ಮ್ಯಾಕ್ಸ್‌ವೆಲ್ ಆರ್‌ಸಿಬಿಯಲ್ಲಿ ಆಡುವ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ

ಚೆನ್ನೈ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಹೆಚ್ಚಿನವರ ಚಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ರದರ್ಶನದ ಮೇಲಿದೆ. ಯಾಕೆಂದರೆ ಈ ಬಾರಿ ಆರ್‌ಸಿಬಿಯಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ. ಗಮನಾರ್ಹ ಆಟಗಾರರು ಈ ಬಾರಿ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ.
ಈ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿಯಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ಆಟಗಾರನೆಂದರೆ ಅದು ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್. ಕಳೆದ ಸೀಸನ್‌ನಲ್ಲಿ ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್)ನಲ್ಲಿದ್ದ ಮ್ಯಾಕ್ಸ್‌ವೆಲ್ ಅವರನ್ನು ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ 14.25 ಕೋಟಿ ರೂ.ಗೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.
ಆರ್‌ಸಿಬಿ ತಂಡದಲ್ಲಿದ್ದು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಮೂಡಿಸಿರುವ ಗ್ಲೆನ್ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ನಮಗೆ ಮ್ಯಾಕ್ಸ್‌ವೆಲ್ ನಮ್ಮ ತಂಡದಲ್ಲಿರಬೇಕಾಗಿತ್ತು, ವಿಶೇಷವಾಗಿ ಈ ಬಾರಿಯ ಹರಾಜಿನ ವೇಳೆ ಅವರನ್ನು ಗುರಿಯಾಗಿಸಲು ನಾವು ಬಯಸಿದ್ದೆವು,' ಎಂದು ಐಪಿಎಲ್ ಆರಂಭಕ್ಕೂ ಮುನ್ನ ಮಾತನಾಡಿರುವ ಕೊಹ್ಲಿ ಹೇಳಿದ್ದಾರೆ.
'ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿಗೆ ಕರೆತರಲೇಬೇಕು ಎಂಬ ಯೋಜನೆಯಲ್ಲಿ ನಾವಿದ್ದೆವು. ಹರಾಜಿನ ವೇಳೆ ನಿಮ್ಮ ಎಣಿಕೆಯಂತೆಯೇ ಸಂಗತಿಗಳು ನಡೆಯತೊಡಗಿದಾಗ ಸಹಜವಾಗೇ ನಿಮಗೆ ಹೆಚ್ಚು ಖುಷಿಯಾಗುತ್ತದೆ. ನಮಗೂ ಹೀಗೇ ಅನ್ನಿಸಿತ್ತು. ಮ್ಯಾಕ್ಸ್‌ವೆಲ್ ಪ್ರದರ್ಶನದ ಬಗ್ಗೆ ನಮಗೆ ನಂಬಿಕೆಯಿದೆ,' ಎಂದು ಕೊಹ್ಲಿ ಮ್ಯಾಕ್ಸ್‌ವೆಲ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications