Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ಲೇಯಿಂಗ್ XIನಿಂದ ವಾರ್ನರ್ ಹೊರಗಿಟ್ಟಿದ್ದಕ್ಕೆ ಕಾರಣ ಹೇಳಿದ ಬೇಲಿಸ್

IPL 2021: Very difficult decision to drop David Warner from playing XI, says Trevor Bayliss

ನವದೆಹಲಿ: ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 28ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 55 ರನ್‌ಗಳ ಸೋಲನುಭವಿಸಿತ್ತು. ಇದು ಹೈದರಾಬಾದ್‌ಗೆ ಟೂರ್ನಿಯಲ್ಲಿ ಲಭಿಸಿದ ಆರನೇ ಸೋಲು.

ಭಾನುವಾರದ (ಮೇ 2) ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮಾಜಿ ನಾಯಕ ಡೇವಿಡ್ ವಾರ್ನರ್ ಆಡಿರಲಿಲ್ಲ. ಹಿಂದಿನ ಪಂದ್ಯದಲ್ಲಿ ತಂಡ ಕಳಪೆ ಪ್ರದರ್ಶನ ನೀಡಿದ್ದರಿಂದ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಕೇನ್ ವಿಲಿಯಮ್ಸನ್ ಅವರಿಗೆ ಕ್ಯಾಪ್ಟನ್ಸಿ ನೀಡಲಾಗಿತ್ತು.

ಕ್ಯಾಪ್ಟನ್ಸಿ ಬದಲಾಯಿಸಿದ್ದಲ್ಲದೆ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್‌ಗೆ ಪ್ಲೇಯಿಂಗ್‌ XIನಲ್ಲಿ ಸ್ಥಾನ ನೀಡಿರಲಿಲ್ಲ. ಅತ್ತ ಪಂದ್ಯದಲ್ಲಿ ಹೈದರಾಬಾದ್ ಹೀನಾಯವಾಗಿ ಸೋತಿದ್ದರಿಂದ ಈ ವಿಚಾರ ಚರ್ಚೆಗೀಡಾಗಿತ್ತು. ವಿಶೇಷವೆಂದರೆ ಹಿಂದಿನ ಪಂದ್ಯದಲ್ಲಿ ವಾರ್ನರ್ 50+ ರನ್ ಬಾರಿಸಿದ್ದರೂ ತಂಡದಿಂದ ಹೊರಗಿಟ್ಟಿದ್ದು ಅಚ್ಚರಿ ಮೂಡಿಸಿತ್ತು.

ಪಂದ್ಯ ಬಳಿಕ ಎಸ್‌ಆರ್‌ಎಚ್ ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಪ್ರತಿಕ್ರಿಯಿಸಿದ್ದಾರೆ. 'ಡೇವಿಡ್ ವಾರ್ನರ್ ಅವರನ್ನು ಆಡುವ ತಂಡದಿಂದ ಹೊರಗಿಟ್ಟಿದ್ದು ಬಲು ಕಠಿಣ ನಿರ್ಧಾರ. ಆತ ತಂಡಕ್ಕೆ ಹಲವಾರು ಯಶಸ್ಸುಗಳನ್ನು ತಂಡ ಆಟಗಾರ. ಆದರೆ ಭಿನ್ನ ಕಾಂಬಿನೇಶನ್ ಆಡಿಸೋದು ಅನಿವಾರ್ಯವಾಗಿತ್ತು,' ಎಂದು ಬೇಲಿಸ್ ಹೇಳಿದ್ದಾರೆ. ಭಾನುವಾರದ ಪಂದ್ಯದಲ್ಲಿ ವಾರ್ನರ್ ಬದಲು ಭುವನೇಶ್ವರ್ ಕುಮಾರ್ ಆಡಿದ್ದರು.

Story first published: Sunday, May 2, 2021, 23:24 [IST]
Other articles published on May 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+