ಐಪಿಎಲ್: 10 ಓವರ್‌ಗಳಲ್ಲಿ 117 ರನ್!; ಪಡಿಕ್ಕಲ್ ಜಾಗ ತುಂಬಲು ಆರ್‌ಸಿಬಿಗೆ ಸಿಕ್ಕ ಸ್ಪೋಟಕ ಆಟಗಾರ

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಮೀಸುತ್ತಿದ್ದಂತೆ ಎಲ್ಲಾ ತಂಡಗಳು ವಿಭಿನ್ನವಾದ ರೀತಿಯಲ್ಲಿ ಅಭ್ಯಾಸಗಳನ್ನು ಆರಂಭಿಸಿದ್ದು, ಒಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಮಹಾರಾಷ್ಟ್ರದ ಪಿಚ್‌ಗಳಲ್ಲಿರುವ ಮಣ್ಣನ್ನೇ ಬಳಸಲಾಗಿರುವ ಸೂರತ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದರೆ ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿ ಆರಂಭಕ್ಕೂ ಮುನ್ನ ಅನುಕರಣಾ ಪಂದ್ಯಗಳನ್ನು ಆಡುವುದರ ಮೂಲಕ ಟೂರ್ನಿಗಾಗಿ ತಯಾರಿಯನ್ನು ನಡೆಸುತ್ತಿದೆ. ಹೌದು, ಸದ್ಯ ಮುಂಬೈ ತಲುಪಿ ಅಭ್ಯಾಸವನ್ನು ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಿಗೆ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅನುಕರಣಾ ಪಂದ್ಯವನ್ನು ಆಡಿಸಿದ್ದಾರೆ. ಈ ಪಂದ್ಯದ ಮೊದಲ 10 ಓವರ್‌ಗಳಲ್ಲಿ 80-90 ರನ್‌ಗಳನ್ನು ಬಾರಿಸಬೇಕೆಂಬ ಗುರಿಯನ್ನು ಸಂಜಯ್ ಬಂಗಾರ್ ನೀಡಿದ್ದರು. ಹಾಗೂ 12 - 20 ಓವರ್‌ಗಳಲ್ಲಿ 100 ರನ್ ಬಾರಿಸಬೇಕು ಎಂಬ ಗುರಿಯನ್ನು ನೀಡಲಾಗಿತ್ತು.
ಹೀಗೆ ಬ್ಯಾಟಿಂಗ್ ವಿಭಾಗಕ್ಕೆ ಇಷ್ಟು ಓವರ್‌ಗಳಲ್ಲಿ ಇಷ್ಟು ರನ್ ಬಾರಿಸಿ ಎಂದು ಗುರಿಯನ್ನು ನೀಡಿದ ಸಂಜಯ್ ಬಂಗಾರ್ 16 - 20 ಓವರ್‌ಗಳಲ್ಲಿ ತಂಡದ ಬೌಲರ್‌ಗಳಿಗೆ 40 ರನ್ ಬಾರಿಸಬೇಕೆಂಬ ಜವಾಬ್ದಾರಿಯನ್ನೂ ನೀಡಿದ್ದರು. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ವಿಭಾಗಕ್ಕೆ ಮೂರು ವಿಭಿನ್ನ ಸಂದರ್ಭಗಳಲ್ಲಿ ಬ್ಯಾಟ್ ಬೀಸಿ ಇಷ್ಟು ರನ್ ಗಳಿಸಿ ಎಂಬ ಗುರಿಯನ್ನು ನೀಡಿದಾಗ ಈ ಸಂದರ್ಭಗಳಲ್ಲಿ ಯಾವ ಆಟಗಾರರು ಕಣಕ್ಕಿಳಿದರು ಹಾಗೂ ನೀಡಿದ್ದ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ್ರಾ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

10 ಓವರ್‌ಗಳಲ್ಲಿ 80-90 ಬಾರಿಸಲು ಇಬ್ಬರಿಗೆ ಸವಾಲು
ಸಂಜಯ್ ಬಂಗಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂಯನ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಯುವ ಕ್ರಿಕೆಟಿಗ ಅನುಜ್ ರಾವತ್ ಜೋಡಿಗೆ ಮೊದಲ 10 ಓವರ್‌ಗಳಲ್ಲಿ 80-90 ಬಾರಿಸುವಂತೆ ಸವಾಲನ್ನು ಹಾಕಿದರು. ಈ ಸವಾಲನ್ನು ಸ್ವೀಕರಿಸಿದ ಫಾಫ್ ಡು ಪ್ಲೆಸಿಸ್ ಫಾಫ್ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ ಜೋಡಿ 10 ಓವರ್‌ಗಳಲ್ಲಿ 117 ರನ್ ಬಾರಿಸಿ ಯಶಸ್ವಿಯಾಗಿದೆ. ನಾಯಕ ಫಾಫ್ ಡು ಪ್ಲೆಸಿಸ್ ಅಜೇಯ 77 ರನ್ ಸಿಡಿಸಿದರೆ, ಯುವ ಆಟಗಾರ ಅನುಜ್ ರಾವತ್ 44 ರನ್ ಗಳಿಸಿ ಅಂತಿಮ ಓವರ್‌ನಲ್ಲಿ ಔಟ್ ಆಗಿದ್ದಾರೆ. ಹೀಗೆ ಈ ಜೋಡಿ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರಿಸಿರುವುದು ಸದ್ಯ ಆರ್‌ಸಿಬಿ ಪರ ಯಾರು ಆರಂಭಿಸಲಿದ್ದಾರೆ ಎಂಬ ತಲೆನೋವಿಗೆ ಪರಿಹಾರ ದೊರಕುವಂತೆ ಮಾಡಿದೆ. ಅದರಲ್ಲಿಯೂ ಕಳೆದ ಬಾರಿ ಆರಂಭಿಕನಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿಗೆ ಈ ಇಬ್ಬರ ಆಟ ನೆಮ್ಮದಿ ನೀಡಿದ್ದು, ಈ ಬಾರಿ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಸಹಕಾರಿಯಾಗಲಿದೆ. ಇನ್ನು ಪಡಿಕ್ಕಲ್ ಹಾಗೂ ಕೊಹ್ಲಿ ಸ್ಥಾನವನ್ನು ಈ ಬಾರಿ ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆಗೆ ಈ ಅಭ್ಯಾಸ ಉತ್ತರವನ್ನು ನೀಡಿದ್ದು, ಫಾಫ್ ಡು ಪ್ಲೆಸಿಸ್ ಮತ್ತು ಅನೂಜ್ ರಾವತ್ ಜೋಡಿ ಆರಂಭಿಕರಾಗಿ ಕಣಕ್ಕಿಳಿದು ಮಿಂಚುವ ಭರವಸೆಯನ್ನು ಮೂಡಿಸಿದೆ.

8 ಓವರ್‌ಗಳಿಗೆ 100 ರನ್ ಬಾರಿಸುವಲ್ಲಿ ವಿಫಲರಾದ ಕಾರ್ತಿಕ್ - ರುಥರ್‌ಫೋರ್ಡ್ ಜೋಡಿ
ಇನ್ನು 12 - 20 ಓವರ್‌ಗಳಲ್ಲಿ 100 ರನ್ ಬಾರಿಸಿ ಎಂಬ ಸವಾಲನ್ನು ದಿನೇಶ್ ಕಾರ್ತಿಕ್ ಮತ್ತು ರುಥರ್‌ಫೋರ್ಡ್ ಜೋಡಿಗೆ ಹಾಕಲಾಗಿತ್ತು. ಈ ಸವಾಲನ್ನು ಯಶಸ್ವಿಯಾಗಿ ಪೂರೈಸುವಲ್ಲಿ ವಿಫಲವಾದ ಜೋಡಿ 8 ಓವರ್‌ಗಳಲ್ಲಿ 80 ರನ್ ಗಳಿಸಲಷ್ಟೇ ಶಕ್ತವಾಯಿತು. ರುಥರ್‌ಫೋರ್ಡ್ ಭರ್ಜರಿ ಅರ್ಧಶತಕ ಗಳಿಸಿದರೂ ಸಹ ದಿನೇಶ್ ಕಾರ್ತಿಕ್ ವಿಫಲತೆಯಿಂದ ಈ ಗುರಿಯನ್ನು ತಲುಪುವಲ್ಲಿ ಈ ಜೋಡಿ ವಿಫಲಗೊಂಡಿತು.


ವಾಸಿಮ್ ಜಾಫರ್ ಸಲಹೆಗೆ ಮತ್ತಷ್ಟು ಪುಷ್ಠಿ
ಇನ್ನು ಕಳೆದೆರಡು ದಿನಗಳ ಹಿಂದೆ ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಾಫ್ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಬೇಕು ಹಾಗೂ ವಿರಾಟ್ ಕೊಹ್ಲಿ ಆರಂಭಿಕನ ಸ್ಥಾನವನ್ನು ಬಿಟ್ಟು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು ಎಂಬ ಸಲಹೆಯನ್ನು ನೀಡಿದ್ದರು. ಸದ್ಯ ವಾಸಿಮ್ ಜಾಫರ್ ಹೇಳಿದಂತೆ ಅನುಜ್ ರಾವತ್ ಮತ್ತು ಫಾಫ್ ಡು ಪ್ಲೆಸಿಸ್ ಜೋಡಿ ಮೊದಲ ಹತ್ತು ಓವರ್‌ಗಳಲ್ಲಿ ಶತಕದ ಜತೆಯಾಟವನ್ನಾಡಿ ಭರವಸೆಯನ್ನು ಮೂಡಿಸಿದ್ದು, ವಿರಾಟ್ ಕೊಹ್ಲಿಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಸೂಚನೆ ಸಿಕ್ಕಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications