
1. ಜೋಫ್ರಾ ಆರ್ಚರ್ ಖರೀದಿಸಿದ್ದು
ವೇಗಿ ಜಸ್ ಪ್ರೀತ್ ಬೂಮ್ರಾ ಜೊತೆ ಜೋಫ್ರಾ ಆರ್ಚರ್ ಜೋಡಿ ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸಿ ಕೊಡಲಿದೆ ಎಂಬ ಬಲವಾದ ಊಹೆಯ ಮೇಲೆ ಮೆಗಾ ಹರಾಜಿನಲ್ಲಿ 8 ಕೋಟಿ ನೀಡಿ ಜೋಫ್ರಾ ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಿತ್ತು. ಆದರೆ ಜೋಫ್ರಾ ಆರ್ಚರ್ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿರುವುದು ಸದ್ಯ ತಂಡಕ್ಕೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಹೀಗೆ ಜೋಫ್ರಾ ಆರ್ಚರ್ ಖರೀದಿಸಿ ಕೈಸುಟ್ಟಿಕೊಂಡದ್ದು ಮುಂಬೈ ಇಂಡಿಯನ್ಸ್ ಮಾಡಿದ ತಪ್ಪಾಗಿದೆ.

2. ಆಡುವ ಬಳಗದಿಂದ ಟಿಮ್ ಡೇವಿಡ್ ಅವರನ್ನು ಕೈ ಬಿಟ್ಟದ್ದು
ಈ ಬಾರಿಯ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿದ ಎರಡನೇ ದುಬಾರಿ ಆಟಗಾರ ಎಂದರೆ ಅದು ಟೀಮ್ ಡೇವಿಡ್. ಸಿಂಗಾಪುರದ ಈ ಕ್ರಿಕೆಟಿಗನನ್ನು 8.25 ಕೋಟಿಗೆ ಮುಂಬೈ ಇಂಡಿಯನ್ಸ್ ಖರೀದಿಸಿತು. ಟಿ ಟ್ವೆಂಟಿ ಕ್ರಿಕೆಟ್ ವಿಷಯಕ್ಕೆ ಬಂದರೆ ದೊಡ್ಡ ಮಟ್ಟದ ಅನುಭವವನ್ನು ಹೊಂದಿರುವ ಟೀಮ್ ಡೇವಿಡ್ ಅಬ್ಬರದ ಬ್ಯಾಟಿಂಗ್ ನಡೆಸಬಲ್ಲ ಸಾಮರ್ಥ್ಯ ಆಟಗಾರನಾಗಿದ್ದಾರೆ. ಈ ಕಾರಣದಿಂದಾಗಿಯೇ ಟಿಮ್ ಡೇವಿಡ್ ಅವರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್ ಮೊದಲೆರಡು ಪಂದ್ಯಗಳಲ್ಲಿ ಅವಕಾಶವನ್ನು ನೀಡಿ ಉತ್ತಮ ಪ್ರದರ್ಶನ ನೀಡದ ಕಾರಣ ನಂತರದ ಪಂದ್ಯಗಳಲ್ಲಿ ಆಡುವ ಬಳಗದಿಂದ ಹೊರಗಿಟ್ಟು ಡಿವಾಲ್ಡ್ ಬ್ರೆವಿಸ್ ಅವರಿಗೆ ಸ್ಥಾನ ನೀಡಿದೆ. ಈ ನಿರ್ಧಾರ ಮುಂಬೈ ಇಂಡಿಯನ್ಸ್ ನೆಲ ಕಚ್ಚುವುದಕ್ಕೆ ಮತ್ತೊಂದು ಕಾರಣವಾಗಿದೆ.

3. ಫ್ಯಾಬಿಯನ್ ಅಲೆನ್ ಅವರಿಗೆ ಅವಕಾಶ ನೀಡದೆ ಇರುವುದು
ಐಪಿಎಲ್ ಇತಿಹಾಸದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಪರ ಕಣಕ್ಕಿಳಿದು ಹೆಚ್ಚು ಆಡುವ ಅವಕಾಶಗಳನ್ನು ಪಡೆದುಕೊಳ್ಳದೇ ಇರುವ ಫ್ಯಾಬಿಯನ್ ಅಲೆನ್ ಅವರನ್ನು ಈ ಬಾರಿ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿತು. ಕೆರಿಬಿಯನ್‌ನ ಈ ಕ್ರಿಕೆಟಿಗ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಮಿಂಚುವ ಸಾಮರ್ಥ್ಯ ಹೊಂದಿರುವಂತಹ ಆಟಗಾರನಾಗಿದ್ದು, ಮುಂಬೈ ಇಂಡಿಯನ್ಸ್ ಕಣಕ್ಕಿಳಿಯುವ ಅವಕಾಶವನ್ನು ನೀಡದೇ ಇರುವುದು ಫ್ರಾಂಚೈಸಿ ಮಾಡುತ್ತಿರುವ ಮತ್ತೊಂದು ಮಹಾ ತಪ್ಪಾಗಿದೆ.

4. ನುರಿತ ಬೌಲರ್‌ಗಳ ಕೊರತೆ
ಮುಂಬೈ ಇಂಡಿಯನ್ಸ್ ನುರಿತ ಬೌಲರ್‌ಗಳನ್ನು ಹೆಚ್ಚಾಗಿ ಹೊಂದಿದ್ದ ತಂಡವಾಗಿತ್ತು. ಜಸ್ ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್ ಮತ್ತು ಆ್ಯಡಮ್ ಮಿಲ್ನೆ ರೀತಿಯ ಅನುಭವಿ ಬೌಲರ್‌ಗಳನ್ನು ಹೊಂದಿದ್ದ ಮುಂಬೈ ಇಂಡಿಯನ್ಸ್ ತಾನು ಟ್ರೋಫಿ ಗೆದ್ದ ಆವೃತ್ತಿಗಳಲ್ಲಿ ತಂಡದಲ್ಲಿ ಅನುಭವಿ ಬೌಲರ್‌ಗಳನ್ನು ಹೆಚ್ಚಾಗಿ ಹೊಂದಿತ್ತು. ಆದರೆ ಈ ಬಾರಿ ತಂಡದಿಂದ ಟ್ರೆಂಟ್ ಬೌಲ್ಟ್, ಆ್ಯಡಂ ಮಿಲ್ನೆ ಮತ್ತು ರಾಹುಲ್ ಚಹರ್ ರೀತಿಯ ಬೌಲರ್‌ಗಳನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹೊರಬಿಟ್ಟಿದ್ದು ಮಾಡಿದ ಮಹಾ ಪ್ರಮಾದವಾಗಿದೆ.

5. ಹಾರ್ದಿಕ್ ಪಾಂಡ್ಯರನ್ನು ರಿಟೈನ್ ಮಾಡಿಕೊಳ್ಳದೇ ಇದ್ದದ್ದು
ಮುಂಬೈ ಇಂಡಿಯನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಕೆಲವು ಆಟಗಾರರ ಪೈಕಿ ಹಾರ್ದಿಕ್ ಪಾಂಡ್ಯ ಕೂಡ ಓರ್ವರು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ತಂಡಕ್ಕೆ ಆಸರೆಯಾಗುತ್ತಿದ್ದ ಹಾರ್ದಿಕ್ ಪಾಂಡ್ಯ 2015ರಿಂದಲೂ ಫ್ರಾಂಚೈಸಿಯ ಅತಿ ನಂಬುಗೆಯ ಆಟಗಾರನಾಗಿದ್ದರು. ಹಲವಾರು ಕಷ್ಟದ ಸಂದರ್ಭಗಳಲ್ಲಿ ತಂಡಕ್ಕೆ ಆಸರೆಯಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈ ಬಾರಿ ತಂಡದಲ್ಲಿ ರಿಟೈನ್ ಮಾಡಿಕೊಳ್ಳದೇ ಕೈ ಬಿಟ್ಟದ್ದು ತಂಡ ಮಾಡಿದ ಮತ್ತೊಂದು ಮಹಾ ತಪ್ಪಾಗಿದೆ. ಹೀಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಲವಾರು ಪಂದ್ಯಗಳಲ್ಲಿ ಆಪತ್ಬಾಂಧವನಾಗಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿಯ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಕಣಕ್ಕಿಳಿದಿದ್ದು ಆಡಿರುವ ಮೊದಲ 5 ಪಂದ್ಯಗಳಲ್ಲಿ 228 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಪೈಪೋಟಿಗಿಳಿದಿದ್ದಾರೆ. ಇನ್ನು ಗುಜರಾತ್ ಟೈಟನ್ಸ್ ಪರ ಬೌಲಿಂಗ್ ಮಾಡಿಯೂ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯರನ್ನು ಕೈಬಿಟ್ಟ ಮುಂಬೈ ಇಂಡಿಯನ್ಸ್ ನಿಜಕ್ಕೂ ಹಿನ್ನಡೆ ಅನುಭವಿಸಿದೆ.


Click it and Unblock the Notifications












