ಐಪಿಎಲ್ ಹರಾಜು: ಕುಸಿದು ಬಿದ್ದ ಹಗ್ ಎಡ್ಮೀಡ್ಸ್ ಬದಲು ಹರಾಜು ಕೂಗಲಿದ್ದಾರೆ ಆರ್‌ಸಿಬಿಯ ಮಾಜಿ ಸಿಇಒ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬೃಹತ್ ಮೆಗಾ ಹರಾಜು ಕಾರ್ಯಕ್ರಮ ಇಂದು ( ಫೆಬ್ರವರಿ 12 ) ಮತ್ತು ನಾಳೆ ( ಫೆಬ್ರವರಿ 13 ) 2 ದಿನಗಳ ಕಾಲ ನಡೆಯಬೇಕಿದೆ. ಹೀಗೆ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರಂಭವಾದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹರಾಜುಗಾರನಾಗಿ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದ ಬ್ರಿಟನ್ ಮೂಲದ ಹಗ್ ಎಡ್ಮೀಡ್ಸ್ ಕೆಲ ಸಮಯದಲ್ಲಿಯೇ ಕುಸಿದು ಬಿದ್ದಿದ್ದಾರೆ. ಮಧ್ಯಾಹ್ನದ ವೇಳೆಯಲ್ಲಿ ರಕ್ತದೊತ್ತಡ ಕಡಿಮೆಯಾದ ಕಾರಣ ಹಗ್ ಎಡ್ಮೀಡ್ಸ್ ಕುಸಿದು ಬಿದ್ದಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದು ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಹೀಗೆ ಚಿಕಿತ್ಸೆಗೊಳಗಾಗಿರುವ ಹಗ್ ಎಡ್ಮೀಡ್ಸ್ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿರುವ ಕಾರಣದಿಂದಾಗಿ ಮೆಗಾ ಹರಾಜು ಪ್ರಕ್ರಿಯೆಯನ್ನು ಮತ್ತೆ ಮುಂದುವರಿಸಲು ಅಸಾಧ್ಯವಾಗಿರುವ ಕಾರಣದಿಂದಾಗಿ ಇದೀಗ ವೀಕ್ಷಕ ವರದಿಗಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಸಿಇಒ ಚಾರು ಶರ್ಮಾ ಹರಾಜುಗಾರನಾಗಿ ಮೆಗಾ ಹರಾಜನ್ನು 3.30ರಿಂದ ಮುಂದುವರೆಸಲಿದ್ದಾರೆ.
2008ನೇ ಇಂಡಿಯನ್ ಪ್ರಿಮಿಯರ್ ಲೀಗ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಸಿಇಒ ಆಗಿದ್ದ ಚಾರು ಶರ್ಮಾ ಆ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಪ್ರದರ್ಶನ ನೀಡಿದ ಕಾರಣದಿಂದಾಗಿ ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯರಿಂದ ಹೊರಹಾಕಲ್ಪಟ್ಟಿದ್ದರು ಎಂಬ ಸುದ್ದಿಯೂ ಹರಿದಾಡಿತ್ತು. ಹೀಗೆ ಐಪಿಎಲ್ ಫ್ರಾಂಚೈಸಿಯ ಸಿಇಒ ಹಾಗೂ ಕಾಮೆಂಟೇಟರ್ ಆಗಿ ಕೆಲಸ ನಿರ್ವಹಿಸಿರುವ ಚಾರು ಶರ್ಮಾ ಪ್ರಸಿದ್ಧ ಪ್ರೋ ಕಬಡ್ಡಿ ಲೀಗ್‌ನ ನಿರ್ದೇಶಕರು ಕೂಡ ಹೌದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications