IPL 2022: ಕಳಪೆ ಫೀಲ್ಡಿಂಗ್‍ನಿಂದ ಹೆಚ್ಚು ರನ್ ನೀಡಿದ 3 ತಂಡಗಳಿವು! ಆರ್‌ಸಿಬಿ ನೀಡಿದ್ದೆಷ್ಟು?

ಕಳೆದ ಮಾರ್ಚ್ ತಿಂಗಳ ಅಂತಿಮ ವಾರದಲ್ಲಿ ಆರಂಭವಾದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಒಟ್ಟು 70 ಪಂದ್ಯಗಳು ಯಾವುದೇ ಅಡೆತಡೆಗಳಿಲ್ಲದೇ ಯಶಸ್ವಿಯಾಗಿ ಕಳೆದ ಭಾನುವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಮೂಲಕ ಮುಕ್ತಾಯಗೊಂಡವು.
ಇನ್ನು ಲೀಗ್ ಹಂತ ಮುಕ್ತಾಯಗೊಳ್ಳುವ ಕೆಲ ದಿನಗಳ ಮುನ್ನ ಪ್ಲೇ ಆಫ್ ಪ್ರವೇಶಿಸಲು ಲಭ್ಯವಿದ್ದ ಅಂತಿಮ ಸ್ಥಾನಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಪೈಪೋಟಿ ಉಂಟಾಗಿತ್ತು. ಆ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿತು ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಸೋತ ಡೆಲ್ಲಿ ಕ್ಯಾಪಿಟಲ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಂಕಪಟ್ಟಿಯಲ್ಲಿ ಹಿಂದಿಕ್ಕುವಲ್ಲಿ ವಿಫಲವಾಯಿತು.
ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಜತೆ ಯಶಸ್ವಿಯಾಗಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿತು. ಹೀಗೆ ಲೀಗ್ ಸುತ್ತಿನ ಅಂತಿಮ ಹಂತದಲ್ಲಿ ಯಾವ ತಂಡ ಕಳಪೆ ಕ್ಷೇತ್ರ ರಕ್ಷಣೆ ಮಾಡುವ ಮೂಲಕ ಅನಗತ್ಯವಾಗಿ ರನ್ ಬಿಟ್ಟುಕೊಟ್ಟಿದೆ ಎಂಬ ಅಂಕಿಅಂಶವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಹಂಚಿಕೊಂಡಿತ್ತು. ಈ ಅಂಕಿ ಅಂಶದ ಪ್ರಕಾರ ಈ ಬಾರಿಯ ಟೂರ್ನಿಯ ಲೀಗ್ ಹಂತದ ಪಂದ್ಯಗಳಲ್ಲಿ ಕಳಪೆ ಫೀಲ್ಡಿಂಗ್ ಮೂಲಕ ಹೆಚ್ಚು ರನ್ ಬಿಟ್ಟುಕೊಟ್ಟ 3 ತಂಡಗಳ ಪಟ್ಟಿ ಈ ಕೆಳಕಂಡಂತಿದೆ ಓದಿ..

3. ಕೋಲ್ಕತ್ತಾ ನೈಟ್ ರೈಡರ್ಸ್
ಟೂರ್ನಿಯ ಆರಂಭಕ್ಕೂ ಮುನ್ನ ಉತ್ತಮ ಆಟಗಾರರಿಂದ ಕೂಡಿದ ಬಲಿಷ್ಠ ತಂಡ ಎನಿಸಿಕೊಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇ ಆಫ್ ಪ್ರವೇಶಿಸುವ ತಂಡಗಳಲ್ಲೊಂದು ಎನಿಸಿಕೊಂಡಿತ್ತು. ಆದರೆ ನಂತರ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಈ ತಂಡ ಪ್ಲೇ ಆಫ್ ಪ್ರವೇಶಿಸಲಾಗದೇ ನಿರಾಸೆ ಮೂಡಿಸಿದೆ. ಹಾಗೂ ಈ ಬಾರಿಯ ಟೂರ್ನಿಯ ಲೀಗ್ ಹಂತದಲ್ಲಿ ಕಳಪೆ ಫೀಲ್ಡಿಂಗ್ ಮೂಲಕ ಹೆಚ್ಚು ರನ್ ಬಿಟ್ಟುಕೊಟ್ಟ ತಂಡಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕೆಕೆಆರ್ ಈ ಬಾರಿ 45 ರನ್‌ಗಳನ್ನು ಕಳಪೆ ಫೀಲ್ಡಿಂಗ್ ಮೂಲಕ ಬಿಟ್ಟುಕೊಟ್ಟಿದೆ.

2. ರಾಯಲ್ ಚಾಲೆಂಜರ್ಸ್ ಬೆಂಗಳೂರು
ಲೀಗ್ ಸುತ್ತಿನ ಅಂತಿಮ ಹಂತದಲ್ಲಿ ಪ್ಲೇ ಆಫ್ ಸುತ್ತಿನ ಅರ್ಹತೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೀಗ್ ಹಂತದಲ್ಲಿ ಕಳಪೆ ಫೀಲ್ಡಿಂಗ್ ಮೂಲಕ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಎರಡನೇ ತಂಡ ಎನಿಸಿಕೊಂಡಿದೆ. ಫಾಫ್ ಡು ಪ್ಲೆಸಿಸ್ ಪಡೆ ಲೀಗ್ ಹಂತದಲ್ಲಿ ಕಳಪೆ ಕ್ಷೇತ್ರರಕ್ಷಣೆ ಮೂಲಕ ಬಿಟ್ಟುಕೊಟ್ಟ ರನ್ 47.

1. ಮುಂಬೈ ಇಂಡಿಯನ್ಸ್ ಟಾಪ್
ಈ ಬಾರಿಯ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದೊಂದಿಗೆ ತನ್ನ ಪಯಣವನ್ನು ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್ ಕಳಪೆ ಕ್ಷೇತ್ರರಕ್ಷಣೆ ಮೂಲಕ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ತಂಡ ಎಂಬ ಬೇಡವಾದ ಹೆಸರನ್ನು ಸಂಪಾದಿಸಿದೆ. ಮುಂಬೈ ಇಂಡಿಯನ್ಸ್ ಲೀಗ್ ಹಂತದಲ್ಲಿ ಬರೋಬ್ಬರಿ 67 ರನ್‌ಗಳನ್ನು ಕಳಪೆ ಕ್ಷೇತ್ರರಕ್ಷಣೆ ಮೂಲಕ ಬಿಟ್ಟುಕೊಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications