ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಆರ್‌ಸಿಬಿಗೆ ಮರಳುತ್ತಾರಾ ಎಬಿ ಡಿವಿಲಿಯರ್ಸ್? ಸುಳಿವು ಕೊಟ್ರಾ ವಿರಾಟ್ ಕೊಹ್ಲಿ?

IPL 2022: AB de Villiers Will Be Back At RCB Next Year Virat Kohli Gives Hint

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೇಳಿ ಬರುವ ದೊಡ್ಡ ಹೆಸರುಗಳಲ್ಲಿ ಒಂದಾಗಿತ್ತು. ಆದರೆ ದೀರ್ಘಕಾಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಭಾಗವಾಗಿದ್ದ ಎಬಿಡಿ, ಸದ್ಯ ನಡೆಯುತ್ತಿರುವ 15ನೇ ಋತುವಿನ ಐಪಿಎಲ್ ಪಂದ್ಯಾವಳಿಯ ಮುಂಚಿತವಾಗಿ ಎಲ್ಲಾ ಪ್ರಕಾರದ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

ಮಿಸ್ಟರ್ 360 ಎಂದೇ 'ನಿಕ್ ನೇಮ್' ಹೊಂದಿರುವ ಅತ್ಯಂತ ಬಹುಮುಖ ಬ್ಯಾಟರ್‌ಗಳಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್ ಅವರು ಹಲವು ವರ್ಷಗಳ ಕಾಲ ಆರ್‌ಸಿಬಿ ತಂಡದ ಅತ್ಯಂತ ನಿರ್ಣಾಯಕ ಹಾಗೂ ನಿಷ್ಠೆಯ ಆಟಗಾರರಾಗಿದ್ದರು. ಆಗಾಗ್ಗೆ ತಂಡವನ್ನು ಕಷ್ಟಕರ ಸಂದರ್ಭಗಳಿಂದ ತಮ್ಮ ಬ್ಯಾಟ್ ಮೂಲಕ ಬಚಾವ್ ಮಾಡುತ್ತಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ರವೀಂದ್ರ ಜಡೇಜಾ IPL 2022ಯಿಂದ ಔಟ್?ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ರವೀಂದ್ರ ಜಡೇಜಾ IPL 2022ಯಿಂದ ಔಟ್?

ಈ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ ತಂಡ ಪ್ಲೇ-ಆಫ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದರೂ, ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯು ತಂಡಕ್ಕೆ ಕಾಡುತ್ತಿದೆ. ಒಬ್ಬರೇ ಬ್ಯಾಟಿಂಗ್, ಫೀಲ್ಡಿಂಗ್‌ನಲ್ಲಿ ತಂಡಕ್ಕೆ ನೆರವಾಗುತ್ತಿದ್ದರು. ವಿಶೇಷವಾಗಿ ಈ ಬಾರಿಯ ಕೆಲವು ಸೋಲುಗಳಲ್ಲಿ ಎಬಿಡಿ ಬ್ಯಾಟಿಂಗ್ ಅನ್ನು ತಂಡ ಹಾಗೂ ಅಭಿಮಾನಿಗಳು ಮಿಸ್ ಮಾಡಿಕೊಂಡರು.

ಎಬಿಡಿಯೊಂದಿಗೆ ವಿರಾಟ್ ನಿಕಟ ಬಾಂಧವ್ಯ

ಎಬಿಡಿಯೊಂದಿಗೆ ವಿರಾಟ್ ನಿಕಟ ಬಾಂಧವ್ಯ

ಐಪಿಎಲ್‌ನ ಉದ್ಘಾಟನಾ ಆವೃತ್ತಿಯಿಂದಲೂ ಫ್ರಾಂಚೈಸಿಯೊಂದಿಗೆ ಇರುವ ಮಾಜಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಮಾಂತ್ರಿಕ ಎಬಿಡಿಯೊಂದಿಗಿನ ನಿಕಟ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ ಮತ್ತು ಮಧ್ಯದಲ್ಲಿ ಅವರ ಪಾಲುದಾರಿಕೆಯು ತಂಡಕ್ಕೆ ಅಪ್ರತಿಮವಾಗಿದೆ ಎಂದಿದ್ದಾರೆ.

ಆರ್‌ಸಿಬಿ ಫ್ರಾಂಚೈಸ್‌ಗಾಗಿ ಕಂಟೆಂಟ್ ಕ್ರಿಯೇಟರ್ ಡ್ಯಾನಿಶ್ ಸೇಠ್ ಅವರ ಪಾತ್ರವಾದ 'ಮಿಸ್ಟರ್ ನಾಗ್ಸ್' ಜೊತೆ ಮಾತನಾಡುತ್ತಾ, ವಿರಾಟ್ ಕೊಹ್ಲಿ ಅವರು ಡಿವಿಲಿಯರ್ಸ್‌ನನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು ಮತ್ತು ಎಬಿ ಡಿವಿಲಿಯರ್ಸ್ ಮತ್ತೆ ಆರ್‌ಸಿಬಿಗೆ ಮರಳುವ ಸಾಧ್ಯತೆಯ ಬಗ್ಗೆ ಸುಳಿವು ಬಿಟ್ಟುಕೊಟ್ಟರು.

ಕೊಹ್ಲಿಯ ಕಾಲೆಳೆದ ಮಿಸ್ಟರ್ ನಾಗ್ಸ್

ಕೊಹ್ಲಿಯ ಕಾಲೆಳೆದ ಮಿಸ್ಟರ್ ನಾಗ್ಸ್

ಈ ವರ್ಷದ ಸಂದರ್ಶನದಲ್ಲಿ 'ಮಿಸ್ಟರ್ ನಾಗ್ಸ್' ಅವರು ಹಲವು ವರ್ಷಗಳಿಂದ ಮಾಡಿದಂತೆಯೇ ಕೊಹ್ಲಿಯನ್ನು ಪ್ರಶ್ನೆಗಳಿಂದ ಹಾಗೂ ಕಾಲೆಳೆಯುವ ಮೂಲಕ ಕಿರಿಕಿರಿಗೊಳಿಸಲು ಪ್ರಯತ್ನಿಸುತ್ತಿದ್ದರೂ ಸಹ ವಿರಾಟ್ ಕೊಹ್ಲಿ ಶಾಂತವಾಗಿ ಮತ್ತು ಪ್ರಾಮಾಣಿಕ ಉತ್ತರಿಸಿದರು.

"ನಾನು ಅವರನ್ನು (ಎಬಿಡಿ) ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಅವರೊಂದಿಗೆ ನಿಯಮಿತವಾಗಿ ಮಾತನಾಡುತ್ತೇನೆ. ಅವರು ನನಗೆ ಸಂದೇಶ ಕಳುಹಿಸುತ್ತಲೇ ಇರುತ್ತಾರೆ," ಎಂದು ವಿರಾಟ್ ಕೊಹ್ಲಿ ಅವರು ಮಿಸ್ಟರ್ ನಾಗ್ಸ್ ಜೊತೆಗಿನ ಸಂವಾದದ ವಿಡಿಯೋದಲ್ಲಿ ಹೇಳಿದ್ದಾರೆ.

ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿಶ್ರಾಂತಿ

ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿಶ್ರಾಂತಿ

"ಎಬಿಡಿ ಇತ್ತೀಚಿಗೆ ಯುಎಸ್‌ನಲ್ಲಿ ಗಾಲ್ಫ್ ವೀಕ್ಷಿಸುತ್ತಿದ್ದರು. ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿಶ್ರಾಂತಿ ಅನುಭವಿಸುತ್ತಿದ್ದೇನೆ ಎಂದು ನನಗೆ ಹೇಳಿದರು," ಎಂದು ವಿರಾಟ್ ಕೊಹ್ಲಿ ತಿಳಿಸಿದರು.

"ನಾವು(ಆರ್‌ಸಿಬಿ) ಸಂಪರ್ಕದಲ್ಲಿರುತ್ತೇವೆ ಮತ್ತು ಅವರು ಆರ್‌ಸಿಬಿ ಪಂದ್ಯವನ್ನು ಬಹಳ ಉತ್ಸುಕತೆಯಿಂದ ವೀಕ್ಷಿಸುತ್ತಿದ್ದಾರೆ ಮತ್ತು ಮುಂದಿನ ವರ್ಷ ಸ್ವಲ್ಪ ಸಾಮರ್ಥ್ಯದಲ್ಲಿ ತಂಡಕ್ಕೆ ಬರುತ್ತಾರೆ ಎಂದು ಭಾವಿಸುತ್ತೇವೆ," ಎಂದು ವಿರಾಟ್ ಕೊಹ್ಲಿ ಸುಳಿವು ನೀಡಿದರು.

ಎಬಿ ಡಿವಿಲಿಯರ್ಸ್‌ನ ಥ್ರೋಬ್ಯಾಕ್ ಬ್ಯಾಕ್‌ಸ್ಟೇಜ್ ಬಗ್ಗೆ ಹೇಳಿದ್ದು ಸ್ಪಷ್ಟ

ಎಬಿ ಡಿವಿಲಿಯರ್ಸ್‌ನ ಥ್ರೋಬ್ಯಾಕ್ ಬ್ಯಾಕ್‌ಸ್ಟೇಜ್ ಬಗ್ಗೆ ಹೇಳಿದ್ದು ಸ್ಪಷ್ಟ

ವಿರಾಟ್ ಕೊಹ್ಲಿ ಈ ದೊಡ್ಡ ಹೇಳಿಕೆಯನ್ನು ನೀಡುವ ವಿಡಿಯೋವನ್ನು ಪ್ಲೇಬ್ಯಾಕ್ ಮಾಡಿದ ನಂತರ ಎಬಿ ಡಿವಿಲಿಯರ್ಸ್‌ನ ಥ್ರೋಬ್ಯಾಕ್ ಬ್ಯಾಕ್‌ಸ್ಟೇಜ್ ಬಗ್ಗೆ ಹೇಳಿದ್ದು ಸ್ಪಷ್ಟವಾಗಿತ್ತು. ನಾನು ಸುಳಿವು ಬಿಟ್ಟುಕೊಟ್ಟೆನೇ? ಎಂದು ವಿರಾಟ್ ಕೊಹ್ಲಿ ಒಂದು ಕಿರುನಗೆಯೊಂದಿಗೆ ಕೇಳಿದರು.

ಎಬಿ ಡಿವಿಲಿಯರ್ಸ್ 2011ರಲ್ಲಿ ಆರ್‌ಸಿಬಿಗೆ ಸೇರಿಕೊಂಡರು ಮತ್ತು 11 ಋತುಗಳಲ್ಲಿ ಫ್ರಾಂಚೈಸಿಯನ್ನು ಪ್ರತಿನಿಧಿಸಿದರು. ಅವರು 2011 ಮತ್ತು 2016ರಲ್ಲಿ ಫೈನಲ್ ತಲುಪುವಲ್ಲಿ ತಂಡಕ್ಕೆ ಅವರ ಕೊಡುಗೆ ಅಪಾರವಾಗಿತ್ತು. ಆದರೂ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಸಾಧ್ಯವಾಗಲಿಲ್ಲ.

ಈ ವರ್ಷದ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸ್ತುತ ಅಂಕಗಳ ಪಟ್ಟಿಯಲ್ಲಿ 12 ಪಂದ್ಯಗಳಿಂದ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

Story first published: Wednesday, May 11, 2022, 16:13 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X