
1. ಕ್ವಿಂಟನ್ ಡಿ ಕಾಕ್
2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ತಂಡದ ಪರ ಕಣಕ್ಕಿಳಿದು 13 ಪಂದ್ಯಗಳನ್ನಾಡಿ 445 ರನ್ ಕಲೆಹಾಕಿದ್ದ ಕ್ವಿಂಟನ್ ಡಿ ಕಾಕ್ ಅಬ್ಬರಿಸಿ ಹೆಸರು ಮಾಡಿದರು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿ ಹೇಳಿಕೊಳ್ಳುವಂತ ಪ್ರದರ್ಶನ ನೀಡುವಲ್ಲಿ ಎಡವಿದ ಕ್ವಿಂಟನ್ ಡಿ ಕಾಕ್ 2019ರಲ್ಲಿ ಮುಂಬೈ ಇಂಡಿಯನ್ಸ್ ಸೇರಿದರು. ಆ ಆವೃತ್ತಿಯಲ್ಲಿ 16 ಪಂದ್ಯಗಳನ್ನಾಡಿ 529 ರನ್ ಕಲೆಹಾಕಿದ್ದ ಕ್ವಿಂಟನ್ ಡಿ ಕಾಕ್ ಮುಂಬೈ ಇಂಡಿಯನ್ಸ್ ತನ್ನ ನಾಲ್ಕನೇ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ನಂತರ ನಡೆದ 202೦ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 16 ಪಂದ್ಯಗಳನ್ನಾಡಿ 503 ರನ್ ಕಲೆಹಾಕಿದ ಡಿ ಕಾಕ್ ಮುಂಬೈ ಇಂಡಿಯನ್ಸ್ ಐದನೇ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇನ್ನು 2021ರ ಐಪಿಎಲ್ ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿ 297 ರನ್ ಕಲೆಹಾಕಿದ ಕ್ವಿಂಟನ್ ಡಿ ಕಾಕ್ ಉತ್ತಮ ಪ್ರದರ್ಶನವನ್ನೇನೂ ನೀಡಲಿಲ್ಲ ಹಾಗೂ ಮುಂಬೈ ಇಂಡಿಯನ್ಸ್ ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡುವಲ್ಲಿ ಎಡವಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿತ್ತು. ಹೀಗೆ ಒಂದು ಟೂರ್ನಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ ಕ್ವಿಂಟನ್ ಡಿ ಕಾಕ್ ಅವರನ್ನು ಕೈಬಿಟ್ಟ ಮುಂಬೈ ಇಂಡಿಯನ್ಸ್ ಇದೀಗ ಕೈಸುಟ್ಟುಕೊಂಡಿದೆ. ಮುಂಬೈ ಇಂಡಿಯನ್ಸ್‌ನಿಂದ ಹೊರಬಿದ್ದ ಕ್ವಿಂಟನ್ ಡಿ ಕಾಕ್ ಈ ಬಾರಿಯ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸೇರಿರುವ ಕ್ವಿಂಟನ್ ಡಿ ಕಾಕ್ 6 ಪಂದ್ಯಗಳನ್ನಾಡಿ 212 ರನ್ ಕಲೆಹಾಕಿ ಮಿಂಚುತ್ತಿದ್ದಾರೆ.

2. ಫಾಫ್ ಡು ಪ್ಲೆಸಿಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿದು 16 ಪಂದ್ಯಗಳಲ್ಲಿ 633 ರನ್ ಚಚ್ಚಿದ್ದ ಫಾಫ್ ಡು ಪ್ಲೆಸಿಸ್ ಆರೆಂಜ್ ಕ್ಯಾಪ್ ವಿಜೇತನಾಗುವುದನ್ನು ಕೇವಲ 2 ರನ್‌ಗಳಿಂದ ಕೈತಪ್ಪಿಸಿಕೊಂಡಿದ್ದರು. ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 59 ಎಸೆತಗಳಲ್ಲಿ೦ 86 ರನ್ ಕಲೆಹಾಕಿದ್ದ ಫಾಫ್ ಡು ಪ್ಲೆಸಿಸ್ ತಂಡ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಡು ಪ್ಲೆಸಿಸ್ ಅವರನ್ನು ಕೈಬಿಟ್ಟಿದ್ದು, ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿರುವ ಫಾಫ್ ನಾಯಕನಾಗಿ ಆಯ್ಕೆಯಾಗಿದ್ದು, 6 ಪಂದ್ಯಗಳನ್ನಾಡಿ 154 ರನ್ ಗಳಿಸಿದ್ದಾರೆ.

3. ಅವೇಶ್ ಖಾನ್
2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 16 ಪಂದ್ಯಗಳನ್ನಾಡಿ 24 ವಿಕೆಟ್ ಪಡೆದು ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದ ಅವೇಶ್ ಖಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಉಳಿಸಿಕೊಳ್ಳದೇ ಕೈಬಿಟ್ಟಿತು. ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಿದ್ದ ಅವೇಶ್ ಖಾನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದಿದ್ದು, 6 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ಮಿಂಚುತ್ತಿದ್ದಾರೆ.

4. ಶುಬ್‌ಮನ್ ಗಿಲ್
2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ 14 ಪಂದ್ಯಗಳಲ್ಲಿ 440 ರನ್ ಕಲೆಹಾಕಿದ್ದ ಶುಬ್‌ಮನ್ ಗಿಲ್ 2021ರ ಟೂರ್ನಿಯಲ್ಲಿಯೂ ಕೆಕೆಆರ್ ಪರ ಕಣಕ್ಕಿಳಿದು 17 ಪಂದ್ಯಗಳಲ್ಲಿ 478 ರನ್ ಕಲೆಹಾಕಿದ್ದರು. ಹೀಗೆ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದ ಶುಬ್‌ಮನ್ ಗಿಲ್ ಅವರನ್ನು ಕೋಲ್ಕತ್ತಾ ಫ್ರಾಂಚೈಸಿ ಹೊರಗಿಟ್ಟ ಪರಿಣಾಮ ಈ ಬಾರಿ ಗುಜರಾತ್ ಟೈಟನ್ಸ್ ಪರ ಕಣಕ್ಕಿಳಿದು ಆಡಿರುವ 6 ಪಂದ್ಯಗಳ ಪೈಕಿ 200 ರನ್ ಕಲೆಹಾಕಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ.

5. ಯುಜುವೇಂದ್ರ ಚಹಲ್
2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ಇಂಡಿಯನ್ ಪ್ರೀಮಿಯ್ ಲೀಗ್‌ಗೆ ಪದಾರ್ಪಣೆ ಮಾಡಿದ್ದ ಯುಜುವೇಂದ್ರ ಚಹಲ್ ನಂತರದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಆರ್‌ಸಿಬಿ ತಂಡವನ್ನೆ ಪ್ರತಿನಿಧಿಸಿದರು. ಈ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ ಅಸ್ತ್ರವಾಗಿದ್ದ ಯುಜುವೇಂದ್ರ ಚಾಹಲ್ ಅವರನ್ನು ಫ್ರಾಂಚೈಸಿ ರಿಟೈನ್ ಮಾಡಿಕೊಳ್ಳದೇ ಹೊರಗಿಟ್ಟಿದ್ದು, ಸದ್ಯ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿರುವ ಚಹಾಲ್ 6 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಟಾಪ್‌ನಲ್ಲಿದ್ದಾರೆ.


Click it and Unblock the Notifications












