ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ್ದ ಐವರು ಅತಿ ಕಳಪೆ ಆಟಗಾರರಿವರು!

ಚೆನ್ನೈ ಸೂಪರ್ ಕಿಂಗ್ಸ್, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ಸನ್ನು ಕಂಡ ಎರಡನೇ ತಂಡ ಎಂಬ ಖ್ಯಾತಿಯನ್ನು ಹೊಂದಿರುವಂತಹ ತಂಡವಾಗಿದೆ. ಆಡಿರುವ ಬಹುತೇಕ ಆವೃತ್ತಿಗಳಲ್ಲಿ ಪ್ಲೇಆಫ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಒಟ್ಟು 4 ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದು ಮುಖಭಂಗಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಂತರ ನಡೆದ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿಯುವ ಮೂಲಕ ಕಮ್‌ಬ್ಯಾಕ್ ಮಾಡಿ ಟೀಕಾಕಾರರಿಗೆ ಉತ್ತರವನ್ನು ನೀಡಿತ್ತು.
ಇನ್ನು ತನ್ನ ತಂಡದ ಆಟಗಾರರನ್ನು ಬಿಟ್ಟುಕೊಡದೇ ಕೆಲವೊಂದಷ್ಟು ನಿರ್ದಿಷ್ಟ ಆಟಗಾರರನ್ನು ಹಲವು ಟೂರ್ನಿಗಳಲ್ಲಿ ಕಣಕ್ಕಿಳಿಸಿ ಯಶಸ್ಸು ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಕೆಲವೊಂದಷ್ಟು ಆಟಗಾರರನ್ನು ಖರೀದಿಸಿ ಅವರು ನಿರೀಕ್ಷಿಸಿದ ಪ್ರದರ್ಶನ ನೀಡಲಾಗದೇ ಹಿನ್ನಡೆ ಅನುಭವಿಸಿರುವ ಉದಾಹರಣೆಗಳೂ ಸಹ ಇವೆ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿ ಕೈಸುಟ್ಟುಕೊಂಡ ಕಳಪೆ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

1. ಟಿಮ್ ಸೌಥಿ
2011ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನ್ಯೂಜಿಲೆಂಡ್‌ನ ಬೌಲರ್ ಟಿಮ್ ಸೌಥಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಪರ ಹೇಳಿಕೊಳ್ಳುವಂತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗದ ಟಿಮ್ ಸೌಥಿ 5 ಪಂದ್ಯಗಳನ್ನಾಡಿ ಕೇವಲ 4 ವಿಕೆಟ್ ಗಳಿಸುವಲ್ಲಿ ಮಾತ್ರ ಶಕ್ತರಾದರು. ನಂತರದ ಆವೃತ್ತಿಗಳಲ್ಲಿ ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ ಕಣಕ್ಕಿಳಿದ ಟಿಮ್ ಸೌಥಿ ಅಲ್ಲಿಯೂ ಸಹ ಯಶಸ್ವಿಯಾಗಲಿಲ್ಲ.

2. ಸ್ಕಾಟ್ ಸ್ಟೈರಿಸ್
ಮತ್ತೋರ್ವ ನ್ಯೂಜಿಲೆಂಡ್ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿ ಕೈಸುಟ್ಟುಕೊಂಡಿತ್ತು. ಡೆತ್ ಓವರ್‌ಗಳಲ್ಲಿ ಎದುರಾಳಿಗಳ ಮೇಲೆ ಹಿಡಿತ ಸಾಧಿಸಬಲ್ಲ ಸಾಮರ್ಥ್ಯವಿರುವ ಸ್ಕಾಟ್ ಸ್ಟೈರಿಸ್ ಚೆನ್ನೈ ಸೂಪರ್ ಕಿಂಗ್ಸ್ ಪರ 2011ರಲ್ಲಿ ಕಣಕ್ಕಿಳಿದಾಗ ಇದೇ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ತಂಡದ ಪರ ಕೇವಲ 2 ಪಂದ್ಯಗಳಲ್ಲಿ 5 ರನ್ ಕಲೆಹಾಕಿದ್ದ ಸ್ಕಾಟ್ ಸ್ಟೈರಿಸ್ ಒಂದು ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯದೇ 13 ರನ್ ನೀಡಿದ್ದರು.

3. ಜಾರ್ಜ್ ಬೈಲಿ
ಜಾರ್ಜ್ ಬೈಲಿ ಅವರ ಹೆಸರನ್ನು ಈ ಪಟ್ಟಿಯಲ್ಲಿ ನೋಡಿ ಹಲವರಿಗೆ ಆಶ್ಚರ್ಯವಾಗಬಹುದು. ಹೌದು, ಪ್ರತಿಭಾವಂತ ಆಟಗಾರ ಜಾರ್ಜ್ ಬೈಲಿ 2009ರಿಂದ 2012ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯನಾಗಿದ್ದರು. ತಂಡದ ಪರ ಒಟ್ಟು 4 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದ ಬೈಲಿ ಕೇವಲ 63 ರನ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದರು.

4. ಜೇಸನ್ ಹೋಲ್ಡರ್
2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ್ದ ಜೇಸನ್ ಹೋಲ್ಡರ್ ನಿರೀಕ್ಷಿಸಿದ್ದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ತಂಡದ ಪರ 6 ಪಂದ್ಯಗಳನ್ನಾಡಿದ್ದ ಜೇಸನ್ ಹೋಲ್ಡರ್ 2 ವಿಕೆಟ್‌ಗಳನ್ನು ಮಾತ್ರ ಪಡೆದು ನೆಲಕಚ್ಚಿದ್ದರು.

5. ಆಂಡ್ರ್ಯೂ ಫ್ಲಿಂಟಫ್
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿ ದೊಡ್ಡ ಹೆಸರನ್ನು ಮಾಡಿದ್ದ ಇಂಗ್ಲೆಂಡ್ ಬೌಲರ್ ಆಂಡ್ರ್ಯೂ ಫ್ಲಿಂಟಫ್ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ್ದಾಗ ಸಾಕಷ್ಟು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತ್ತು. ಆದರೆ, ಈ ನಿರೀಕ್ಷೆಯ ಮಟ್ಟವನ್ನು ಮುಟ್ಟುವಲ್ಲಿ ಎಡವಿದ್ದ ಆಂಡ್ರ್ಯೂ ಫ್ಲಿಂಟಫ್ ಬೌಲಿಂಗ್‌ನಲ್ಲಿ ಹೆಚ್ಚು ರನ್ ನೀಡಿ ದುಬಾರಿಯಾಗಿ ಕಳಪೆ ಪ್ರದರ್ಶನ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications