ಐಪಿಎಲ್ 2022: ಅನ್‌ಸೋಲ್ಡ್ ಆದ ಈ 5 ಪ್ರಮುಖ ಬೌಲರ್‌ಗಳಿಗೆ ಇನ್ನೂ ಇದೆ ಐಪಿಎಲ್ ಪ್ರವೇಶಿಸುವ ಅವಕಾಶ

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಇದೇ ತಿಂಗಳ 26ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಟೂರ್ನಿಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.
ಇನ್ನು ಈ ಬಾರಿ ಟ್ರೋಫಿಗಾಗಿ ಒಟ್ಟು 10 ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು, ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಹಂತದಲ್ಲಿ 58 ದಿನಗಳಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. ಟೂರ್ನಿಯ ಲೀಗ್ ಹಂತದ ಎಲ್ಲಾ ಪಂದ್ಯಗಳು ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ ನಗರಗಳ ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಈಗಾಗಲೇ ಹಲವಾರು ಆಟಗಾರರು ಟೂರ್ನಿಗಾಗಿ ಅಭ್ಯಾಸಗಳನ್ನು ಕೂಡ ಆರಂಭಿಸಿದ್ದಾರೆ. ಹೌದು, ಇತ್ತೀಚೆಗಷ್ಟೇ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ವಿವಿಧ ತಂಡಗಳನ್ನು ಸೇರಿದ ಆಟಗಾರರು ಅಭ್ಯಾಸದಲ್ಲಿ ತೊಡಗಿಕೊಂಡಿದ್ದರೆ,ಇನ್ನೂ ಹಲವಾರು ಪ್ರಮುಖ ಆಟಗಾರರು ಮೆಗಾ ಹರಾಜಿನಲ್ಲಿ ಬಿಕರಿಯಾಗದೇ ಹೊರಗುಳಿದಿದ್ದಾರೆ. ಹೀಗೆ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗಿರುವ ಆಟಗಾರರು ಗಾಯದ ಸಮಸ್ಯೆಗೆ ಒಳಗಾದರೆ ಅಥವಾ ಇನ್ನಿತರ ಕಾರಣಗಳಿಂದ ಟೂರ್ನಿಯಿಂದ ಹೊರಗುಳಿದರೆ ಈ ಕೆಳಕಂಡ ಐವರು ಪ್ರಮುಖ ಬೌಲರ್‌ಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳಬಲ್ಲ ಸಾಧ್ಯತೆಗಳಿವೆ.

1. ಆ್ಯಂಡ್ರ್ಯೂ ಟೈ
ಚುಟುಕು ಕ್ರಿಕೆಟ್‍ನಲ್ಲಿ ತನ್ನ ಮಾರಕ ಬೌಲಿಂಗ್ ದಾಳಿಯ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಆ್ಯಂಡ್ರ್ಯೂ ಟೈ ಈ ಬಾರಿಯ ಐಪಿಎಲ್ ಟೂರ್ನಿಗೆ ಬದಲಿ ಆಟಗಾರನಾಗಿ ಪ್ರವೇಶಿಸಬಹುದಾದ ಸಾಧ್ಯತೆಗಳಿವೆ. ಇನ್ನು ಒಟ್ಟು 27 ಐಪಿಎಲ್ ಪಂದ್ಯಗಳನ್ನಾಡಿ 40 ವಿಕೆಟ್ ಪಡೆದಿರುವ ಆ್ಯಂಡ್ರೂ ಟೈ 32 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿ 47 ವಿಕೆಟ್‍ಗಳನ್ನು ಪಡೆದಿದ್ದಾರೆ. ಹೀಗೆ ಉತ್ತಮ ಪ್ರದರ್ಶನ ನೀಡಿರುವ ಆ್ಯಂಡ್ರ್ಯೂ ಟೈ ಈಗಾಗಲೇ ಬಿಕರಿಯಾಗಿರುವ ಯಾವುದಾದರೂ ಪ್ರಮುಖ ಬೌಲರ್ ಟೂರ್ನಿಯಿಂದ ಹೊರಗುಳಿದರೆ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ.

2. ಅಮಿತ್ ಮಿಶ್ರಾ
ಸ್ಪಿನ್ ಬೌಲರ್‌ಗಳು ಐಪಿಎಲ್ ಟೂರ್ನಿಗಳಲ್ಲಿ ಹೆಚ್ಚು ವಿಕೆಟ್‍ಗಳನ್ನು ಪಡೆಯುವುದು ಅನುಮಾನ ಎಂದು ಹೆಚ್ಚು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಈ ಎಲ್ಲಾ ಅಭಿಪ್ರಾಯಗಳನ್ನು ಹುಸಿಗೊಳಿಸಿದ ಸ್ಪಿನ್ ಬೌಲರ್‌ಗಳ ಪೈಕಿ ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ ಬೌಲರ್ ಅಮಿತ್ ಮಿಶ್ರಾ ಕೂಡ ಓರ್ವರು. 154 ಐಪಿಎಲ್ ಪಂದ್ಯಗಳನ್ನಾಡಿ 7.35 ಎಕಾನಮಿಯಲ್ಲಿ 166 ವಿಕೆಟ್ ಪಡೆದಿರುವ ಅಮಿತ್ ಮಿಶ್ರಾ ಈ ಬಾರಿ ಬದಲಿ ಆಟಗಾರನಾಗಿ ಐಪಿಎಲ್ ಪ್ರವೇಶಿಸುವ ಸಾಧ್ಯತೆಗಳಿವೆ.

3. ಆದಿಲ್ ರಶೀದ್
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಟಗಾರರ ನಡುವಿನ ಪೈಪೋಟಿ ಎಷ್ಟರಮಟ್ಟಿಗೆ ಇರುತ್ತದೆ ಎಂಬುದಕ್ಕೆ ಅತ್ಯುತ್ತಮ ಟಿ ಟ್ವೆಂಟಿ ಬೌಲರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆದಿಲ್ ರಶೀದ್ ಬಿಕರಿಯಾಗದೆ ಉಳಿದದ್ದು ಉತ್ತಮ ಉದಾಹರಣೆ ಎಂದೇ ಹೇಳಬಹುದು. ತಂಡವೊಂದು ಲೆಗ್ ಸ್ಪಿನ್ ಬೌಲರ್‌ಗಾಗಿ ಹುಡುಕಾಟ ನಡೆಸಿದಾಗ ಆದಿಲ್ ರಶೀದ್ ಹೆಸರು ಬರದೇ ಇರಲಾರದು. ಇಂತಹ ಆಟಗಾರ ಈ ಬಾರಿ ಬಿಕರಿಯಾಗದೇ ಇದ್ದದ್ದು ದೊಡ್ಡ ಆಶ್ಚರ್ಯವನ್ನು ಮೂಡಿಸಿದ್ದು, ಬದಲಿ ಆಟಗಾರನಾಗಿ ಈ ಬಾರಿಯ ಐಪಿಎಲ್ ಆಡುವ ಅವಕಾಶ ಆದಿಲ್ ರಶೀದ್ ಅವರಿಗೆ ದೊರೆತರೂ ದೊರಕಬಹುದು.

4. ತಬ್ರೇಜ್ ಸಂಶಿ
ಅತ್ಯುತ್ತಮ ಅಂತರರಾಷ್ಟ್ರೀಯ ಟಿ ಟ್ವೆಂಟಿ ಬೌಲರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಆದಿಲ್ ರಶೀದ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದೇ ಉಳಿದದ್ದು ಒಂದೆಡೆ ಆಶ್ಚರ್ಯವನ್ನುಂಟು ಮಾಡಿದರೆ, ಇದೇ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮತ್ತೋರ್ವ ಬೌಲರ್ ತಬ್ರೇಜ್ ಸಂಶಿ ಕೂಡ ಬಿಕರಿಯಾಗದೇ ಉಳಿದದ್ದು ಮತ್ತಷ್ಟು ಆಶ್ಚರ್ಯವನ್ನುಂಟು ಮಾಡಿದೆ. 47 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ 57 ವಿಕೆಟ್ ಪಡೆದಿರುವ ತಬ್ರೇಜ್ ಸಂಶಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬದಲಿ ಆಟಗಾರನಾಗಿ ಯಾವುದಾದರೊಂದು ತಂಡ ಸೇರುವ ಸಾಧ್ಯತೆಗಳಿವೆ.

5. ಆ್ಯಂಡಂ ಜಂಪಾ
14 ಐಪಿಎಲ್ ಪಂದ್ಯಗಳನ್ನಾಡಿ 21 ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಆ್ಯಡಮ್ ಜಂಪಾ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬಯೋ ಬಬಲ್ ವ್ಯವಸ್ಥೆಯ ಕುರಿತು ವಿರೋಧ ವ್ಯಕ್ತಪಡಿಸಿ ವಿವಾದಕ್ಕೀಡಾಗಿದ್ದರು. ಅಷ್ಟೇ ಅಲ್ಲದೆ ಟೂರ್ನಿಯನ್ನು ಕೂಡ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಪಯಣವನ್ನು ಬೆಳೆಸಿದ್ದರು. ಈ ರೀತಿ ವಿವಾದವನ್ನು ಮೈಮೇಲೆ ಎಳೆದುಕೊಂಡ ಆ್ಯಡಮ್ ಜಂಪಾ ಈ ಬಾರಿಯ ಹರಾಜಿನಲ್ಲಿ ಯಾವ ಫ್ರಾಂಚೈಸಿಯಿಂದಲೂ ಖರೀಸಿದಲ್ಪಡದೇ ಹೊರಬಿದ್ದಿದ್ದಾರೆ. ಇನ್ನು ತಂಡಗಳಲ್ಲಿನ ಯಾರಾದರೂ ಬೌಲರ್ ಟೂರ್ನಿಯಿಂದ ಹೊರಗುಳಿದರೆ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಆ್ಯಡಮ್ ಜಂಪಾ ಅವಕಾಶ ಪಡೆದುಕೊಳ್ಳಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications