For Quick Alerts
ALLOW NOTIFICATIONS  
For Daily Alerts
 

DC vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ಈ ಮೂವರನ್ನು ಹೊರಗಿಡಿ

IPL 2022: 3 Players you should avoid in your dream team for DC vs SRH game

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿದ್ದು, ಇತ್ತಂಡಗಳಿಗೂ ಇದು ಗೆಲ್ಲಲೇಬೇಕಾದ ಪಂದ್ಯವಾಗಿದೆ. ಸನ್ ರೈಸರ್ಸ್ ಹೈದರಾಬಾದ್ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲು ಇನ್ನೂ ಮೂರು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದರೆ, ಅತ್ತ ಟೂರ್ನಿಯಲ್ಲಿ ಇಲ್ಲಿಯವರೆಗೂ 9 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು 8 ಅಂಕಗಳನ್ನು ಪಡೆದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಯಶಸ್ವಿಯಾಗಿ ಯಾವ ತಂಡದ ಅಂಕಗಳ ಮೇಲೂ ಅವಲಂಬಿತವಾಗದೇ ಪ್ಲೇಆಫ್ ತಲುಪಲು ಉಳಿದ 5 ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ಗೆಲ್ಲಬೇಕಿದೆ ಹಾಗೂ ಉಳಿದ 4 ಪಂದ್ಯಗಳಲ್ಲಿ ಗೆದ್ದರೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ತನ್ನಷ್ಟೇ ಅಂಕಗಳನ್ನು ಪಡೆದುಕೊಳ್ಳಲಿರುವ ಇತರೆ ತಂಡಗಳಿಗಿಂತ ಹೆಚ್ಚಿನ ನೆಟ್ ರನ್ ರೇಟ್‌ನ್ನು ಪಡೆದುಕೊಂಡರೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿರಲಿದೆ.

ಹೀಗೆ ಎರಡೂ ತಂಡಗಳಿಗೂ ಮಹತ್ವದ್ದಾಗಿರುವ ಈ ಪಂದ್ಯದಲ್ಲಿ ಯಾವ ತಂಡ ಜಯ ಸಾಧಿಸಿ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಉಳಿಸಿಕೊಳ್ಳಲಿದೆ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಒಂದೆಡೆ ಇದ್ದರೆ, ಮತ್ತೊಂದೆಡೆ ಕೆಲ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸಿ ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಬಹುದು ಎಂಬುದನ್ನು ಊಹಿಸುವುದರಲ್ಲಿ ನಿರತರಾಗಿದ್ದಾರೆ. ಹೀಗೆ ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸಲಿರುವ ಕ್ರಿಕೆಟ್ ಪ್ರೇಮಿಗಳು ಪಂದ್ಯದಲ್ಲಿ ಹೆಚ್ಚಿನ ಫ್ಯಾಂಟಸಿ ಅಂಕಗಳನ್ನು ಕಲೆಹಾಕುವಲ್ಲಿ ವಿಫಲರಾಗಬಹುದಾದ ಈ ಕೆಳಕಂಡ ಮೂವರು ಆಟಗಾರರನ್ನು ತಂಡದಿಂದ ಹೊರಗಿಡುವುದು ಉತ್ತಮ ಎಂದೇ ಹೇಳಬಹುದು.

1. ಲಲಿತ್ ಯಾದವ್: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿ 137 ರನ್ ಗಳಿಸಿ 4 ವಿಕೆಟ್‌ಗಳನ್ನು ಮಾತ್ರ ಪಡೆದಿರುವ ಲಲಿತ್ ಯಾದವ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಎನ್ನಬಹುದು. ಇನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಸಾಕಷ್ಟು ಏರಿಕೆ ಮತ್ತು ಇಳಿಕೆಯನ್ನು ಕಾಣುತ್ತಿದ್ದು, ಆರನೇ ಬೌಲರ್ ಆಗಿ ಬಳಕೆಯಾಗುತ್ತಿದ್ದಾರೆ.

2. ಮಾರ್ಕೊ ಜನ್ಸೆನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯವನ್ನು ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಸತತ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿರುವ ಮಾರ್ಕೊ ಜನ್ಸೆನ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ 7 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಪಡೆಯುವಲ್ಲಿ ಮಾತ್ರ ಶಕ್ತರಾಗಿದ್ದಾರೆ. ಇನ್ನು ವಿಕೆಟ್ ಪಡೆಯುವಲ್ಲಿ ವಿಫಲರಾಗಿರುವ ಈ ಆಟಗಾರ ಹೆಚ್ಚು ರನ್‌ಗಳನ್ನು ಕೂಡ ಬಿಟ್ಟುಕೊಡುತ್ತಿದ್ದು ಈತನ ಬದಲು ಉಳಿದ ಆಟಗಾರರನ್ನು ನಿಮ್ಮ ಡ್ರೀಮ್ ಟೀಮ್‌ಗೆ ಆಯ್ಕೆ ಮಾಡುವುದು ಉತ್ತಮ ನಿರ್ಧಾರ ಎನ್ನಬಹುದು.

3. ಚೇತನ್ ಸಕಾರಿಯಾ: ಕಳೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ಎಡವಿ ತನ್ನ ಓವರ್‌ಗಳನ್ನು ಸಂಪೂರ್ಣವಾಗಿ ಮಾಡುವ ಅವಕಾಶ ಪಡೆಯದೇ ಇರುವ ಚೇತನ್ ಸಕಾರಿಯಾ ಟೂರ್ನಿಯಲ್ಲಿ ಇಲ್ಲಿಯವರೆಗೂ ಎರಡು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿದ್ದು, ಒಂದೇ ಒಂದು ವಿಕೆಟ್‌ನ್ನು ಮಾತ್ರ ಕಬಳಿಸಿದ್ದಾರೆ. ಅಷ್ಟೇ ಅಲ್ಲದೇ ಎಂಟಕ್ಕಿಂತಲೂ ಅಧಿಕ ಎಕಾನಮಿ ರೇಟ್‌ನಲ್ಲಿ ಚೇತನ್ ಸಕಾರಿಯಾ ಬೌಲಿಂಗ್ ಮಾಡಿದ್ದು, ಇಂದಿನ ಪಂದ್ಯದ ಡ್ರೀಮ್ ಟೀಮ್‌ನಿಂದ ಇವರನ್ನು ಹೊರಗಿಡುವುದು ಉತ್ತಮ.

Story first published: Thursday, May 5, 2022, 18:14 [IST]
Other articles published on May 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+