ಐಪಿಎಲ್ 2022: ಬಲಿಷ್ಟ ಸಿಎಸ್‌ಕೆಯನ್ನು ಎದುರಿಸಿ ಕಠಿಣ ಪೈಪೋಟಿ ನೀಡಬಲ್ಲ ಸಾಮರ್ಥ್ಯವಿರುವ 3 ತಂಡಗಳಿವು

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಟೂರ್ನಿಯ ಚೊಚ್ವಲ ಪಂದ್ಯ ಮಾರ್ಚ್ 26ರಂದು ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿದೆ. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಟ ನಡೆಸುವ ಮೂಲಕ ಈ ಬಾರಿಯ ಟೂರ್ನಿಯನ್ನು ಆರಂಭಿಸಲಿದ್ದು, ಮೆಗಾ ಹರಾಜಿನ ನಂತರವೂ ಸಹ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಹಿಂದಿನ ಆವೃತ್ತಿಗಳ ರೀತಿಯೇ ಬಲಿಷ್ಠವಾಗಿದೆ.
ಹೌದು, ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಟ್ರೋಫಿ ಗೆದ್ದಿರುವ ಎರಡನೇ ತಂಡ ಎನಿಸಿಕೊಂಡಿದ್ದು, ಟೂರ್ನಿಯಲ್ಲಿ ಒಟ್ಟು 4 ಬಾರಿ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇನ್ನು ಹೆಚ್ಚಾಗಿ ತನ್ನ ತಂಡದ ಆಟಗಾರರನ್ನು ಬಿಟ್ಟುಕೊಡದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಮೆಗಾ ಹರಾಜಿನಲ್ಲಿ ಡ್ವೇನ್ ಬ್ರಾವೋ ಹಾಗೂ ರಾಬಿನ್ ಉತ್ತಪ್ಪ ಅವರನ್ನು ಖರೀದಿಸುವ ಮೂಲಕ ಮತ್ತೆ ತಂಡಕ್ಕೆ ಕರೆತಂದಿದೆ. ಹೀಗೆ ಆಟಗಾರರನ್ನು ಹೆಚ್ಚಾಗಿ ಬದಲಿಸದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಹೊಂದಾಣಿಕೆಯಿಂದಲೇ ನೆಲಕಚ್ಚಿದ್ದ ಸಂದರ್ಭಗಳಲ್ಲಿ ಉತ್ತಮ ಕಮ್‌ಬ್ಯಾಕ್ ಮಾಡಿದೆ. 2016 ಮತ್ತು 2017ರ ಐಪಿಎಲ್ ಟೂರ್ನಿಗಳಲ್ಲಿ ಭಾಗವಹಿಸದೇ ಇದ್ದ ಚೆನ್ನೈ ಸೂಪರ್ ಕಿಂಗ್ಸ್ 2018ರ ಐಪಿಎಲ್ ಆವೃತ್ತಿಯಲ್ಲಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿತ್ತು. ಹಾಗೂ 2020ರ ಐಪಿಎಲ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ವರ್ಷ ನಡೆದ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿದು ಟೀಕೆಗಳಿಗೆಲ್ಲಾ ಉತ್ತರ ನೀಡಿತ್ತು. ಹೀಗೆ ಎಂ ಎಸ್ ಧೋನಿ ನಾಯಕತ್ವದಡಿಯಲ್ಲಿ ಆಡುವ ಚೆನ್ನೈ ಸೂಪರ್ ಕಿಂಗ್ಸ್ ಧೋನಿಯ ಮಾಸ್ಟರ್‌ಮೈಂಡ್ ಆಟದಿಂದ ಈ ಬಾರಿಯೂ ಕೂಡ ಬಲಿಷ್ಟವಾಗಿರಲಿದ್ದು, ಈ ತಂಡಕ್ಕೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಈ ಕೆಳಕಂಡ 3 ತಂಡಗಳು ತೀವ್ರ ಪೈಪೋಟಿ ನೀಡಲಿವೆ.

ಮುಂಬೈ ಇಂಡಿಯನ್ಸ್
ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಹಣಾಹಣಿ ಎಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಹಣಾಹಣಿ ಎನ್ನಬಹುದು. ಒಟ್ಟಾರೆ 14 ಐಪಿಎಲ್ ಟೂರ್ನಿಗಳು ನಡೆದಿವೆ ಹಾಗೂ ಈ ಪೈಕಿ ಈ ಎರಡು ತಂಡಗಳೇ 9 ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದು, ಇತ್ತಂಡಗಳ ಪಾರುಪತ್ಯ ಯಾವ ರೀತಿ ಎಂಬುದನ್ನು ಊಹಿಸಿಕೊಳ್ಳಬಹುದು. ಚೆನ್ನೈ ಸೂಪರ್ ಕಿಂಗ್ಸ್‌ನಂತೆ ಮುಂಬೈ ಇಂಡಿಯನ್ಸ್ ಕೂಡ ಹೆಚ್ಚಾಗಿ ತನ್ನ ಆಟಗಾರರನ್ನು ಬದಲಿಸದಿರುವ ತಂಡವಾಗಿದ್ದು, ಈ ಬಾರಿಯೂ ಕೂಡ ಎರಡೂ ತಂಡಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡಲಿದೆ. ಹಾಗೂ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಒಟ್ಟಾರೆ 32 ಮುಖಾಮುಖಿ ಪಂದ್ಯಗಳು ನಡೆದಿದ್ದು, ಮುಂಬೈ ಇಂಡಿಯನ್ಸ್ 19 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 13 ಪಂದ್ಯಗಳಲ್ಲಿ ಗೆದ್ದಿದೆ. ಇನ್ನು ಈ ಬಾರಿ ಇತ್ತಂಡಗಳು ಏಪ್ರಿಲ್ 21 ಮತ್ತು ಮೇ 12 ಈ ಎರಡು ದಿನಗಳಂದು ಸೆಣಸಾಟ ನಡೆಸಲಿದ್ದು, ಯಾವ ತಂಡ ಗೆದ್ದು ಬೀಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಲಕ್ನೋ ಸೂಪರ್ ಜೈಂಟ್ಸ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲಿರುವ ಹೊಸ ತಂಡವಾದ ಲಕ್ನೋ ಸೂಪರ್ ಜೈಂಟ್ಸ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪೈಪೋಟಿ ನೀಡಬಲ್ಲ ಸಾಮರ್ಥ್ಯವಿರುವ ತಂಡವಾಗಿದೆ. ಮೆಗಾ ಹರಾಜಿನ ನಂತರ ಬಲಿಷ್ಟ ತಂಡ ಎನಿಸಿಕೊಂಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಮತೋಲನವಾಗಿದ್ದು, ಉತ್ತಮ ಆಲ್‌ರೌಂಡರ್ ಆಟಗಾರರಿಂದ ಕೂಡಿದೆ. ಇನ್ನು ಎಂ ಎಸ್ ಧೋನಿ ಲೆಗ್ ಸ್ಪಿನ್ನರ್‌ಗಳಿಗೆ ಸರಿಯಾಗಿ ಬ್ಯಾಟ್ ಬೀಸುವಲ್ಲಿ ಹೆಚ್ಚಾಗಿ ಎಡವಿದ್ದು, ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ರವಿ ಬಿಷ್ಣೊಯಿ ಎಂಎಸ್ ಧೋನಿಗೆ ಟಕ್ಕರ್ ನೀಡಬಹುದು. ಇನ್ನು ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಪ್ರಸ್ತುತ ಉತ್ತಮ ಬೌಲರ್‌ಗಳಲ್ಲೊಬ್ಬ ಎನಿಸಿಕೊಂಡಿರುವ ಅವೇಶ್ ಖಾನ್ ಲಕ್ನೋ ತಂಡದಲ್ಲಿರುವುದು ಚೆನ್ನೈ ಸೂಪರ್ ಕಿಂಗ್ಸ್‌ಗೆ ಹಿನ್ನಡೆಯುಂಟಾಗುವಂತೆ ಮಾಡಬಹುದು. ಇನ್ನೂ ಹೆಚ್ಚಾಗಿ ಲಕ್ನೋ ಸೂಪರ್ ಜೈಂಟ್ಸ್ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ರೀತಿಯ ನೆಲಕಚ್ಚಿ ನಿಲ್ಲಬಲ್ಲ ಆರಂಭಿಕ ಆಟಗಾರರನ್ನು ಒಳಗೊಂಡಿದ್ದು, ಇದು ಲಕ್ನೋಗಿರುವ ದೊಡ್ಡ ಪ್ಲಸ್ ಪಾಯಿಂಟ್ ಎನ್ನಬಹುದು. ಈ ರೀತಿ ಬಲಿಷ್ಟತೆಯಿಂದ ಕೂಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ರೀತಿಯ ದೊಡ್ಡ ಹೆಸರುಗಳ ನಡುವಿನ ಹಣಾಹಣಿ ಸಾಕಷ್ಟು ಕ್ರೇಜ್ ಹೊಂದಿದ್ದು, ಇತ್ತಂಡಗಳ ನಡುವಿನ ಈ ಹಿಂದಿನ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಮೇಲುಗೈ ಸಾಧಿಸಿದೆ. ಆದರೂ ಸಹ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸಲಿದ್ದು ಚೆನ್ನೈನ ಮಾಜಿ ಆಟಗಾರಮಾಗಿರುವ ಫಾಫ್ ಚೆನ್ನೈ ತಂಡದ ತಂತ್ರಗಳ ಬಗ್ಗೆ ಒಳ್ಳೆಯ ಅರಿವನ್ನು ಹೊಂದಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿ ಫಾಫ್ ಡು ಪ್ಲೆಸಿಸ್ ನಾಯಕನಾಗಿರುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಆರ್‌ಸಿಬಿ ಬಗ್ಗೆ ತಲೆಕೆಡಿಸಿಕೊಳ್ಳಲೇಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications