ಭುವಿಯಿಂದ ಸ್ವಿಂಗ್ ಬೌಲಿಂಗ್ ಕಲಿಯುತ್ತಿದ್ದಾರೆ ವಿಜಯ್ ಶಂಕರ್

ನವದೆಹಲಿ: ಸನ್ ರೈಸರ್ಸ್ ಆಲ್ ರೌಂಡರ್ ವಿಜಯ್ ಶಂಕರ್, ತಂಡದ ಸಹ ಆಟಗಾರ ಭುವನೇಶ್ವರ್ ಕುಮಾರ್ ಅವರಿಂದ ಸ್ವಿಂಗ್ ಬೌಲಿಂಗ್ ಕಲಿಯುತ್ತಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇತ್ತೀಚೆಗೆ ಟ್ವಿಟರ್ ಮೂಲಕ ಈ ಸಂಗತಿ ಹೇಳಿಕೊಂಡಿದೆ. ಶಂಕರ್ ಭುವಿಯಿಂದ ಸ್ವಿಂಗ್ ಬೌಲಿಂಗ್ ಅಭ್ಯಾಸ ಮಾಡುತ್ತಿರುವ ಚಿತ್ರವನ್ನು ಎಸ್‌ಆರ್‌ಎಚ್ ಟ್ವಿಟರ್‌ನಲ್ಲಿ ಹಾಕಿಕೊಂಡಿದೆ.
ಭಾರತದ ವೇಗಿ ಭುವನೇಶ್ವರ್ ಕುಮಾರ್ ವಿಶ್ವದಲ್ಲೇ ಅತ್ಯುತ್ತಮ ಸ್ವಿಂಗ್ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೈದರಾಬಾದ್ ತಂಡದ ಪರ ಆಡುತ್ತಿರುವುದರಿಂದ ವಿಜಯ್ ಶಂಕರ್ ಭುವಿಯಿಂದ ಸ್ವಿಂಗ್ ಬೌಲಿಂಗ್ ಕಲಿಯುತ್ತಿದ್ದಾರೆ.
ಭುವನೇಶ್ವರ್ ಅವರಿಂದ ವಿಜಯ್ ಶಂಕರ್ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ಚಿತ್ರವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಸನ್ ರೈಸರ್ಸ್ ಹೈದರಾಬಾದ್, 'ಸ್ವಿಂಗ್ ಕಿಂಗ್ ಭುವಿಯಿಂದ ಕಲಿಯುತ್ತಿರುವುದು' ಎಂದು ಬರೆದುಕೊಂಡಿದೆ.
ಹೈದರಾಬಾದ್ ತಂಡ ಈ ಸೀಸನ್‌ನಲ್ಲಿ ಉತ್ತಮ ಸ್ಥಿತಿಯಲ್ಲಿಲ್ಲ. ಆಡಿರುವ ಆರು ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿರುವ ಎಸ್‌ಆರ್‌ಎಚ್ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಇದೇ ಕಾರಣಕ್ಕೆ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಿದೆ. ಡೇವಿಡ್ ವಾರ್ನರ್ ಬದಲಿಗೆ ಕೇನ್ ವಿಲಿಯಮ್ಸನ್ ಮತ್ತೆ ನಾಯಕತ್ವ ವಹಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications