Virat Kohli: ವೃತ್ತಿ ಜೀವನದ ಆ ಎರಡು ಸೋಲಿಗೆ ಕಣ್ಣೀರಿಟ್ಟಿದ್ದ ವಿರಾಟ್ ಕೊಹ್ಲಿ!
ಬೆಂಗಳೂರು, ಏಪ್ರಿಲ್ 5: ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಹಲವು ರೋಚಕ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಅದರಲ್ಲೂ ತಮ್ಮ ನಾಯಕತ್ವದಲ್ಲಿ ಕೊಹ್ಲಿ ರನ್ ಹೊಳೆಯನ್ನೇ ಹರಿಸಿ ದಾಖಲೆ ಬರೆದಿದ್ದಾರೆ.
ಆರು ತಿಂಗಳ ಹಿಂದೆ ಭಾರತ ಮೂರು ಮಾದರಿ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ತಾನರೂ ಆಗಿದ್ದರು. ಆದರೆ ಈಗ ವಿರಾಟ್ ಕೊಹ್ಲಿ ಎಲ್ಲ ಮಾದರಿ ಕ್ರಿಕೆಟ್‌ನ ಕೇವಲ ಆಟಗಾರನಾಗಿ ಮಾತ್ರ ತಂಡದಲ್ಲಿದ್ದಾರೆ. ಆದರೆ ಭಾರತೀಯ ಕ್ರಿಕೆಟ್‌ಗೆ ಅವರ ಕೊಡುಗೆಯನ್ನು ಈ ಶತಮಾನದಲ್ಲಿ ಮರೆಯಲು ಸಾಧ್ಯವಿಲ್ಲ.
ಟೀಂ ಇಂಡಿಯಾ ಮತ್ತು ಆರ್‌ಸಿಬಿ ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿ, ಈಗ ಕೇವಲ ಆಟಗಾರ. ಹಾಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಶತಕ ಬಾರಿಸಿ, ಶತಕದ ಬರವನ್ನು ಬೇಗ ನೀಗಿಸಿಕೊಳ್ಳಲಿ ಅಂತ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇದಾಗ್ಯೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ ಟೂರ್ನಿಗಳಲ್ಲಿನ ನಿರ್ಣಾಯಕ ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿತ್ತು. ಅದು ಇತ್ತೀಚೆಗಿನ ಟಿ20 ವಿಶ್ವಕಪ್‌ನಲ್ಲಿನ ಹೀನಾಯ ಸೋಲು, 2019ರ ವಿಶ್ವಕಪ್ನ ಸೆಮಿಫೈನಲ್ ಸೋಲು. ಅಷ್ಟೇ ಅಲ್ಲದೆ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಪರಾಜಯ. ಈ ಮೂರು ಸೋಲುಗಳಿಗೆ ಸ್ವತಃ ವಿರಾಟ್ ಕೊಹ್ಲಿಯೇ ಸಾಕ್ಷಿಯಾಗಿದ್ದರು. ಆದರೆ ಈ ಎಲ್ಲಾ ಸೋಲುಗಳಿಗಿಂತ ತನ್ನನ್ನು ಕಾಡಿದ ಸೋಲುಗಳ ಬಗ್ಗೆ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
"ತನ್ನ ವೃತ್ತಿ ಜೀವನದಲ್ಲಿ ಎರಡು ಸೋಲುಗಳು ನನಗೆ ಬಹಳ ನೋವನ್ನುಂಟು ಮಾಡಿದವು. ಆ ಸೋಲಿಗೆ ನಾನು ಕಣ್ಣೀರಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆ ಎರಡು ಸೋಲುಗಳಿಂದ ನನ್ನ ಹೃದಯವೇ ಒಡೆದು ಹೋಯಿತು," ಎಂದಿದ್ದಾರೆ.

2016ರ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲು
2016ರ ಟಿ20 ವಿಶ್ವಕಪ್ ಎರಡನೇ ಸೆಮಿಫೈನಲ್ನಲ್ಲಿ ಭಾರತ- ವೆಸ್ಟ್ ಇಂಡೀಸ್ ತಂಡಗಳು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 2 ವಿಕೆಟ್ಗೆ 192 ರನ್ ಬಾರಿಸಿತ್ತು. ವಿರಾಟ್ ಕೊಹ್ಲಿ 47 ಬಾಲ್ನಲ್ಲಿ 11 ಬೌಂಡರಿ, ಒಂದು ಸಿಕ್ಸರ್ ಸಹಿತ ಅಜೇಯ 89 ರನ್ ಬಾರಿಸಿದ್ದರು.
ಆದರೆ ವಿಂಡೀಸ್ ಇನ್ನು ಎರಡು ಬಾಲ್ ಬಾಕಿ ಇರುವಾಗಲೇ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತ್ತು. ತವರಿನಲ್ಲಿ ಸೆಮಿಸ್ ಸೋತಿದ್ದು ಭಾರೀ ನೋವಾಗಿತ್ತು ಅಂತ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

2016ರ ಐಪಿಎಲ್ ಫೈನಲ್‌ನಲ್ಲಿ ಆರ್ಸಿಬಿಗೆ ಸೋಲು
2016ರ ಸೀಸನ್ನಲ್ಲಿ ಆರ್‌ಸಿಬಿ ತಂಡ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿತ್ತು. ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟ್ ಮಾಡಿ 208 ರನ್ ಬಾರಿಸಿತ್ತು. 209 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ 10 ಓವರ್ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 114 ರನ್ ಗಳಿಸಿತ್ತು.
ಸ್ಫೋಟಕ ಆಟಗಾರ ಕ್ರಿಸ್ ಗೇಲ್ 76 ಮತ್ತು ರನ್ ಮಷಿನ್ ಕೊಹ್ಲಿ 54 ರನ್ ಬಾರಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ವಿಫಲವಾಗಿದ್ದರಿಂದ ಆರ್‌ಸಿಬಿ 200 ರನ್ ಗಳಿಸಿ 8 ರನ್ನಿಂದ ವಿರೋಚಿತ ಸೋಲು ಅನುಭವಿಸಿತು.
ಇದು ನನ್ನ ಬದುಕನಲ್ಲೇ ಅಂತ್ಯಂತ ದುಃಖದ ಸೋಲು ಎಂದು ವಿರಾಟ್ ಕೊಹ್ಲಿ ಕಣ್ಣೀರಿಟ್ಟಿದ್ದಾರೆ. 2016ರ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ, ಒಂದೇ ಆವೃತ್ತಿಯ ಐಪಿಎಲ್‌ನಲ್ಲಿ 4 ಶತಕ ಸಹಿತ 973 ರನ್ ಬಾರಿಸಿದ್ದರು.


ಕೊಹ್ಲಿ ನಾಯಕತ್ವದಲ್ಲಿ ICC & IPL ಟ್ರೋಫಿ ಗೆದ್ದಿಲ್ಲ
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಒಂದೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಹಾಗೆ ಟೀಂ ಇಂಡಿಯಾ ಐಸಿಸಿ ಟೂರ್ನಿಗಳ (ಟೆಸ್ಟ್ ಹೊರತುಪಡಿಸಿ) ಕಪ್ ಗೆದ್ದಿಲ್ಲ. ಕೊಹ್ಲಿ ನಾಯಕತ್ವದಲ್ಲಿ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಸೋತಿದ್ದ ಟೀಂ ಇಂಡಿಯಾ, 2021ರ ಟಿ20 ವಿಶ್ವಕಪ್ ಲೀಗ್ನಿಂದಲೇ ಹೊರಬಿದ್ದಿತ್ತು. ಆ ನೋವಿಗಿಂತ ಈ ಎರಡು ಪಂದ್ಯಗಳ ಸೋಲಿಗೆ ಕಿಂಗ್ ಕೊಹ್ಲಿ ಕಣ್ಣೀರು ಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications