮಂದಿ ಮೈದಾನ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು,' ಎಂದು ಎಂಸಿಎ ಮೂಲ ಎಎನ್‌ಐಗೆ ಮಾಹಿತಿ ನೀಡಿದೆ. ಆದರೆ ಏನೇ ಆದರೂ ಮುಂಬೈನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಈ ಮೊದಲು ಹೇಳಿತ್ತು.

Story first published: Tuesday, April 6, 2021, 11:44 [IST]
Other articles published on Apr 6, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+