ಐಪಿಎಲ್ 2022 ಮೆಗಾ ಹರಾಜು: 590 ಆಟಗಾರರ ಅಂತಿಮ ಹರಾಜು ಪಟ್ಟಿ ಬಿಡುಗಡೆ

ಐಪಿಎಲ್ 2022 ಆವೃತ್ತಿಯ ಆರಂಭಕ್ಕೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಅದಕ್ಕೆ ಸಂಬಂಧಿಸಿದ ಬೆಳವಣಿಗೆಗಳು ನಡೆಯುತ್ತಿದೆ. ಇದೀಗ ಬಿಸಿಸಿಐ ಫೆಬ್ರವರಿ 1ರಂದು ಈ ಬಾರಿಯ ಮಹಾ ಹರಾಜಿನಲ್ಲಿ ಭಾಗಿಯಾಗಲಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಐಪಿಎಲ್‌ನಲ್ಲಿ ಭಾಗವಹಿಸಲು ಇಚ್ಚಿಸಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪರಿಷ್ಕರಿಸಿದ್ದು ಅಂತಿಮ ಪಟ್ಟಿಯಲ್ಲಿ 590 ಆಟಗಾರರನ್ನು ಮಾತ್ರವೇ ಉಳಿಸಿಕೊಂಡಿದೆ.
ಈ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಫೆಬ್ರವರಿ 12 ಹಾಗೂ 13ರಂದು ನಡೆಯಲಿದೆ. ಈ ಹರಾಜು ಪಟ್ಟಿಯಲ್ಲಿರುವ 590 ಆಟಗಾರರ ಪೈಕಿ ಮುಂಬರುವ ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಎಲ್ಲಾ 10 ತಂಡಗಳು ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಪೈಪೋಟಿ ನಡೆಸಲಿದೆ. ಇನ್ನು ಈ ಹರಾಜಿನಲ್ಲಿ ಭಾಗವಹಿಸುತ್ತಿರುವ ಆಟಗಾರರ ಪೈಕಿ 228 ಕ್ಯಾಪ್‌ಡ್ ಆಟಗಾರರು ಹಾಗೂ 355 ಅನ್‌ಕ್ಯಾಪ್‌ಡ್ ಆಟಗಾರರು ಇದ್ದಾರೆ. 7 ಆಟಗಾರರು ಅಸೀಸಿಯೇಟ್ ರಾಷ್ಟ್ರಗಳಿಂದ ಹೆಸರು ನೊಂದಾಯಿಸಿದವರಾಗಿದ್ದಾರೆ.
ಇನ್ನು ಈ ಹರಾಜಿನಲ್ಲಿ ಭಾಗವಹಿಸುವ ಆಟಗಾರರ ತಮ್ಮ ಮೂಲ ಬೆಲೆಯನ್ನು ನಿಗದಿಪಡಿಸಿಕೊಂಡಿದ್ದು ಅತೊ ಹೆಚ್ಚು ಮೂಲ ಬೆಲೆಯಾದ 2 ಕೋಟಿ ವಿಭಾಗದಲ್ಲಿ 48 ಆಟಗಾರರು ಹೆಸರು ನೊಂದಾಯಿಸಿದ್ದಾರೆ. ಇನ್ನು 20 ಆಟಗಾರರು 1.5 ಕೋಟಿಗೆ ಹೆಸರು ನೊಂದಾಯಿಸಿದ್ದು 34 ಕ್ರಿಕೆಟಿಗರು 1 ಕೋಟಿ ಮೂಲ ಬೆಲೆ ಹೆಸರು ನೊಂದಾಯಿಸಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ ಮಹಾ ಹರಾಜಿನಲ್ಲಿ ಭಾಗಿಯಾಗುತ್ತಿರುವ ಆಟಗಾರರ ಪೈಕಿ 10 ಆಟಗಾರರನ್ನು ಬಿಸಿಸಿಐ ಪ್ರಮುಖ ಆಟಗಾರರು ಎಂದು ಗುರುತಿಸಿದೆ. ಶಿಖರ್ ಧವನ್, ಮೊಹಮ್ಮದ್ ಶಮಿ, ಫಾಪ್ ಡು ಪ್ಲೆಸಿಸ್, ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ಶ್ರೇಯಸ್ ಐಯ್ಯರ್, ಆರ್ ಅಶ್ವಿನ್, ಕ್ವಿಂಟನ್ ಡಿಕಾಕ್, ಕಗಿಸೋ ರಬಾಡ ಹಾಗೂ ಟ್ರೆಂಟ್ ಬೋಲ್ಟ್ ಹರಾಜಿನಲ್ಲಿ ಭಾಗವಹಿಸುತ್ತಿರುವ ಪ್ರಮುಖ 10 ಆಟಗಾರರರು ಎಂದು ಬಿಸಿಸಿಐ ಹೆಸರಿಸಿದೆ. ಇನ್ನು ಈ ಬಾರಿಯ ಈ ಹರಾಜು ಪ್ರಕ್ರಿಯೆಯಿಂದ ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಹಾಗೂ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹಿಂದಕ್ಕೆ ಸರಿದಿದ್ದಾರೆ.
ಈ ಮಹಾ ಹರಾಜಿನಲ್ಲಿ ಭಾರತದ ಒಟ್ಟು 370 ಆಟಗಾರರು ಭಾಗಿಯಾಗಿದ್ದು 220 ವಿದೇಶಿ ಆಟಗಾರರಿದ್ದಾರೆ. ವಿದೇಶಿ ಆಟಗಾರರ ಪೈಕಿ ಆಸ್ಟ್ರೇಲಿಯಾದಿಂದ ಅತಿ ಹೆಚ್ಚು 47 ಆಟಗಾರರು ಈ ಅಂತಿಮ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರೆ ವೆಸ್ಟ್ ಇಂಡೀಸ್‌ನ 34 ಆಟಗಾರರು, ದಕ್ಷಿಣ ಆಪ್ರಿಕಾದ 33, ಇಂಗ್ಲೆಂಡ್ ಹಾಘೂ ನ್ಯೂಜಿಲೆಂಡ್‌ನಿಂದ ತಲಾ 24 ಆಟಗಾರರು, ಶ್ರೀಲಂಕಾ ದಿಂದ 23 ಆಟಗಾರರು, ಅಫ್ಘಾನಿಸ್ತಾನದಿಂದ 17 ಆಟಗಾರರು, ಬಾಂಗ್ಲಾದೇಶ ಹಾಗೂ ಐರ್ಲೆಂಡ್‌ನಿಂದ ತಲಾ 5 ಆಟಗಾರರು ನಮೀಬಿಯಾದಿಂದ 3 ಆಟಗಾರರು ಮತ್ತು ಜಿಂಬಾಬ್ವೆ, ನೇಪಾಳ ಹಾಗೂ ಯುಎಸ್‌ಎಯ ತಲಾ ಒಬ್ಬರು ಆಟಗಾರರು ಹರಾಜಿನಲ್ಲಿ ಭಾಗವಹಿಸುತ್ತಿದ್ದಾರೆ.
2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರ ಸಂಪೂರ್ಣ ಪಟ್ಟಿ:
ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ಯಾಟ್ ಕಮ್ಮಿನ್ಸ್, ಕ್ವಿಂಟನ್ ಡಿ ಕಾಕ್, ಶಿಖರ್ ಧವನ್, ಫಾಫ್ ಡು ಪ್ಲೆಸಿಸ್, ಕಗಿಸೊ ರಬಾಡ, ಮೊಹಮ್ಮದ್ ಶಮಿ, ಡೇವಿಡ್ ವಾರ್ನರ್, ಶಿಮ್ರಾನ್ ಹೆಟ್ಮೆಯರ್, ಡೇವಿಡ್ ಮಿಲ್ಲರ್, ಸುರೇಶ್ ರೈನಾ, ಜೇಸನ್ ರಾಯ್, ಸ್ಟೀವ್ ಸ್ಮಿತ್, ರಾಬಿನ್ ಉತ್ತಪ್ಪ, ಶಕೀಬ್ ಅಲ್ ಹಸನ್, ಮಿಚೆಲ್ ಮಾರ್ಷ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಇಶಾನ್ ಕಿಶನ್, ಸ್ಯಾಮ್ ಬಿಲ್ಲಿಂಗ್ಸ್, ದಿನೇಶ್ ಕಾರ್ತಿಕ್, ಅಂಬಟಿ ರಾಯುಡು, ಮ್ಯಾಥ್ಯೂ ವೇಡ್, ದೀಪಕ್ ಚಹಾರ್, ಲಾಕಿ ಫರ್ಗುಸನ್, ಜೋಶ್ ಹ್ಯಾಜಲ್ವುಡ್, ಭುವನೇಶ್ವರ್ ಕುಮಾರ್, ಮುಸ್ತಫಿಜುರ್ ರೆಹಮಾನ್, ಶಾರ್ದೂಲ್ ಠಾಕೂರ್, ಮಾರ್ಕ್ ವುಡ್, ಉಮೇಶ್ ಯಾದವ್, ಯುಜುವೇಂದ್ರ ಚಾಹಲ್, ಆದಿಲ್ ರಶೀದ್, ಇಮ್ರಾನ್ ತಾಹಿರ್, ಆಡಮ್ ಝಂಪಾ, ಮುಜೀಬ್ ಜದ್ರಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications