ಐಪಿಎಲ್ 2021: ಯಶಸ್ವಿ ಜೈಸ್ವಾಲ್ ಬ್ಯಾಟ್‌ಗೆ ಎಂಎಸ್ ಧೋನಿ ಸಹಿ

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 2) ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 47ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದೂಬೆ ಅದ್ಭುತ ಪ್ರದರ್ಶನ ನೀಡಿದ್ದರು. ಜೈಸ್ವಾಲ್ 42 ಎಸೆತಗಳಲ್ಲಿ 64 ರನ್ ಗಳಿಸಿದ್ದರು. ದೂಬೆ 21 ಎಸೆತಗಳಲ್ಲಿ 50 ರನ್ ಬಾರಿಸಿದ್ದರು.
ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದೂಬೆ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಲೇ ರಾಜಸ್ಥಾನ್ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆ ಪಂದ್ಯದಲ್ಲಿ 7 ವಿಕೆಟ್ ಜಯ ಗಳಿಸಿತ್ತು. ಚೆನ್ನೈ ನೀಡಿದ್ದ 190 ರನ್‌ಗಳ ಗುರಿಯನ್ನು ಆರ್‌ಆರ್ ಚೇಸ್ ಮಾಡೋಕೆ ಸಾಧ್ಯವಾಗಿದ್ದು ಜೈಸ್ವಾಲ್, ದೂಬೆ ಪ್ರದರ್ಶನದಿಂದ. ಅದೂ ಕೂಡ 15 ಎಸೆತಗಳನ್ನು ಬಾಕಿ ಉಳಿಸಿ ಆರ್‌ಆರ್ ಪಂದ್ಯ ಗೆದ್ದಿತ್ತು.
"ವಿಕೆಟ್ ಕಡೆಗೆ ಗಮನ ಹರಿಸಲು ನಾನು ಮೊದಲು ಯೋಚಿಸಿದೆ. ನಮಗೆ 190 ರನ್‌ಗಳ ಗುರಿಯಿತ್ತು. ವಿಕೆಟ್ ಚೆನ್ನಾಗಿದೆ ಎಂದು ನನಗನ್ನಿಸಿತ್ತು. ಹೀಗಾಗಿ ನಾನು ಲೂಸ್ ಎಸೆತಗಳನ್ನು ದೊಡ್ಡ ಹೊಡೆತಗಳಿಗಾಗಿ ಬಳಸಿಕೊಂಡೆ. ಈ ಕಾರಣದಿಂದ ನಾವು ತಂಡಕ್ಕೆ ಉತ್ತಮ ಆರಂಭ ನೀಡಿದೆವು. ಇದೇ ಕಾರಣಕ್ಕೆ ನಾವು 190ರ ಗುರಿ ತಲುಪಲು ಸಾಧ್ಯವಾಯ್ತು.
"ಪಂದ್ಯದ ಬಳಿಕ ನನ್ನ ಬ್ಯಾಟಿಗೆ ಎಂಎಸ್ ಧೋನಿ ಸಹಿ ಹಾಕಿದರು. ಇದರಿಂದ ನನಗೆ ತುಂಬಾ ಖುಷಿಯಾಗಿದೆ," ಎಂದು ಜೈಸ್ವಾಲ್ ಹೇಳಿದ್ದಾರೆ. ಶನಿವಾರದ ಪಂದ್ಯದಲ್ಲಿ ಚೆನ್ನೈಯ ಋತುರಾಜ್ ಗಾಯಕ್ವಾಡ್ ಶತಕ ಬಾರಿಸಿದರು. ಇದು ಈ ಸೀಸನ್‌ನಲ್ಲಿ ದಾಖಲಾದ ಚೊಚ್ಚಲ ಶತಕ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications