Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಕ್ವಾರಂಟೈನ್ ಮುಗಿಸಿ ಆರ್‌ಸಿಬಿ ತಂಡ ಸೇರಿದ ವಿರಾಟ್ ಕೊಹ್ಲಿ-ವಿಡಿಯೋ

IPL 2021: Virat Kohli Joins RCB Team After Quarantine

ಅಬುಧಾಬಿ: ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸೆಪ್ಟೆಂಬರ್ 18ರ ಶನಿವಾರ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಸೆಪ್ಟೆಂಬರ್‌ 19ರಿಂದ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ಗಾಗಿ ಆರ್‌ಸಿಬಿ ಸಿದ್ಧವಾಗಿದೆ. ಕೊಹ್ಲಿ ತಂಡ ಸೇರಿಕೊಂಡಿರುವ ಬಗ್ಗೆ ಫ್ರಾಂಚೈಸಿ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದೆ.

ಇಂಗ್ಲೆಂಡ್‌ಗೆ ಭಾರತೀಯ ಪ್ರವಾಸ ಹೋಗಿತ್ತು. ಆದರೆ ಕೋವಿಡ್-19 ಭೀತಿಯಿಂದಾಗಿ ನಡೆಯಲಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿ ನಾಲ್ಕಯ ಟೆಸ್ಟ್ ಪಂದ್ಯಗಳ ಬಳಿಕ ಮುಂದೂಡಲ್ಪಟ್ಟಿದೆ. ಮ್ಯಾನ್ಚೆಸ್ಟರ್‌ನಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ಮುಂದೂಡಲ್ಪಡುತ್ತಲೇ ವಿರಾಟ್ ಕೊಹ್ಲಿ ಮ್ಯಾನ್ಚೆಸ್ಟರ್‌ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಪ್ರಯಾಣಿಸಿದ್ದರು.

ನಗು, ಅಪ್ಪುಗೆ, ನಗುವಿನೋಕುಳಿ

ನಗು, ಅಪ್ಪುಗೆ, ನಗುವಿನೋಕುಳಿ

ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಬೋಲ್ಡ್ ಡೈರೀಸ್ ಹೆಸರಿನಲ್ಲಿ ಐಪಿಎಲ್ ಕುರಿತು ಅಪ್‌ಡೇಟ್ಸ್ ನೀಡುತ್ತಿರುತ್ತದೆ. ವಿರಾಟ್ ಕೊಹ್ಲಿ ಕ್ವಾರಂಟೈನ್ ಮುಗಿಸಿ ತಂಡ ಸೇರಿಕೊಳ್ಳುತ್ತಿರುವ ಬಗ್ಗೆಯೂ ಆರ್‌ಸಿಬಿ ಟ್ವಿಟರ್‌ನಲ್ಲಿ ವಿಡಿಯೋ ಹಾಕಿಕೊಂಡಿದೆ. "ನಗು, ಅಪ್ಪುಗೆ ಮತ್ತು ನಗುವಿನೋಕುಳಿ, ವಿರಾಟ್ ಕೊಹ್ಲಿ ಕ್ವಾರಂಟೈನ್ ಮುಗಿಸಿ ಆರ್‌ಸಿಬಿ ಸೇರಿಕೊಂಡಿದ್ದಾರೆ. ಆರ್‌ಸಿಬಿ ಮೊದಲ ಅಭ್ಯಾದ ವೇಳೆ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಕೆಲ ವಿದೇಶಿ ಆಟಗಾರರ ಮಧ್ಯೆ ನಗು, ಅಪ್ಪುಗೆ ಮತ್ತು ನಗುವಿಕೋಕುಳಿ ಕಾಣಸಿಕ್ಕಿತು." ಎಂದು ಆರ್‌ಸಿಬಿ ಟ್ವೀಟ್‌ನಲ್ಲಿ ಬರೆದುಕೊಂಡಿದೆ. ಕಳೆದ ಶನಿವಾರವೇ ಕೊಹ್ಲಿ ಮತ್ತು ಸಿರಾಜ್ ಮ್ಯಾನ್ಚೆಸ್ಟರ್‌ನಿಂದ ಯುಎಇಗೆ ಬಂದಿದ್ದರು.

ಮೂರನೇ ಸ್ಥಾನದಲ್ಲಿ ಆರ್‌ಸಿಬಿ

ಭಾರತದಲ್ಲಿ ಆರಂಭವಾಗಿದ್ದ ಐಪಿಎಲ್ ಕೋವಿಡ್-19 ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಆರಂಭಿಕ ಹಂತದಲ್ಲಿ 29 ಪಂದ್ಯಗಳು ನಡೆದಿದ್ದವು. ಇನ್ನುಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಆರಂಭಿಕ ಹಂತದ ಪಂದ್ಯಗಳು ಮುಗಿಯುವಾಗ ಅಂಕಪಟ್ಟಿಯಲ್ಲಿ ಆರ್‌ಸಿಬಿ 3ನೇ ಸ್ಥಾನದಲ್ಲಿತ್ತು. 7 ಪಂದ್ಯಗಳನ್ನಾಡಿದ್ದ ಆರ್‌ಸಿಬಿ 5 ಗೆಲುವು, 2 ಸೋಲಿನೊಂದಿಗೆ 10 ಅಂಕ ಕಲೆ ಹಾಕಿ 3ನೇ ಸ್ಥಾನದಲ್ಲಿತ್ತು. ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇದ್ದವು. ಹೀಗಾಗಿ ಈ ಬಾರಿ ಫೈನಲ್‌ ಪ್ರವೇಶಿಸಲು ಮತ್ತು ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಅವಕಾಶವಿದೆ. ಗ್ಲೆನ್ ಮ್ಯಾಕ್ಸ್‌ವೆಲ್‌ ಕೂಡ ಆರ್‌ಸಿಬಿ ಸೇರಿಕೊಂಡಿರುವುದರಿಂದ ತಂಡದ ಬಲ ಹೆಚ್ಚಿದೆ. ಆರ್‌ಸಿಬಿ ಮೊದಲ ಪಂದ್ಯವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ.ಕಪ್‌ ಗೆಲ್ಲದ ತಂಡಗಳ ಸಾಲಿನಲ್ಲಿರುವ ಆರ್‌ಸಿಬಿಗೆ ಈ ಸಾರಿ ಕಪ್‌ ಗೆಲ್ಲಲು ಉತ್ತಮ ಅವಕಾಶವಿದೆ.

IPL ನಲ್ಲಿ 100 ಕೋಟಿ ಕ್ಲಬ್ ಸೇರಿ ಶೈನ್ ಆದ ಆಟಗಾರರು ಇವರೇ ನೋಡಿ | Oneindia Kannada
ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಳಾಪಟ್ಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಳಾಪಟ್ಟಿ

* ಸೆಪ್ಟೆಂಬರ್ 20: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್, ರಾತ್ರಿ 7.30
* ಸೆಪ್ಟೆಂಬರ್ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ರಾತ್ರಿ 7.30
* ಸೆಪ್ಟೆಂಬರ್ 26: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, ರಾತ್ರಿ 7.30 ಕ್ಕೆ
* ಸೆಪ್ಟೆಂಬರ್ 29: ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಂಜೆ 7.30 ಕ್ಕೆ
* ಅಕ್ಟೋಬರ್ 3: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಧ್ಯಾಹ್ನ 3.30 ಕ್ಕೆ
* ಅಕ್ಟೋಬರ್ 6: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಸಂಜೆ 7.30 ಕ್ಕೆ
* ಅಕ್ಟೋಬರ್ 8: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್, ಸಂಜೆ 7.30 ಕ್ಕೆ

Story first published: Saturday, September 18, 2021, 18:57 [IST]
Other articles published on Sep 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+