ಐಪಿಎಲ್ 2021: ಮನೀಶ್ ಪಾಂಡೆಗೆ ಪರೋಕ್ಷವಾಗಿ ತಿವಿದರಾ ವೀರೇಂದ್ರ ಸೆಹ್ವಾಗ್!

ಐಪಿಎಲ್ 14ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 10 ರನ್‌ಗಳ ಅಂತರದಿಂದ ಕೊಲ್ಕತ್ತಾ ನೈಟ್ ರೈಡರ್ಸ್‌ಗೆ ಶರಣಾಗಿದೆ. ಈ ಪಂದ್ಯದ ಬಳಿಕ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್‌ವೊಂದನ್ನು ಮಾಡಿದ್ದು ಗಮನಸೆಳೆದಿದೆ. ಐಪಿಎಲ್‌ನಲ್ಲಿ ತಂಡಗಳು ಗೆಲುವಿನ ರುಚಿ ಸವಿಯಬೇಕಾದರೆ ಬ್ಯಾಟಿಂಗ್‌ನಲ್ಲಿ ಅಗತ್ಯವಾದ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ಸನ್‌ರೈಸರ್ಸ್‌ಗೆ 188 ರನ್‌ಗಳ ಗುರಿಯನ್ನು ನೀಡಿತ್ತು. ಇದನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಜಾನಿ ಬೈರ್‌ಸ್ಟೋವ್ ಹಾಗೂ ಮನೀಶ್ ಪಾಂಡೆ ಅರ್ಧ ಶತಕದ ಕೊಡುಗೆ ನೀಡಿದರಾದರೂ ತಂಡ 177 ರನ್‌ಗಳಿಸಲಷ್ಟೇ ಶಕ್ತವಾಯಿತು. ಅಂತಿಮ ಹಂತದಲ್ಲಿ ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಅಬ್ದುಲ್ ಸಮದ್ ಎರಡು ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವಿನ ಸಾಧ್ಯತೆಯನ್ನು ತೆರೆದಿಟ್ಟರಾದರೂ ಆಂಡ್ರೆ ರಸ್ಸೆಲ್ ವಿಕೆಟ್‌ಅನ್ನು ಕಳೆದುಕೊಂಡಿದ್ದು ಹೈದರಾಬಾದ್ ಸೋಲಿನತ್ತ ಮುಖಮಾಡುವಂತಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಸೆಹ್ವಾಗ್ ಅಗತ್ಯವಿರುವ ಸಂದರ್ಭಗಳಲ್ಲಿ ಬ್ಯಾಟ್ಸ್‌ಮನ್‌ಗಳು ರನ್‌ವೇಗವನ್ನು ಹೆಚ್ಚಿಸುವತ್ತ ಗಮನ ನೀಡಬೇಕು. ಇದರ ಜೊತೆಗೆ ತಂಡದಲ್ಲಿರುವ ಪವರ್‌ಹಿಟ್ಟರ್‌ಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ. ಈ ಮಾತುಗಳು ಮನೀಶ್ ಪಾಂಡೆ ಅವರ ಬ್ಯಾಟಿಂಗ್ ಶೈಲಿಗೆ ಸೆಹ್ವಾಗ್ ಪರೋಕ್ಷವಾಗಿ ಕುಟುಕಿರುವಂತಿದೆ.
"ದೀರ್ಘ ಕಾಲ ಬ್ಯಾಟಿಂಗ್ ಮಾಡುವ ಆಟಗಾರರು ಬ್ಯಾಟಿಂಗ್ ವೇಗವನ್ನು ಹೆಚ್ಚಿಸದಿರುವುದು ಕಷ್ಟವನ್ನುಂಟು ಮಾಡುತ್ತದೆ. ಅಂತಿಮ ಹಂತದಲ್ಲಿ ಕಡಿಮೆ ಎಸೆತಗಳು ಹಿಟ್ಟರ್‌ಗಳು ಅಥವಾ ಫಿನಿಷರ್‌ಗಳಿಗೆ ದೊರೆಯುವಾಗ ಅವರ ವಿಕೆಟ್ ಕಳೆದುಕೊಳ್ಳುತ್ತದೆ. ಇದು ಕಳೆದ ವರ್ಷವೂ ನಡೆದಿದ್ದು. ಅಂಥ ತಂಡಗಳು ಯಾವಾಗಲೂ ಸಂಕಷ್ಟಕ್ಕೆ ಒಳಗಾಗುತ್ತದೆ" ಎಂದಿದ್ದಾರೆ ಸೆಹ್ವಾಗ್.
ಇದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಸೋಲಿಗೆ ಕಾರಣವನ್ನು ನೀಡಿದ್ದರು. ವಾರ್ನರ್ ಪ್ರಕಾರ ಬೌಲಿಂಗ್ ವಿಭಾಗದಲ್ಲಿ ಓವರ್‌ನ ಆರಂಭಿಕ ಎಸೆತಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದು ಹಾಗೂ ಅಂತಿಮ ಹಂತದಲ್ಲಿ ಹೆಚ್ಚಿನ ರನ್ ನೀಡಿದ್ದು ತಂಡದ ಸೋಲಿಗೆ ಕಾರಣವಾಯಿತು ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications