MI vs RCB: ಸತತವಾಗಿ ಸೋತ ಮುಂಬೈ ತಂಡದಲ್ಲಿ ಈ 3 ಬದಲಾವಣೆ ಆಗದಿದ್ದರೆ ಆರ್‌ಸಿಬಿಗೆ ಗೆಲುವು ಖಚಿತ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ( ಏಪ್ರಿಲ್ 9 ) ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಅತಿಮುಖ್ಯದ್ದಾಗಿದೆ.
ಇನ್ನು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳೆರಡು ಟೂರ್ನಿಯಲ್ಲಿ ಇಲ್ಲಿಯವರೆಗೂ ತಲಾ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಉಳಿದೊಂದು ಪಂದ್ಯದಲ್ಲಿ ಸೋತಿದ್ದರೆ, ಮುಂಬೈ ಇಂಡಿಯನ್ಸ್ ಎಲ್ಲಾ 3 ಪಂದ್ಯಗಳಲ್ಲಿಯೂ ಸೋತು ಮುಖಭಂಗಕ್ಕೊಳಗಾಗಿದೆ. ಸದ್ಯ ಅಂಕಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಹೊರತುಪಡಿಸಿದರೆ ಅತಿ ಕಳಪೆ ಸ್ಥಾನವನ್ನು ಮುಂಬೈ ಇಂಡಿಯನ್ಸ್ ಪಡೆದುಕೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಈ ಪಂದ್ಯದಲ್ಲಾದರೂ ಜಯ ಸಾಧಿಸಿ ಗೆಲುವಿನ ಖಾತೆ ತೆರೆಯುವ ಯೋಜನೆಯಲ್ಲಿದೆ.
ಇನ್ನು ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿರುವುದು ಮುಂಬೈ ಇಂಡಿಯನ್ಸ್ ತಂಡ ತಲೆಕೆಡಿಸಿಕೊಳ್ಳಬೇಕಾದ ಅಂಶವಾಗಿದ್ದು, ಈ ಪಂದ್ಯದಿಂದ ಗ್ಲೆನ್ ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರುತ್ತಿರುವುದು ಮುಂಬೈ ಇಂಡಿಯನ್ಸ್‌ಗೆ ಸವಾಲಾಗಿ ಪರಿಣಮಿಸಲಿದೆ. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿರಯವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಗಬೇಕಿರುವ ಆ 3 ಬದಲಾವಣೆಗಳು ಯಾವುವು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

1. ರೋಹಿತ್ ಆರಂಭ ಈತ ಆರಂಭ ಮಾಡಬೇಕು
ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ ಮೊದಲ 3 ಪಂದ್ಯಗಳಲ್ಲಿಯೂ ಇಶಾನ್ ಕಿಶನ್ ಜೊತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇನ್ನು ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಆಡಿದ 3ನೇ ಪಂದ್ಯದಲ್ಲಿ ಕಣಕ್ಕಿಳಿದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದರು. ಹೀಗೆ ಸರಾಗವಾಗಿ ಬ್ಯಾಟ್ ಬೀಸುತ್ತಿರುವ ಸೂರ್ಯಕುಮಾರ್ ಯಾದವ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಇಶಾನ ಕಿಶನ್ ಜೊತೆ ಆರಂಭಿಸಬೇಕಾದ ಬದಲಾವಣೆ ತಂಡಕ್ಕೆ ಬೇಕಿದೆ. ಇತ್ತ ಆರಂಭಿಕನಾಗಿ ಕಣಕ್ಕಿಳಿದು ನೆಲಕಚ್ಚಿ ನಿಲ್ಲುವಲ್ಲಿ ಪದೇಪದೇ ವಿಫಲರಾಗುತ್ತಿರುವ ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಮರಳಿ ಫಾರ್ಮ್ ಕಂಡುಕೊಳ್ಳುವತ್ತ ಹೆಚ್ಚಿನ ಸಮಯ ನೀಡಬೇಕಿದೆ.

