For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯ ಸ್ಫೂರ್ತಿಯ ಮಾತುಗಳಿಗೆ ಭರ್ಜರಿ ಚಪ್ಪಾಳೆ: ವಿಡಿಯೋ

IPL 2021: Virat Kohlis riveting speech receives a huge round of applause

ಚೆನ್ನೈ: ನಗದು ಶ್ರೀಮಂತ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗಾಗಿ ಎಲ್ಲಾ ಎಂಟು ಫ್ರಾಂಚೈಸಿಗಳು ಸಜ್ಜಾಗಿವೆ. ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಸೆಣಸಾಡಲಿರುವುದರಿಂದ ಟೂರ್ನಿ ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಬಾರಿ ಮಿನಿ ಹರಾಜು ನಡೆದಿರುವುದರಿಂದ ಎಲ್ಲಾ ತಂಡಗಳಲ್ಲೂ ಸಣ್ಣಪುಟ್ಟ ಬದಲಾವಣೆಗಳಾಗಿವೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿರುವ ಹೊಸ ಆಟಗಾರರನ್ನು ಮತ್ತು ಹಳೆ ಆಟಗಾರರನ್ನು ನಾಯಕ ವಿರಾಟ್ ಕೊಹ್ಲಿ ಈ ಸೀಸನ್‌ಗಾಗಿ ಆದರದಿಂದ ಬರಮಾಡಿಕೊಂಡಿದ್ದಾರೆ.

ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯಿಟ್ಟುಕೊಂಡಿರುವ ಆರ್‌ಸಿಬಿಯಿಂದ ಕೊಹ್ಲಿ ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ. 'ಈ ವರ್ಷ ಕಳೆದ ವರ್ಷಕ್ಕಿಂತ ತಂಡ ಇನ್ನೂ ಬಲಿಷ್ಠವಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ನಾವು ಎಂಜಾಯ್ ಮಾಡೋಣ. ಅದರ ಜೊತೆ ಜೊತೆಯಲ್ಲೇ ಮೈದಾನದಲ್ಲಿ ಶ್ರಮವಹಿಸಿ ದುಡಿಯೋಣ. ನಾವೆಲ್ಲ ಒಂದಾಗಿ ಒಂದು ನಂಬಿಕೆಯಿಟ್ಟರೆ ಈ ವರ್ಷ ಏನೋ ಹೊಸದು ನಡೆಯಲಿದೆ,' ಎಂದು ಕೊಹ್ಲಿ ವಿಡಿಯೋದಲ್ಲಿ ಹೇಳಿದ್ದಾರೆ.

ಐಪಿಎಲ್ ಟ್ರೋಫಿ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ತಂಡಗಳ ಸಾಲಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಇದೆ. ಈ ವರ್ಷ ಆರ್‌ಸಿಬಿಗೆ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ನ್ಯೂಜಿಲೆಂಡ್‌ನ ಫಿನ್ ಅಲೆನ್ ಮೊದಲಾದ ಹೊಸ ಮುಖಗಳಿರುವುದರಿಂದ ತಂಡದ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿದೆ.

Story first published: Thursday, April 8, 2021, 17:55 [IST]
Other articles published on Apr 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+