ಐಪಿಎಲ್ 2022: 2011ರಲ್ಲಿ ರೀಟೈನ್ ಆಗಿದ್ದ ಈ ಮೂವರು ಆಟಗಾರರು 2022ರ ಆವೃತ್ತಿಗೂ ರೀಟೈನ್!

ಐಪಿಎಲ್ 2022ರ ಮಹಾ ಹರಾಜಿಗೆ ಪೂರ್ವಭಾವಿಯಾಗಿ ರಿಟೆನ್ಶನ್ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದೆ. ಯಾವ ತಂಡಗಳು ಯಾವೆಲ್ಲಾ ಆಟಗಾರರನ್ನು ರೀಟೈನ್ ಮಾಡಿಕೊಂಡಿವೆ ಎಂಬುದು ಈಗ ಅಧಿಕೃತವಾಗಿದೆ. ಕೆಲ ತಂಡಗಳು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಂಡಿದ್ದರೆ ಇನ್ನು ಕೆಲ ತಂಡಗಳು ಮೂವರನ್ನು ರೀಟೈನ್ ಮಾಡಿಕೊಂಡಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡ ಮಾತ್ರ ಕೇವಲ ಇಬ್ಬರು ಆಟಗಾರರನ್ನು ಮಾತ್ರವೇ ರೀಟೈನ್ ಮಾಡಿಕೊಂಡಿದೆ. ಈ ಮೂಲಕ ಮುಂಬರುವ ಹರಾಜು ಪ್ರಕ್ರಿಯೆಗೆ ಹೆಚ್ಚಿನ ಮೊತ್ತದ ಹಣವನ್ನು ಪರ್ಸ್‌ನಲ್ಲಿ ಉಳಿಸಿಕೊಂಡಿರುವ ತಂಡವಾಗಿದೆ.
ಇನ್ನು ಈ ರೀಟೆನ್ಶನ್ ಪ್ರಕ್ರಿಯೆಯಲ್ಲಿ ಸಾಕಷ್ಟು ಕುತೂಹಲಕಾರಿ ನಿರ್ಧಾರಗಳನ್ನು ಫ್ರಾಂಚೈಸಿಗಳು ತೆಗೆದುಕೊಂಡಿದೆ. ಕೆಲ ಅಚ್ಚರಿಯ ರೋಟೆನ್ಶನ್‌ಗಳು ಆಗಿದ್ದರೆ ಇನ್ನು ಕೆಲ ಪ್ರಮುಖ ಆಟಗಾರರನ್ನು ರೀಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಡುಗಡೆಗೊಳಿಸುವ ಮೂಲಕ ಫ್ರಾಂಚೈಸಿಗಳು ಅಚ್ಚರಿಯುಂಟು ಮಾಡಿದೆ. ಕೆಲ ಆಟಗಾರರು ಭಾರೀ ಮೊತ್ತವನ್ನು ಪಡೆದು ಆಶ್ಚರ್ಯ ಮೂಡಿಸಿದ್ದರೆ ಕೆಲ ಆಟಗಾರರು ನಿರೀಕ್ಷೆಗಿಂತ ಕಡಿಮೆ ಮೊತ್ತವನ್ನು ಪಡೆದುಕೊಂಡಿದ್ದರೂ ಮೂಲ ತಂಡದಲಲ್ಇಯೇ ಮುಂದುವರಿಯಲು ನಿರ್ಧರಿಸಿದ್ದಾರೆ.
ಈ ಮಧ್ಯೆ ಮತ್ತೊಂದು ಕುತೂಹಲ ಕಾರಿ ಸಂಗತಿಯನ್ನು ಈ ವರದಿಯಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ. 2011ರ ಆವೃತ್ತಿಯಲ್ಲಿ ರೀಟೈನ್ ಆಗಿದ್ದ ಆಟಗಾರರ ಪೈಕಿ ಮೂವರು ಆಟಗಾರರು ಈ ಬಾರಿಯೂ ಅದೇ ತಂಡದಲ್ಲಿ ರೀಟೈನ್ ಆಗಿ ಉಳಿದುಕೊಂಡಿದ್ದಾರೆ. ಆ ಮೂವರು ಆಟಗಾರರು ಯಾರು? ಮುಂದೆ ಓದಿ..

ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆರ್‌ಸಿಬಿ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಆರಂಭಿಕ ಆವೃತ್ತಿಯಿಂದ ಈವರೆಗೂ ಒಂದೇ ತಂಡದಲ್ಲಿ ಆಡಿರುವ ಏಕೈಕ ಆಟಗಾರ ಎನಿಸಿದ್ದಾರೆ. 2011ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ರೀಟೈನ್ ಮಾಡಿಕೊಂಡಿದ್ದ ಏಕೈಕ ಆಟಗಾರ ಕೂಡ ವಿರಾಟ್ ಕೊಹ್ಲಿ. ಅಂದು ಸುಮಾರು 8.28 ಕೋಟಿ ರೂಪಾಯಿ ನೀಡಿ ಆರ್‌ಸಿಬಿ ಫ್ರಾಂಸೈಸಿ ವಿರಾಟ್ ಕೊಹ್ಲಿಯನ್ನು ರೀಟೈನ್ ಮಾಡಿಕೊಂಡಿತ್ತು.
ಈಗ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಆಧಾರ ಸ್ಥಂಭವಾಗಿದ್ದಾರೆ. ಈ ಅವಧಿಯಲ್ಲಿ ಸಾಕಷ್ಟು ಆಟಗಾರರು ತಂಡದಲ್ಲಿ ಬಂದು ಹೋಗಿದ್ದರೂ ವಿರಾಟ್ ಕೊಹ್ಲಿ ಮಾತ್ರ ಸ್ಥಿರವಾಗಿ ಉಳಿದುಕೊಂಡಿದ್ದಾರೆ. ತಂಡದಲ್ಲಿ ಕೇವಲ ಉಪಸ್ಥಿತಿ ಮಾತ್ರವಲ್ಲಿ ಅಮೋಘ ಪ್ರದರ್ಶನಗಳನ್ನು ನೀಡಿ ಸಾಕಷ್ಟು ದಾಖಲೆಗಳನ್ನು ಮಾಡಿದ್ದಾರೆ. ಅಲ್ಲದೆ ಅನೇಕ ಪಂದ್ಯಗಳನ್ನು ಕೊಹ್ಲಿ ಆರ್‌ಸಿಬಿ ಪರವಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಈ ಬಲಗೈ ಆಟಗಾರ ಕಳೆದ ಹಲವು ಆವೃತ್ತಿಗಳಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಆದರೆ ಮುಂದಿನ ಆವೃತ್ತಿಯಲ್ಲಿ ತಾನು ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2022ರ ಐಪಿಎಲ್ ಮಹಾ ಹರಾಜಿಗೂ ಮುನ್ನ ಮತ್ತೊಂದು ಬಾರಿ ಆರ್‌ಸಿಬಿ ವಿರಾಟ್ ಕೊಹ್ಲಿಯನ್ನು ರೀಟೈನ್ ಮಾಡಿಕೊಂಡಿದ್ದು ಅವರಿಗೆ 15 ಕೋಟಿ ರೂಪಾಯಿ ಮೊತ್ತವನ್ನು ನಿಗದಿಪಡಿಸಿದೆ.

ಎಂಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ 2011 ಹಾಗೂ 2022ರಲ್ಲಿ ರೀಟೈನ್ ಆಗಿ ಉಳಿದುಕೊಂಡ ಮತ್ತೊಬ್ಬ ಭಾರತೀಯ ಆಟಗಾರನಾಗಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ 2011ರ ಮಹಾ ಹರಾಜಿನ ಸಂದರ್ಭದಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಆಗಿ ಹರಾಜು ಕಣಕ್ಕೆ ಇಳಿದಿತ್ತು. ಇದೀಗ 2022ರ ಮಹಾ ಹರಾಜಿನ ಸಂದರ್ಭದಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಳಿ ಚಾಂಪಿಯನ್ ಆಗಿಯೇ ಕಣಕ್ಕಿಳಿಯುತ್ತಿದೆ.
ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಪ್ರಮುಖ ಆಟಗಾರನಾಗಿ ಹೇಗೆ ಗುರಿತಿಸಿಕೊಳ್ಳುತ್ತಾರೋ ಎಂಎಸ್ ಧೋನಿ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಮದ ಎಂಎಸ್ ಧೋನಿ ನಿವೃತ್ತಿಯನ್ನು ಪಡೆದುಕೊಂಡಿದ್ದರು ಕೂಡ ಐಪಿಎಲ್‌ನಲ್ಲಿ ಮುಮದುವರಿಯುತ್ತಿದ್ದಾರೆ. 2011ರ ಆವೃತ್ತಿಯಲ್ಲಿ ಸಿಎಸ್‌ಕೆ ಎಂಎಸ್ ಧೋನಿಯನ್ನು 8.28 ಕೋಟಿ ನೀಡಿ ರೀಟೈನ್ ಮಾಡಿಕೊಂಡಿದ್ದರೆ ಈ ಬಾರಿ 12 ಕೋಟಿಗೆ ರೀಟೈನ್ ಆಗಿದ್ದಾರೆ.

ಕಿರಾನ್ ಪೊಲಾರ್ಡ್, ಮುಂಬೈ ಇಂಡಿಯನ್ಸ್
2011 ಹಾಗೂ 2022ರ ಮಹಾ ಹರಾಜಿನಲ್ಲಿ ಒಂದೇ ತಂಡದಲ್ಲಿ ರೀಟೈನ್ ಆಗಿ ಉಳಿದುಕೊಂಡ ಏಕೈಕ ವಿದೇಶಿ ಆಟಗಾರನಾಗಿದ್ದಾರೆ ವೆಸ್ಟ್ ಇಂಡೀಸ್‌ನ ಸ್ಪೋಟಕ ಆಟಗಾರ ಕಿರಾನ್ ಪೊಲಾರ್ಡ್. ಕಿರಾನ್ ಪೊಲಾರ್ಡ್ 2010ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಚೊಚ್ಚಲ ಆವೃತ್ತಿಯಲ್ಲಿಯೇ ಪೊಲಾರ್ಡ್ ನೀಡಿದ ಅಮೋಘ ಪ್ರದರ್ಶನವನ್ನು ಪರಿಗಣಿಸಿದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2011ರ ಮಹಾ ಹರಾಜಿಗೂ ಮುನ್ನ 4.14 ಕೋಟಿ ರೂಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು.
ಮುಂಬೈ ಇಂಡಿಯನ್ಸ್ ಪರವಾಗಿ ಸುದೀರ್ಘ ಕಾಲದಿಂದ ಸ್ಥಿರವಾಗಿ ಪ್ರದರ್ಶನ ನಿಡುತ್ತಿರುವ ಪೊಲಾರ್ಡ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಕಳೆದ ಒಂದು ದಶಕದಲ್ಲಿ ಮುಂಬೈ ಪರವಾಗಿ ಐದು ಬಾರಿ ಟ್ರಫೋ ಎತ್ತಿ ಹಿಡಿದಿದ್ದಾರೆ. ಕೆಲ ಸಂದರ್ಭಗಳಲ್ಲಿ ತಂಡವನ್ನು ನಾಯಕನಾಗಿಯೂ ಮುನ್ನಡೆಸಿದ್ದಾರೆ ಪೊಲಾರ್ಡ್. ಇದರ ಪರಿಣಾಮವಾಗಿ ಮುಂದಿನ ಆವೃತ್ತಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮತ್ತೊಮ್ಮೆ ರೀಟೈನ್ ಮಾಡಿಕೊಂಡಿದೆ. ಈ ಬಾರಿ 6 ಕೋಟಿ ರೂಪಾಯಿ ನೀಡಿ ಮುಂಬೈ ಇಂಡಿಯನ್ಸ್ ಈ ದೈತ್ಯ ಆಟಗಾರನನ್ನು ಫ್ರಾಂಚೈಸಿ ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+

Click it and Unblock the Notifications