2. ಬಸಿಲ್ ಥಂಪಿ ಬದಲು ಈ ಆಟಗಾರ ಕಣಕ್ಕಿಳಿಬೇಕು
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪ್ರಥಮ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬಸಿಲ್ ಥಂಪಿ ದ್ವಿತೀಯ ಪಂದ್ಯದಲ್ಲಿ ಓವರ್ ಒಂದರಲ್ಲಿಯೇ 26 ರನ್ ನೀಡಿ ದುಬಾರಿಯಾಗಿದ್ದರು. ಹೀಗೆ ಹೆಚ್ಚಿನ ರನ್ ನೀಡುತ್ತಿರುವ ಬಸಿಲ್ ಥಂಪಿ ಬದಲು ಜಯದೇವ್ ಉನಾದ್ಕತ್ ಅವರನ್ನು ಮುಂಬೈ ಇಂಡಿಯನ್ಸ್ ಕಣಕ್ಕಿಳಿಸಬೇಕಾಗಿದೆ. ಜಯದೇವ್ ಉನಾದ್ಕತ್ ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು ಹಾಗೂ ತನ್ನ ಪಾಲಿನ 4 ಓವರ್‌ಗಳನ್ನು ಮುಗಿಸಿ ಅಂತಿಮ ಘಟ್ಟದಲ್ಲಿ ತಂಡದ ಪ್ರಮುಖ ಬೌಲರ್‌ಗಳಿಗೆ ಬೌಲಿಂಗ್ ಮಾಡುವ ಅವಕಾಶ ಮಾಡಿಕೊಡಬಲ್ಲ ಆಟಗಾರನಾಗಿರುವ ಜಯದೇವ್ ಉನಾದ್ಕತ್ ಅವರನ್ನು ಮುಂಬೈ ಇಂಡಿಯನ್ಸ್ ಬಸಿಲ್ ಥಂಪಿ ಬದಲಾಗಿ ಕಣಕ್ಕಿಳಿಸಬೇಕಿದೆ.


3. ಡೇನಿಯಲ್ ಸ್ಯಾಮ್ಸ್ ಬದಲಾಗಿ ಫ್ಯಾಬಿಯನ್ ಅಲೆನ್
ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದು ಹೆಚ್ಚು ರನ್ ನೀಡಿ ದುಬಾರಿಯಾಗುತ್ತಿರುವ ಡೇನಿಯಲ್ ಸ್ಯಾಮ್ಸ್ ಬದಲಾಗಿ ಫ್ಯಾಬಿಯನ್ ಅಲೆನ್ ಅವರನ್ನು ಕಣಕ್ಕಿಳಿಸಬೇಕಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 57 ರನ್ ನೀಡಿ ದುಬಾರಿಯಾಗಿದ್ದ ಡೇನಿಯಲ್ ಸ್ಯಾಮ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಸಹ 32 ರನ್ ನೀಡಿದ್ದರು. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಓವರ್ ಒಂದರಲ್ಲಿಯೇ 35 ರನ್ ನೀಡಿದ್ದ ಸ್ಯಾಮ್ಸ್ ಆ ಪಂದ್ಯದ ಅತಿ ಕಳಪೆ ಆಟಗಾರನಾಗಿದ್ದರು. ಇನ್ನು ಫ್ಯಾಬಿಯನ್ ಅಲೆನ್ ಸ್ಪಿನ್ನರ್ ಆಗಿದ್ದು, ಸದ್ಯ ತಂಡದಲ್ಲಿ ಕೇವಲ ಓರ್ವ ಸ್ಪಿನ್ನರ್‌ನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಸರೆಯಾಗಬಲ್ಲರು. ವಿಕೆಟ್ ಉರುಳಿಸುವುದರ ಜೊತೆಗೆ ಬ್ಯಾಟ್ ಹಿಡಿದು ದೊಡ್ಡ ಹೊಡೆತಗಳನ್ನು ಬಾರಿಸಬಲ್ಲಂತಹ ಸಾಮರ್ಥ್ಯ ಕೂಡ ಇವರಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications