ಟ್ರೋಫಿ ಗೆದ್ದಿಲ್ಲ ಎಂಬ ಕಾರಣಕ್ಕೆ ಆರ್‌ಸಿಬಿ ತೊರೆಯುವ ಯೋಚನೆಯನ್ನು ಮಾಡಿಲ್ಲ: ವಿರಾಟ್ ಕೊಹ್ಲಿ

ಐಪಿಎಲ್ 14ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿದೆ. ಈ ರೋಚಕ ಹಣಾಹಣಿಗೂ ಮುನ್ನ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಫ್ರಾಂಚೈಸಿ ಜೊತೆಗಿನ ವಿಶೇಷ ಬಾಂಧ್ಯವ್ಯದ ಬಗ್ಗೆ ಮಾತುಗಳನ್ನು ಆಡಿದ್ದಾರೆ.

32ರ ಹರೆಯದ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಪರವಾಗಿ ಐಪಿಎಲ್ ಆರಂಭಿಕ ಆವೃತ್ತಿಯಿಂದಲೂ ಕಣಕ್ಕಿಳಿಯುತ್ತಿದ್ದಾರೆ. ಐಪಿಎಲ್ ಮೊದಲ ಆವೃತ್ತಿಯಿಂದ ಈವರೆಗಿನ ಎಲ್ಲಾ ಆವೃತ್ತಿಯಲ್ಲೂ ಒಂದೇ ತಂಡವನ್ನು ಪ್ರತಿನಿಧಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ ಕೊಹ್ಲಿ ಆರ್‌ಸಿಬಿ ತಂಡದಿಂದ ಹೊರಬಂದು ಬೇರೆ ತಂಡದ ಪರವಾಗಿ ಆಡಬೇಕು ಎಂಬ ಮನಸ್ಥಿತಿ ಒಂದು ಬಾರಿಯೂ ನನ್ನ ತಲೆಗೆ ಬಂದಿಲ್ಲ ಎಂದು ಹೇಳಿದ್ದಾರೆ.

ಐಪಿಎಲ್ ಆರಂಭಿಕ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದು ಬೀಗುತ್ತಾ ಬೆಂಗಳೂರು?

2013 ರ ಆವೃತ್ತಿಯಿಂದ ಆರ್‌ಸಿಬಿ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ, ಆರ್‌ಸಿಬಿಯಲ್ಲಿ ದೊರೆತ ಗೌರವ, ಕಾಳಜಿ ಮತ್ತು ಸಂತೋಷವನ್ನು ಬೇರೆಲ್ಲಿಯೂ ಮರುಸೃಷ್ಟಿಸಲು ಸಾಧ್ಯವಿಲ್ಲ ಎಂದು ಹೇಳಿದರು. ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಇತರ ಕೆಲವು ತಂಡಗಳಿವೆ. ಆದರೆ ನಾವು ಒಂದು ನಿರ್ದಿಷ್ಟ ಬ್ರಾಂಡ್ ಕ್ರಿಕೆಟ್ ಅನ್ನು ಆಡುವ ಕಾರಣ ನಾವು ಆಡುವಲ್ಲೆಲ್ಲಾ ಸಾಕಷ್ಟು ಬೆಂಬಲ ಮತ್ತು ಮೆಚ್ಚುಗೆಯನ್ನು ಪಡೆಯುವ ತಂಡವಾಗಿದ್ದೇವೆ. ನಾವು ನಮ್ಮ ಹೃದಯವನ್ನು ಆಡುತ್ತೇವೆ. ಈ ಹಿಂದೆ ಅನೇಕ ಕಷ್ಟಕರ ಸಂದರ್ಭಗಳಲ್ಲಿ ತಂಡದ ಸಂಯೋಜನೆಯಲ್ಲಿ ಕೊರತೆ ಆಗಿರಬಹುದು. ಆದರೆ ಉತ್ಸಾಹ, ಬದ್ಧತೆ ಹಾಗೂ ತೀವ್ರತೆಯ ಕೊರತೆ ಯಾವತ್ತಿಗೂ ಇರಲಿಲ್ಲ" ಎಂದಿ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಐಪಿಎಲ್ : ಕಳೆದ ಬಾರಿ ಅತಿ ಹೆಚ್ಚು ಅರ್ಧ ಶತಕ ಬಾರಿಸಿದವರ ಪಟ್ಟಿ

"ಮೈದಾನದಲ್ಲಿ ಸಾಕಷ್ಟು ಸಂತಸದ ಕ್ಷಣಗಳನ್ನು ಕಂಡಿದ್ದೇವೆ. ಓರ್ವ ವ್ಯಕ್ತಿಯಾಗಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಎಂಬ ಕಾರಣಕ್ಕೆ ಈ ವ್ಯವಸ್ಥೆಯಿಂದ ದೂರ ಹೋಗಬೇಕು ಎಂದು ಎಂದಿಗೂ ನಾನು ಭಾವಿಸಿಲ್ಲ" ಎಂದು ವಿರಾಟ್ ಕೊಹ್ಲಿ ಆರ್‌ಸಿಬಿ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಚೆನ್ನೈನಲ್ಲಿ ಶುಕ್ರವಾರ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಸಂಜೆ 7:30ಕ್ಕೆ ಆರಂಭವಾಗಲಿದೆ. ಎರಡು ತಂಡಗಳು ಕೂಡ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಪಡೆಯಬೇಕೆಂಬ ಉತ್ಸಾಹದಲ್ಲಿದೆ.

For Quick Alerts
ALLOW NOTIFICATIONS
For Daily Alerts
Story first published: Friday, April 9, 2021, 14:56 [IST]
Other articles published on Apr 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X