ಐಪಿಎಲ್ 2021: ಬಿಸಿಬಿಸಿ ಹರಾಜು ನಡೆಸಿಕೊಡುವವರು ಯಾರು ಗೊತ್ತಾ?

14ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಹರಾಜಿನಲ್ಲಿ ಯಾರು ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಇದಕ್ಕೆ ಕೆಲವೇ ಸಮಯಗಳಲ್ಲಿ ಉತ್ತರ ದೊರೆಯಲಿದೆ. ಆದರೆ ಈ ಪ್ರತಿಷ್ಟಿತ ಹರಾಜು ಪ್ರಕ್ರಿಯೆ ನಡೆಸಿಕೊಡುವವರು ಯಾರು ಎಂಬ ಕುತೂಹಲಕ್ಕೆ ಈ ವರದಿ ಉತ್ತರವನ್ನು ನೀಡಲಿದೆ.
ಈ ಬಾರಿಯ ಈ ಬಿಸಿಬಿಸಿ ಹರಾಜು ಪ್ರಕ್ರಿಯೆ ನಡೆಸಿಕೊಡುವ ವ್ಯಕ್ತಿ 62 ವರ್ಷದ ವ್ಯಕ್ತಿ ಹಗ್ ಎಡ್ಮೆಂಡ್. ಇಂತಾ ಹರಾಜು ಪ್ರಕ್ರಿಯೆಗೆ ಎಡ್ಮೆಂಡ್ ವಿಶ್ವವಿಖ್ಯಾತಿಯನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ 12ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಮೊದಲ ಬಾರಿಗೆ ಹಗ್ ಎಡ್ಮೆಂಡ್ ಪಾಲ್ಗೊಂಡಿದ್ದರು.
ಈ ಹಿಂದೆ ರಿಚರ್ಡ್ ಮ್ಯಾಡ್ಲೆ ಅವರು ಸುಮಾರು 10 ವರ್ಷಗಳಿಂದಲೂ ಐಪಿಎಲ್ ಹರಾಜು ನಡೆಸಿದ ಖ್ಯಾತಿಯಿದ್ದವರು. ಆದರೆ 12ನೇ ಆವೃತ್ತಿಯಲ್ಲಿ ಬಿಸಿಸಿಐ, ಹರಾಜುದಾರರಾಗಿ ಮ್ಯಾಡ್ಲೆ ಬದಲಿಗೆ ಎಡ್ಮೆಂಡ್ ಅವರನ್ನು ಹೆಸರಿಸಿತ್ತು. ಈ ಬದಲಾವಣೆ ಕ್ರಿಕೆಟ್ ಬಗ್ಗೆ ಅರಿವಿರುವ ಹಲವಾರು ಮಂದಿಗೆ ಅಚ್ಚರಿ ಮೂಡಿಸಿತ್ತು.
ಎಡ್ಮಂಡ್ ಹಗ್ ಮೊದಲಬಾರಿಗೆ ಹರಾಜು ನಡೆಸಿಕೊಟ್ಟಿದ್ದು 1984 ರಲ್ಲಿ. ಕಳೆದ ನಾಲ್ಕು ದಶಕಗಳಲ್ಲಿ ಹರಾಜು ಪ್ರಕ್ರಿಯೆಗಳನ್ನು ನಿರಂತರವಾಗಿ ನಡೆಸಿಕೊಡುತ್ತಿದ್ದಾರೆ. 'ಕ್ರಿಸ್ಟಿ' ಎಂಬ ಹರಾಜು ಕಂಪನಿಯಲ್ಲಿ 38 ವರ್ಷ ಕಾರ್ಯ ನಿರ್ವಹಿಸಿ ಇದೀಗ ಸ್ವತಂತ್ರವಾಗಿ ಜಗತ್ತಿನಾದ್ಯಂತ ಹರಾಜು ನಡೆಸಿಕೊಡುತ್ತಿದ್ದಾರೆ.
30 ವರ್ಷಗಳ ಸುದೀರ್ಘ ಕಾಲ ಹರಾಜುಗಾರನಾಗಿ ದುಡಿದ ಎಡ್ಮೆಡ್ಸ್ ಸುಮಾರು 2,500 ಹರಾಜು ಪ್ರಕ್ರಿಯೆಗಳನ್ನು ನಡೆಸಿಕೊಟ್ಟಿದ್ದಾರೆ. ಈ ವೇಳೆ 2.7 ಬಿಲಿಯನ್ ಪೌಂಡ್ಸ್ ಗೆ ಹರಾಜು ನಡೆಸಿದ್ದು ವಿಶ್ವದ ಅತ್ಯಧಿಕ ಮೊತ್ತವಾಗಿ ಗುರುತಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications