ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆ ಸಂದೇಶ ನೀಡಿದ ಹಾರ್ದಿಕ್ ಪಾಂಡ್ಯ

ದೇಶದಲ್ಲಿ ಎರಡನೇ ಅಲೆಯ ಕೊರೊನಾ ವೈರಸ್ ಇನ್ನಿಲ್ಲದಂತೆ ಕಾಡುತ್ತಿದೆ. ಈ ಹಂತದಲ್ಲಿ ಭಾರೀ ಪ್ರಮಾಣದಲ್ಲಿ ಕೊರನಾ ವೈರಸ್ ಏರಿಕೆಯಾಗುತ್ತಿದ್ದು ಜನರನ್ನು ಭೀತಿಯಿಂದಲೇ ಓಡಾಡುವಂತೆ ಮಾಡಿದೆ. ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಗ್ಗೆ ಮಾತನಾಡುತ್ತಾ ನಾಗರೀಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
"ನಾವು ಇನ್ನು ಕೂಡ ನಮ್ಮ ಕಠಿಣ ಹೋರಾಟವನ್ನು ಮುಂದುವರಿಸಬೇಕಿದೆ. ನಮ್ಮ ರಕ್ಷಣೆಗೆ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ನಾವು ಮುಂದುವರಿಸಬೇಕಿದೆ. ಎಲ್ಲಾ ಅಗತ್ಯ ಮುನ್ನೆಚ್ಚರಿಕೆಯನ್ನು ದಯವಿಟ್ಟು ಅನುಸರಿಸಿ. ಮಾಸ್ಕ್ ಧರಿಸಿಕೊಂಡು, ಶುಚಿತ್ವ ಕಾಪಾಡಿಕೊಳ್ಳಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ತೀರಾ ಅಗತ್ಯವಾಗಿರುವುದು ಹೊರತುಪಡಿಸಿ ಮನೆಯಿಂದ ಹೊರಗಡೆ ಬರಬೇಡಿ" ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಸೋಮವಾರ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣ ಹೊಸ ದಾಖಲೆಯನ್ನು ಬರೆದಿದೆ. 24 ಗಂಟೆಗಳ ಅಂತರದಲ್ಲಿ ಭಾರತದಲ್ಲಿ ಒಟ್ಟು 3,52,991 ಹೊಸ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಈ ಅವಧಿಲ್ಲಿ 2812 ಒಂದು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೊರೊನಾ ವೈರಸ್‌ಗೆ ತುತ್ತಾದವರ ಸಂಖ್ಯೆ 28,13,658ಕ್ಕೆ ಏರಿಕೆಯಾಗಿದೆ.
ಈ ಮಧ್ಯೆ ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದ ಕೆಲ ಆಟಗಾರರು ತವರಿಗೆ ವಾಪಾಸಾಗಿದ್ದಾರೆ. ಇಂಗ್ಲೆಂಡ್ ಕ್ರಿಕೆಟಿಗ ಲಿಯಾನ್ ಲಿವಿಂಗ್ಸ್ಟನ್, ಆಸಿಸ್ ಕ್ರಿಕೆಟರ್‌ಗಳಾದ ಆಂಡ್ರೋ ಟೈ, ಆಡಂ ಜಂಪಾ, ಕೇನ್ ರಿಚರ್ಡ್ಸನ್ ವೈಯಕ್ತಿಕ ಕಾರಣಗಳನ್ನು ನೀಡಿ ತವರಿಗೆ ವಾಪಾಸಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications