For Quick Alerts
ALLOW NOTIFICATIONS  
For Daily Alerts
 

ದೇವದತ್ ಪಡಿಕ್ಕಲ್ ನೆಚ್ಚಿನ ಐಪಿಎಲ್ ಆಟಗಾರ ಯಾರು ಗೊತ್ತಾ?

IPL 2021 : Virat Kohli is my favourite player says Devdutt Padikkal

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದರ ಮೂಲಕ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ಕನ್ನಡಿಗ ದೇವದತ್ ಪಡಿಕ್ಕಲ್ ಮೊದಲ ಆವೃತ್ತಿಯಲ್ಲಿಯೇ ಉತ್ತಮ ಪ್ರದರ್ಶನವನ್ನು ನೀಡಿದರು. 2020ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಗರಿಷ್ಠ ರನ್ (473) ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಸಹ ಪಡಿಕ್ಕಲ್ ಪಾತ್ರರಾದರು.

ಕಳೆದ ಆವೃತ್ತಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡ ದೇವದತ್ ಪಡಿಕ್ಕಲ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿಯೂ ಸಹ ಉತ್ತಮ ಆಟವಾಡುವುದರ ಮೂಲಕ ಮಿಂಚುತ್ತಿದ್ದಾರೆ. ಟೂರ್ನಿಯಲ್ಲಿ ಇದುವರೆಗೂ 5 ಇನ್ನಿಂಗ್ಸ್‌ ಆಡಿರುವ ದೇವದತ್ ಪಡಿಕ್ಕಲ್ 188 ರನ್ ಗಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 51 ಎಸೆತಗಳಿಗೆ ದೇವದತ್ ಪಡಿಕ್ಕಲ್ ಶತಕವನ್ನು ಸಿಡಿಸಿ ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿದ ಅತಿ ಕಿರಿಯ ವಯಸ್ಸಿನ ಆಟಗಾರ ಎಂಬ ದಾಖಲೆಯನ್ನು ಸಹ ಬರೆದರು.

ಇತ್ತೀಚಿಗಷ್ಟೆ ಡ್ಯಾನಿಶ್ ಸೇಠ್ ದೇವದತ್ ಪಡಿಕ್ಕಲ್ ಅವರ ವಿಶೇಷ ಸಂದರ್ಶನವೊಂದನ್ನು ಮಾಡಿದ್ದಾರೆ. ಈ ಸಂದರ್ಶನದಲ್ಲಿ ದೇವದತ್ ಪಡಿಕ್ಕಲ್ ಅವರಿಂದ ಕೆಲವೊಂದಿಷ್ಟು ವಿವಾದಾತ್ಮಕ ಉತ್ತರಗಳನ್ನು ಪಡೆಯಲು ಡ್ಯಾನಿಶ್ ಸೇಠ್ ಕೆಲ ಪ್ರಶ್ನೆಗಳನ್ನು ಕೇಳಿದರು. ಆದರೆ ಬಹಳ ಜಾಣ್ಮೆಯಿಂದ ಉತ್ತರಿಸುತ್ತಿದ್ದ ದೇವದತ್ ಪಡಿಕ್ಕಲ್ ವಿವಾದಕ್ಕೆ ಸಿಲುಕಿಕೊಳ್ಳದ ರೀತಿಯಲ್ಲಿ ಉತ್ತರವನ್ನು ನೀಡಿದ್ದಾರೆ. ಹೀಗೆ ಈ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಅಥವಾ ಎಬಿ ಡಿವಿಲಿಯರ್ಸ್ ಇಬ್ಬರಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು ಎಂದು ಡ್ಯಾನಿಶ್ ಸೇಠ್ ದೇವದತ್ ಪಡಿಕ್ಕಲ್ ಅವರಲ್ಲಿ ಪ್ರಶ್ನೆಯನ್ನು ಹಾಕಿದ್ದಾರೆ. ಈ ಪ್ರಶ್ನೆಗೆ ಜಾಣ್ಮೆಯಿಂದ ಉತ್ತರ ನೀಡಿದ ಪಡಿಕ್ಕಲ್ ನನಗೆ ಇಬ್ಬರು ಇಷ್ಟ ಎಂದು ಹೇಳಿದರು. ಆದರೆ ಕೇವಲ ಒಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಡ್ಯಾನಿಶ್ ಸೇಠ್ ಪದೇ ಪದೇ ಕೇಳಿದ ನಂತರ ವಿರಾಟ್ ಕೊಹ್ಲಿ ಅಥವಾ ಎಬಿ ಡಿವಿಲಿಯರ್ಸ್ ಇಬ್ಬರ ಪೈಕಿ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ ಎಂದು ದೇವದತ್ ಪಡಿಕ್ಕಲ್ ಉತ್ತರವನ್ನು ನೀಡಿದರು.

Story first published: Friday, April 30, 2021, 9:55 [IST]
Other articles published on Apr 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+