ಐಪಿಎಲ್: ಇಷ್ಟು ವರ್ಷಗಳಲ್ಲಿ ಕಳಪೆ ಟೀಮ್ ಆರ್‌ಸಿಬಿ ಅಲ್ಲವೇ ಅಲ್ಲ!

ಇಂಡಿಯನ್ ಪ್ರೀಮಿಯರ್ ಲೀಗ್ ಸನಿಹ ಬಂತೆಂದರೆ ಸಾಕು ಕರ್ನಾಟಕದ ಟ್ರೋಲ್ ಪೇಜ್ ಗಳಿಂದ ಹಿಡಿದು ನ್ಯಾಷನಲ್ ಟ್ರೋಲ್ ಪೇಜ್‌ಗಳ ವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟ್ರೋಲ್ ಮಾಡುತ್ತಿರುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂತ ಕಳಪೆ ತಂಡ ಮತ್ತೊಂದಿಲ್ಲ ಎಂದೆಲ್ಲಾ ಟ್ರೋಲ್ ಮಾಡಲಾಗುತ್ತದೆ.

ಈ ಬಾರಿಯ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಇದೇ ತಿಂಗಳ 9ರಂದು ಮೊದಲ ಪಂದ್ಯ ನಡೆಯಲಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೂ ಈ ಬಾರಿಯ ಐಪಿಎಲ್ ಟೂರ್ನಿ ಆರಂಭವಾಗಿಯೇ ಇಲ್ಲ ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟ್ರೋಲ್ ಮಾಡಲಾಗುತ್ತಿದೆ. ಆದರೆ ಸತ್ಯಾಂಶವನ್ನು ಹುಡುಕಿ ನೋಡಿದಾಗ ನಮಗೆ ಸಿಗುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ ಕಳಪೆ ತಂಡ ಅಲ್ಲವೇ ಅಲ್ಲ ಎಂಬ ಮಾಹಿತಿ.

ಹೌದು ಈಗಾಗಲೇ 13 ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳು ನಡೆದಿವೆ. ಇಷ್ಟು ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಲ್ಲಿ ಭಾಗವಹಿಸಿದೆ. ಇಷ್ಟು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಪ್ರದರ್ಶನವನ್ನು ನೀಡಿರುವುದು ಕೇವಲ ಎರಡೇ ಎರಡು ಆವೃತ್ತಿಗಳಲ್ಲಿ ಮಾತ್ರ. ಹೌದು 2017 ಮತ್ತು 2019ರ ಐಪಿಎಲ್ ಆವೃತ್ತಿಗಳಲ್ಲಿ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡು ಕಳಪೆ ಟೀಮ್ ಎನಿಸಿಕೊಂಡಿತ್ತು.

ಆದರೆ ಪಂಜಾಬ್ ಕಿಂಗ್ಸ್ ತಂಡ ಇದುವರೆಗೂ ನಡೆದಿರುವ 13 ಐಪಿಎಲ್ ಆವೃತ್ತಿಗಳಲ್ಲಿ 3 ಬಾರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಅಲಂಕರಿಸಿದೆ. ಹಾಗೂ ಡೆಲ್ಲಿ ತಂಡ 4 ಬಾರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡು ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಳಪೆ ಪ್ರದರ್ಶನ ನೀಡಿದ ತಂಡ ಎನಿಸಿಕೊಂಡಿದೆ. ಈ ಎರಡೂ ತಂಡಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂತ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಕಳಪೆ ಪ್ರದರ್ಶನವನ್ನು ನೀಡಿವೆ. ಆದರೂ ಸಹ ನೆಟ್ಟಿಗರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಾಲನ್ನು ಎಳೆಯುವುದು ಎಷ್ಟು ಸರಿ ಎನಿಸಿಬಿಡುತ್ತದೆ.

2009, 2011 ಮತ್ತು 2016 ಈ ಮೂರೂ ಆವೃತ್ತಿಗಳಲ್ಲಿಯೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿ ಕೊನೆಯ ಕ್ಷಣದಲ್ಲಿ ಸೋಲನ್ನನುಭವಿಸಿತ್ತು. ಆದರೆ ಪಂಜಾಬ್ ಮತ್ತು ಡೆಲ್ಲಿ ತಂಡಗಳು ತಲಾ ಒಂದು ಬಾರಿ ಮಾತ್ರ ಐಪಿಎಲ್ ಇತಿಹಾಸದಲ್ಲಿ ಫೈನಲ್ ಪ್ರವೇಶವನ್ನು ಮಾಡಿ ಸೋತಿವೆ. 2014ರಲ್ಲಿ ಪಂಜಾಬ್ ತಂಡ ಫೈನಲ್ ಪ್ರವೇಶ ಮಾಡಿ ಸೋಲನ್ನು ಅನುಭವಿಸಿತ್ತು ಹಾಗೂ 2020ರಲ್ಲಿ ಡೆಲ್ಲಿ ಫೈನಲ್ ಪ್ರವೇಶ ಮಾಡಿ ಸೋಲುಂಡಿತ್ತು.

ಈ ಅಂಶಗಳನ್ನೆಲ್ಲಾ ಗಮನಿಸಿದರೆ ಬೆಂಗಳೂರು ತಂಡಕ್ಕಿಂತ ಡೆಲ್ಲಿ ಮತ್ತು ಪಂಜಾಬ್ ತಂಡಗಳು ಅತಿ ಕಳಪೆ ತಂಡಗಳಾಗಿದ್ದು ಇವನ್ನೆಲ್ಲಾ ಬಿಟ್ಟು 3 ಬಾರಿ ಫೈನಲ್ ಪ್ರವೇಶಿಸಿ ಕೇವಲ 2 ಬಾರಿ ಮಾತ್ರ ಕಳಪೆ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಯಾಕೆ ಟ್ರೋಲ್ ಮಾಡಲಾಗುತ್ತದೆ ಎಂಬುದು ಪ್ರತಿಯೊಬ್ಬ ಆರ್‌ಸಿಬಿ ಅಭಿಮಾನಿಯ ಮನದಾಳದ ಪ್ರಶ್ನೆ.

For Quick Alerts
ALLOW NOTIFICATIONS
For Daily Alerts
Story first published: Wednesday, April 7, 2021, 19:03 [IST]
Other articles published on Apr 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X