For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಈ 3 ಕಾರಣಗಳಿಂದ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಲಾಗದೇ ಟೂರ್ನಿಯಿಂದ ಹೊರಬೀಳಬಹುದು!

IPL 2022: 3 factors that could prevent the Royal Challengers Bangalore team from entering the playoffs

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ತನ್ನ ಪಯಣವನ್ನು ಮಾರ್ಚ್ 27ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಆರಂಭಿಸಲಿದ್ದು, ಈ ಬಾರಿ ನೂತನ ನಾಯಕ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಹೌದು, ಕಳೆದ ಬಾರಿಯ ಐಪಿಎಲ್ ಆವೃತ್ತಿಯ ಮಧ್ಯದಲ್ಲಿಯೇ ಟೂರ್ನಿ ಮುಗಿದ ನಂತರ ನಾಯಕತ್ವ ತ್ಯಜಿಸುವ ನಿರ್ಧಾರವನ್ನು ವಿರಾಟ್ ಕೊಹ್ಲಿ ಪ್ರಕಟಿಸಿದ್ದರು. ಹೀಗಾಗಿ ಈ ಬಾರಿಯ ಆಟಗಾರರ ಮೆಗಾ ಹರಾಜಿನಲ್ಲಿ ತಾನು ಖರೀದಿಸಿದ ಅನುಭವಿ ಫಾಫ್ ಡು ಪ್ಲೆಸಿಸ್ ಹೆಗಲಿಗೆ ನಾಯಕತ್ವದ ಜವಾಬ್ದಾರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹಾಕಿದ್ದು, ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ತಂಡದಂತೆ ತೋರುತ್ತಿದೆ ಎಂಬ ಅಭಿಪ್ರಾಯದ ಜೊತೆಗೆ ಕೆಲ ನ್ಯೂನ್ಯತೆಗಳನ್ನೂ ಸಹ ಹೊಂದಿದೆ ಎಂಬ ಅಭಿಪ್ರಾಯಗಳೂ ಸಹ ವ್ಯಕ್ತವಾಗುತ್ತಿವೆ.

ಹೌದು, ಈ ಬಾರಿಯ ಮೆಗಾ ಹರಾಜಿನಲ್ಲಿ ಹಾಗೂ ಮೆಗಾ ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತೆಗೆದುಕೊಂಡ ಕೆಲ ನಿರ್ಧಾರಗಳು ತಂಡ ಪ್ಲೇಆಫ್ ತಲುಪುವ ಸಾಧ್ಯತೆಯನ್ನು ತಗ್ಗಿಸಿದ್ದು, ಈ ಕೆಳಕಂಡ 3 ಅಂಶಗಳಿಂದ ತಂಡ ಪ್ಲೇಆಫ್ ಪ್ರವೇಶಿಸದೇ ಟೂರ್ನಿಯಿಂದ ಹೊರಬೀಳಬಹುದು.

3. ಹೆಚ್ಚುವರಿ ನುರಿತ ಭಾರತೀಯ ಆಟಗಾರರ ಕೊರತೆ

3. ಹೆಚ್ಚುವರಿ ನುರಿತ ಭಾರತೀಯ ಆಟಗಾರರ ಕೊರತೆ

ಮೆಗಾ ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪ್ಲೇಯಿಂಗ್ ಇಲೆವೆನ್ ರಚಿಸಿದರೆ ತಂಡ ಬಲಿಷ್ಟವಾಗಿಯೇ ಕಾಣಸಿಗುತ್ತಿದೆ. ತಂಡದ ಪರ ಉತ್ತಮ ಪ್ರದರ್ಶನ ನೀಡಿ ಆಡುವ ಬಳಗದ ಖಾಯಂ ಸದಸ್ಯರು ಎನಿಸಿಕೊಂಡಿರುವ ಭಾರತೀಯ ಆಟಗಾರರಾದ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಗಾಯದ ಸಮಸ್ಯೆಗೊಳಗಾದರೆ ಬದಲಿ ಆಟಗಾರರಾಗಿ ಕಣಕ್ಕಿಳಿಯಲು ಬೇಕಾದ ಭಾರತದ ಸ್ಟಾರ್ ಆಟಗಾರರು ತಂಡದಲ್ಲಿಲ್ಲ ಎಂಬುದು ವಾಸ್ತವ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ ರೀತಿಯ ಪ್ರತಿಭಾವಂತ ಆಟಗಾರರನ್ನು ಹೊಂದಿದ್ದರೂ ಸಹ ಇವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿ ಮಿಂಚದೇ ಇರುವುದು ಹಾಗೂ ಹೆಚ್ಚು ಅನುಭವವಿಲ್ಲದಿರುವ ಅಂಶ ಸ್ಟಾರ್ ಆಟಗಾರರು ಗಾಯಕ್ಕೊಳಗಾದಾಗ ತಂಡಕ್ಕೆ ಹಿನ್ನಡೆಯನ್ನುಂಟುಮಾಡಲಿದೆ.

2. ಇಬ್ಬರು ವಿದೇಶಿ ಆಟಗಾರರ ಮೇಲೆ ಪ್ರಯೋಗ

2. ಇಬ್ಬರು ವಿದೇಶಿ ಆಟಗಾರರ ಮೇಲೆ ಪ್ರಯೋಗ

ಇನ್ನು ಐಪಿಎಲ್ ತಂಡವೊಂದು ಒಟ್ಟು ನಾಲ್ವರು ವಿದೇಶಿ ಆಟಗಾರರನ್ನು ಕಣಕ್ಕಿಳಿಸಬಹುದಾಗಿದ್ದು, ಕಳಪೆ ಪ್ರದರ್ಶನ ನೀಡಿದರೆ ಇತರೆ ವಿದೇಶಿ ಆಟಗಾರರನ್ನು ಬಳಸಿಕೊಳ್ಳಬಹುದಾಗಿದೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿದೇಶಿ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕನನ್ನಾಗಿ ನೇಮಿಸಿದ್ದು ಹಾಗೂ ಮೆಗಾ ಹರಾಜಿನಲ್ಲಿ ಹತ್ತು ಕೋಟಿಗೆ ಖರೀದಿಸಿರುವ ವನಿಂದು ಹಸರಂಗ ಆಡುವ ಬಳಗದ ಖಾಯಂ ಸದಸ್ಯನಾಗುವುದು ಖಚಿತವಾಗಿದ್ದು ತಂಡ ಕೇವಲ ಇಬ್ಬರು ವಿದೇಶಿ ಆಟಗಾರರ ಮೇಲೆ ಮಾತ್ರ ಪ್ರಯೋಗಗಳನ್ನು ಮಾಡಬಹುದಾಗಿದೆ. ಇನ್ನು ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ಅತಿಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದರೂ ಸಹ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದ ವಿದೇಶಿ ಆಟಗಾರ ಇಯಾನ್ ಮಾರ್ಗನ್ ಒತ್ತಡದಲ್ಲಿ ನೆಲಕಚ್ಚಿದ್ದು ಹಾಗೂ ಅದು ತಂಡದ ಮೇಲೆ ಪರಿಣಾಮ ಬೀರಿದ್ದನ್ನು ನಾವಿಲ್ಲಿ ಗಮನಿಸಬೇಕಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ಇಬ್ಬರು ವಿದೇಶಿ ಆಟಗಾರರನ್ನು ಬದಲಿಸಲು ಅವಕಾಶಗಳು ಇರಲಿದ್ದು, ಈ ಅಂಶ ಕೂಡ ತಂಡಕ್ಕೆ ಹಿನ್ನಡೆಯನ್ನುಂಟುಮಾಡಲಿದೆ.

ವಿರಾಟ್ ಬಗ್ಗೆ ಖಡಕ್ ವಾರ್ನಿಂಗ್ ಕೊಟ್ಟ ಗ್ಲೆನ್ ಮ್ಯಾಕ್ಸ್ ವೆಲ್ | Oneindia Kannada
1. ಮಧ್ಯಮ ಕ್ರಮಾಂಕದಲ್ಲಿಲ್ಲ ಭರವಸೆಯ ಆಟಗಾರರು

1. ಮಧ್ಯಮ ಕ್ರಮಾಂಕದಲ್ಲಿಲ್ಲ ಭರವಸೆಯ ಆಟಗಾರರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತೀ ಆವೃತ್ತಿಯಲ್ಲಿ ಅತಿಹೆಚ್ಚಾಗಿ ಎದುರಿಸುವ ಗಂಭೀರ ಸಮಸ್ಯೆಯೆಂದರೆ ಅದು ಮಧ್ಯಮ ಕ್ರಮಾಂದ ಆಟಗಾರರ ಕಳಪೆ ಪ್ರದರ್ಶನ. ಹೌದು, ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಿಮ್ರಾನ್ ಹೆಟ್ಮಾಯರ್, ಮೊಯಿನ್ ಅಲಿ ಹಾಗೂ ಮಾರ್ಕಸ್ ಸ್ಟಾಯಿನಿಸ್ ರೀತಿಯ ಆಟಗಾರರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಿತ್ತಾದರೂ ನಿರೀಕ್ಷಿಸಿದ್ದ ಯಶಸ್ಸನ್ನು ಹೊಂದಲು ಸಾಧ್ಯವಾಗಿರಲಿಲ್ಲ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ವನಿಂದು ಹಸರಂಗ ಅವರನ್ನು ಫಿನಿಶಿಂಗ್ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಸಲಿದ್ದು, ದೊಡ್ಡ ಮಟ್ಟದ ಐಪಿಎಲ್ ಅನುಭವವಿಲ್ಲದ ಹಸರಂಗ ಫಿನಿಶರ್ ಆಗಿ ಮಿಂಚುತ್ತಾರಾ ಎಂಬುದು ಅನುಮಾನ ಮೂಡಿಸಿದೆ. ಹಾಗೂ ಇಷ್ಟು ಆವೃತ್ತಿಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿಡಿ ಮೇಲೆ ಅವಲಂಬಿತವಾಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಎಬಿಡಿ ಇಲ್ಲದೇ ಕಣಕ್ಕಿಳಿಯಲಿದ್ದು, ಮಧ್ಯಮ ಕ್ರಮಾಂಕದಲ್ಲಿ ನೆಲಕಚ್ಚಿ ನಿಲ್ಲಬಲ್ಲ ಆಟಗಾರರಿಲ್ಲ ಎಂಬ ಹಿನ್ನಡೆಯನ್ನು ಅನುಭವಿಸಲಿದೆ.

Story first published: Friday, March 18, 2022, 15:32 [IST]
Other articles published on Mar 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+