DC vs LSG: ನಿಮ್ಮ ಡ್ರೀಮ್ ಟೀಮ್‌ನಲ್ಲಿ ಈ ಮೂವರು ಆಟಗಾರರಿದ್ದರೆ ಸೋಲು ಖಚಿತ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 3 ಪಂದ್ಯಗಳನ್ನಾಡಿರುವ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಫರ್ ಜೈಂಟ್ಸ್ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಉಳಿದೊಂದು ಪಂದ್ಯದಲ್ಲಿ ಸೋತು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇತ್ತ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಒಂದು ಪಂದ್ಯದಲ್ಲಿ ಜಯ ಸಾಧಿಸಿ ಉಳಿದೊಂದು ಪಂದ್ಯದಲ್ಲಿ ಸೋತು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಹೀಗೆ ಟೂರ್ನಿಯಲ್ಲಿನ ತನ್ನ ಕೊನೆಯ ಎರಡು ಪಂದ್ಯಗಳ್ಲಲಿ ಸತತ ಗೆಲುವು ಸಾಧಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿಯೂ ಜಯ ಸಾಧಿಸುತ್ತಾ ಎಂಬುದರ ಕುರಿತಾದ ಚರ್ಚೆಗಳು ಒಂದೆಡೆ ನಡೆಯುತ್ತಿದ್ದರೆ ಮತ್ತೊಂದೆಡೆ ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸಿರುವ ಕೆಲ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಊಹಿಸಿ ಆರಿಸುವುದರಲ್ಲಿ ನಿರತರಾಗಿದ್ದಾರೆ. ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಈ ಪಂದ್ಯಕ್ಕಾಗಿ ನೀವು ರಚಿಸುತ್ತಿರುವ ಡ್ರೀಮ್ ಟೀಮ್‌ನಿಂದ ಈ ಕೆಳಕಂಡ ಮೂವರು ಆಟಗಾರರನ್ನು ಹೊರಗಿಡಿ ಹಾಗೂ ಈ ಕೆಳಕಂಡಂತೆ ತಂಡ ರಚಿಸಿ ಈ ಆಟಗಾರರಿಗೆ ನಾಯಕತ್ವ ಮತ್ತು ಉಪನಾಯಕನ ಸ್ಥಾನ ನೀಡುವುದು ಸೂಕ್ತ.

ಈ ಮೂವರನ್ನು ಹೊರಗಿಡಿ
ಡೆಲ್ಲಿ ಕ್ಯಾಪಿಟಲ್ಸ್ ಪರ ಎರಡೂ ಪಂದ್ಯಗಳಲ್ಲಿಯೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಟಗಾರ ಮನ್‌ದೀಪ್ ಸಿಂಗ್ ಮೊದಲ ಪಂದ್ಯದಲ್ಲಿ ಶೂನ್ಯ ಹಾಗೂ ದ್ವಿತೀಯ ಪಂದ್ಯದಲ್ಲಿ 16 ಎಸೆತಗಳಿಗೆ 18 ರನ್ ಗಳಿಸಿದರು. ಹೀಗೆ ಮೊದಲೆರಡು ಪಂದ್ಯಗಳಲ್ಲಿ ಕಳಪೆಯಾಗಿರುವ ಮನ್‌ದೀಪ್ ಸಿಂಗ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಹೊರಗಿಡುವ ಸಾಧ್ಯತೆಗಳು ಹೆಚ್ಚಿದ್ದು ನಿಮ್ಮ ಡ್ರೀಮ್ ಟೀಮ್‌ನಿಂದ ಈತನನ್ನು ಹೊರಗಿಡುವುದು ಸೂಕ್ತ ಎನ್ನಬಹುದು. ಡೆಲ್ಲಿ ಕ್ಯಾಪಿಟಲ್ಸ್ ಪರ 2 ಪಂದ್ಯಗಳನ್ನಾಡಿ 4 ವಿಕೆಟ್ ಪಡೆದಿರುವ ಖಲೀಲ್ ಅಹ್ಮದ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಆಯ್ಕೆ ಎನ್ನಬಹುದು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅನ್ರಿಚ್ ನಾರ್ಕಿಯಾ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿದ್ದು, ಖಲೀಲ್ ಅಹ್ಮದ್ ತಂಡದಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿವೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಉತ್ತಮ ರನ್ ಕಲೆಹಾಕಬೇಕಾಗಿರುವ ಆಟಗಾರ ಮನೀಶ್ ಪಾಂಡೆ, ಇಲ್ಲಿಯವರೆಗೂ ತಂಡದ ಪರ 3 ಪಂದ್ಯಗಳನ್ನಾಡಿರುವ ಮನೀಶ್ ಪಾಂಡೆ ಕೊನೆಯ ಪಂದ್ಯದಲ್ಲಿ ಮಾತ್ರ ಎರಡಂಕಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕಳಪೆ ಫಾರ್ಮ್‌ನಲ್ಲಿರುವ ಮನೀಶ್ ಪಾಂಡೆ ಬದಲು ಬೇರೆ ಆಟಗಾರರನ್ನು ನಿಮ್ಮ ಡ್ರೀಮ್ ಟೀಮ್‌ಗೆ ಆರಿಸಿಕೊಳ್ಳುವುದು ಉತ್ತಮ.

ಇವರಿಗೆ ನಾಯಕತ್ವ ನೀಡಿ
ನಿಮ್ಮ ಡ್ರೀಮ್ ಟೀಮ್ ಹೆಚ್ಚಿನ ಅಂಕ ಗಳಿಸಲು ಈ ಕೆಳಕಂಡ ಆಟಗಾರರಿಗೆ ನಾಯಕ ಮತ್ತು ಉಪ ನಾಯಕನ ಸ್ಥಾನವನ್ನು ನೀಡಿ
ನಾಯಕ- ಲೋಕೇಶ್ ರಾಹುಲ್, ರಿಷಬ್ ಪಂತ್
ಉಪನಾಯಕ - ದೀಪಕ್ ಹೂಡಾ, ಜೇಸನ್ ಹೋಲ್ಡರ್

ಡ್ರೀಮ್ ಟೀಮ್ ಹೀಗಿರಲಿ
ನೀವು ಈ ಪಂದ್ಯಕ್ಕಾಗಿ ರಚಿಸುವ ಡ್ರೀಮ್ ಟೀಮ್ ಈ ಕೆಳಕಂಡಂತಿದ್ದರೆ ಉತ್ತಮ
ತಂಡ 1: ಕೀಪರ್ - ಲೋಕೇಶ್ ರಾಹುಲ್ (ನಾಯಕ), ರಿಷಬ್ ಪಂತ್
ಬ್ಯಾಟ್ಸ್‌ಮನ್‌ಗಳು - ಪೃಥ್ವಿ ಶಾ, ಎವಿನ್ ಲೂಯಿಸ್, ರೋವ್‌ಮನ್ ಪೊವೆಲ್
ಆಲ್‌ರೌಂಡರ್‌ಗಳು - ದೀಪಕ್ ಹೂಡಾ (ಉಪನಾಯಕ), ಜೇಸನ್ ಹೋಲ್ಡರ್, ಅಕ್ಷರ್ ಪಟೇಲ್
ಬೌಲರ್‌ಗಳು - ಅವೇಶ್ ಖಾನ್, ಮುಸ್ತಾಫಿಜುರ್ ರೆಹಮಾನ್, ಕುಲದೀಪ್ ಯಾದವ್
ತಂಡ 2: ಕೀಪರ್ - ಲೋಕೇಶ್ ರಾಹುಲ್, ರಿಷಬ್ ಪಂತ್ (ನಾಯಕ), ಕ್ವಿಂಟನ್ ಡಿ ಕಾಕ್
ಬ್ಯಾಟ್ಸ್‌ಮನ್‌ಗಳು - ಪೃಥ್ವಿ ಶಾ, ರೋವ್‌ಮನ್ ಪೊವೆಲ್, ಡೇವಿಡ್ ವಾರ್ನರ್
ಆಲ್ ರೌಂಡರ್‌ಗಳು - ದೀಪಕ್ ಹೂಡಾ, ಜೇಸನ್ ಹೋಲ್ಡರ್ (ಉಪನಾಯಕ)
ಬೌಲರ್‌ಗಳು - ಅವೇಶ್ ಖಾನ್, ಕುಲದೀಪ್ ಯಾದವ್, ಅನ್ರಿಚ್ ನಾರ್ಕಿಯಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications