Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಪಂತ್ ಸೋಲಿನ ನೋವಿಗೆ ಮಿಡಿದ ವಿರಾಟ್, ಸಿರಾಜ್: ವಿಡಿಯೋ

IPL 2021: Virat Kohli, Mohammed Siraj console DC skipper Rishabh Pant after the match

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಘಾತಕಾರಿಯಾಗಿ ಸೋಲು ಕಂಡಿದೆ. ವಿರಾಟ್ ಕೊಹ್ಲಿ ಪಡೆ ನೀಡಿದ 172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ 170 ರನ್‌ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ನಾಯಕ ರಿಷಭ್ ಪಂತ್ ಹಾಗೂ ಶಿಮ್ರಾನ್ ಹೇಟ್ಮೇಯರ್ ಅರ್ಧ ಶತಕ ಬಾರಿಸಿ ಅಜೇವಾಗುಳಿದಿದ್ದರೂ ತಂಡಕ್ಕೆ ಗೆಲುವು ದಕ್ಕಿಸಲು ಸಾಧ್ಯವಾಗಲಿಲ್ಲ.

ಅಂತಿಮ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿಗೆ 14 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿ ರಿಷಭ್ ಪಂತ್ ಹಾಗೂ ಶಿಮ್ರಾನ್ ಹೇಟ್ಮೇಯರ್ ಇಬ್ಬರೂ ಭರ್ಜರಿಯಾಗು ಆಡುತ್ತಾ ಗೆಲುವಿನ ವಿಶ್ವಾಸವನ್ನು ಹೊಂದಿದ್ದರು. ಆದರೆ ಮೊಹಮ್ಮದ್ ಸಿರಾಜ್ ಅಂತಿಮ ಓವರ್‌ನಲ್ಲಿ ಮಾಡಿದ ಅದ್ಭುತ ಬೌಲಿಂಗ್‌ನಿಂದಾಗಿ ಡೆಲ್ಲಿಗೆ ಗೆಲುವು ಸಾಧ್ಯವಾಗಲಿಲ್ಲ.

ಅಂತಿಮ ಎರಡು ಎಸೆತಗಳಲ್ಲಿ ಎರಡು ಬೌಂಡರಿ ಸಿಡಿಸುವಲ್ಲಿ ಯಶಸ್ವಿಯಾದರು ಕೂಡ ಡೆಲ್ಲಿ ಪಡೆಯ ಗೆಲುವಿಗೆ ಅದು ಸಾಕಾಲಿಲ್ಲ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಒಂದು ರನ್‌ಗಳ ಅಲ್ಪ ಅಂತರದಿಂದ ಆಘಾತಕಾರಿಯಾಗಿ ಸೋಲು ಕಾಣಬೇಕಾಯಿತು.

ಈ ಫಲಿತಾಂಶದ ಬಳಿಕ ಒಂದೆಡೆ ಆರ್‌ಸಿಬಿ ಆಟಗಾರರು ಗೆಲುವಿನ ಸಂಭ್ರಮದಲ್ಲಿದ್ದರೆ ಡೆಲ್ಲಿ ನಾಯಕ ರಿಷಭ್ ಪಂತ್ ಹಾಗೂ ಹೇಟ್ಮೇಯರ್ ಆಘಾತಗೊಂಡಿದ್ದರು. ಆಗ ಆರ್‌ಸಿಬಿ ಆಟಗಾರರು ತೋರಿದ ಕ್ರೀಡಾಸ್ಪೂರ್ತಿ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಕ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್ ಡೆಲ್ಲಿ ನಾಯಕ ರಿಷಭ್ ಪಂತ್ ಹಾಗೂ ಶಿಮ್ರಾನ್ ಹೇಟ್ಮೇಯರ್ ಬಳಿ ತೆರಳಿ ಸ್ಪಂದಿಸಿದರು.

Story first published: Wednesday, April 28, 2021, 10:28 [IST]
Other articles published on Apr 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+