For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು: ಮೊದಲ ದಿನ ಹರಾಜಾಗದೆ ಉಳಿದ ಆಟಗಾರರ ಸಂಪೂರ್ಣ ಪಟ್ಟಿ

IPL 2022 Auction: Full List of Unsold Players So Far in IPL Auction 2022 details

ಐಪಿಎಲ್ ಮೆಹಾ ಹರಾಜಿನ ಮೊದಲ ದಿನ ಎಲ್ಲಾ ತಂಡಗಳು ಕೂಡ ಪ್ರಮುಖ ಆಟಗಾರರನ್ನು ತಮ್ಮ ತಮ್ಮ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಎರಡನೇ ದಿನವೂ ಹರಾಜು ನಡೆಯಲಿದ್ದು ಸುಮಾರು 200 ಆಟಗಾರರು ಎರಡನೇ ದಿನ ಹರಾಜಿನಲ್ಲಿ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲಿದ್ದಾರೆ. ಇದರಲ್ಲಿ ಕೆಲ ಫ್ರಾಂಚೈಸಿಗಳು ಪರ್ಸ್‌ನಲ್ಲಿ ಉತ್ತಮ ಪ್ರಮಾಣದ ಹಣವನ್ನು ಹೊಂದಿರುವ ಕಾರಣ ಎರಡನೇ ದಿನ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಇನ್ನು ಮೊದಲ ದಿನದ ಹರಾಜಿನಲ್ಲಿ ಸಾಕಷ್ಟು ಆಟಗಾರರು ಉತ್ತಮ ಮೊತ್ತವನ್ನು ಪಡೆದುಕೊಂಡಿದ್ದಾರೆ. ಇಶಾನ್ ಕಿಶನ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚಿನ ಮೊತ್ತಕ್ಕೆ ಹರಾಜಾದ ಭಾರತದ ಎರಡನೇ ಆಟಗಾರ ಎನಿಸಿದ್ದಾರೆ. ಇನ್ನು ದೀಪಕ್ ಚಾಹರ್, ಶ್ರೇಯಸ್ ಐಯ್ಯರ್ ಕೂಡ ಉತ್ತಮ ಮೊತ್ತವನ್ನು ಪಡೆದುಕೊಂಡಿದ್ದಾರೆ. ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್ ಅವರಂತಾ ಯುವ ಆಟಗಾರರಿಗೆ ಕೂಡ ಉತ್ತಮ ಮೊತ್ತ ದೊರೆತಿದೆ.

ಆದರೆ ಕೆಲ ಪ್ರಮುಖ ಆಟಗಾರರು ಐಪಿಎಲ್ ಮೊದಲ ದಿನದ ಹರಾಜಿನಲ್ಲಿ ಹರಾಜಾಗದೆ ಉಳಿದಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದರಲ್ಲಿ ಪ್ರಮುಖ ಹೆಸರು ಮಿಸ್ಟರ್ ಐಪಿಎಲ್ ಎಂದೇ ಖ್ಯಾತವಾಗಿರುವ ಸುರೇಶ್ ರೈನಾ. ಐಪಿಎಲ್ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಭಾಗವಾಗಿರುವ ಸುರೇಶ್ ರೈನಾ ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರು. ಹೀಗಾಗಿ ಸುರೇಶ್ ರೈನಾ ಅವರನ್ನು ಮತ್ತ ತಂಡಕ್ಕೆ ಸೇರ್ಪಡೆಗೊಳಿಸುವ ಮನಸ್ಸನ್ನು ಸಿಎಸ್‌ಕೆ ಫ್ರಾಂಚೈಸಿ ಮಾಡಿಕೊಂಡಿಲ್ಲ.

ಇನ್ನು ಹರಾಜಾಗದೆ ಉಳಿದ ಮತ್ತೋರ್ವ ಪ್ರಮುಖ ಆಟಗಾರನೆಂದರೆ ಡೇವಿಡ್ ಮಿಲ್ಲರ್. ದಕ್ಷಿಣ ಆಫ್ರಿಕಾದ ಈ ಸ್ಪೋಟಕ ಆಟಗಾರ ಇತ್ತೀಚಿನ ವರ್ಷಗಳಲ್ಲಿ ಐಪಿಎಲ್‌ನಲ್ಲಿ ಸಂಪೂರ್ಣ ಮಂಕಾಗಿದ್ದಾರೆ. ಹಾಗಾಗಿ ಈ ಬಾರಿ ಅವರನ್ನು ಕೂಡ ಯಾವುದೇ ತಂಡ ಕೊಳ್ಳುವ ಮನಸ್ಸು ಮಾಡಿಲ್ಲ.

ಇನ್ನು ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಕೂಡ ಹರಾಜಾಗದೆ ಉಳಿದ ಆಟಗಾರರ ಪಟ್ಟಿಯಲ್ಲಿದ್ದಾರೆ. ಐಪಿಎಲ್‌ನಲ್ಲಿ ನಾಯಕತ್ವವನ್ನು ಕೂಡ ವಹಿಸಿಕೊಂಡಿರುವ ಅನುಭವವಿರುವ ಸ್ಟೀವ್ ಸ್ಮಿತ್ ಆಟಗಾರನಾಗಿ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಕಳೆದ ಬಾರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದ ಸ್ಟೀವ್ ಸ್ಮಿತ್ ಈ ಬಾರಿ ಮೊದಲ ದಿನದ ಹರಾಜಿನಲ್ಲಿ ಯಾವ ಫ್ರಾಂಚೈಸಿ ಕೂಡ ತಮ್ಮ ತಂಡಕ್ಕೆ ಸೇರ್ಪಡೆಗೊಳಿಸುವ ಮನಸ್ಸು ಮಾಡಿಲ್ಲ.

ಇನ್ನು ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ, ವದ್ಧೀಮಾನ್ ಸಾಹಾ, ಉಮೇಶ್ ಯಾದವ್, ಅಮಿತ್ ಮಿಶ್ರಾ, ಆಡಂ ಜಂಪಾ, ಇಮ್ರಾನ್ ತಾಹೀರ್ ಮುಂತಾದ ಆಟಗಾರರು ಹರಾಜಾಗದೆ ಉಳಿದುಕೊಂಡಿರುವ ಪ್ರಮುಖ ಆಟಗಾರರಾಗಿದ್ದಾರೆ.

ಹರಾಜಾಗದೆ ಉಳಿದ ಆಟಗಾರರ ಪಟ್ಟಿ ಹಾಗೂ ಮೂಲಬೆಲೆ

ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) ಮೂಲಬೆಲೆ 1 ಕೋಟಿ ರೂ

ಸುರೇಶ್ ರೈನಾ (ಭಾರತ) 2 ಕೋಟಿ ರೂ

ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) 2 ಕೋಟಿ ರೂ

ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) 2 ಕೋಟಿ ರೂ

ಮೊಹಮ್ಮದ್ ನಬಿ (ಅಫ್ಘಾನಿಸ್ತಾನ) 1 ಕೋಟಿ ರೂ

ಸ್ಯಾಮ್ ಬಿಲ್ಲಿಂಗ್ಸ್ (ಇಂಗ್ಲೆಂಡ್) 2 ಕೋಟಿ ರೂ

ವೃದ್ಧಿಮಾನ್ ಸಹಾ (ಭಾರತ) 1 ಕೋಟಿ ರೂ

ಮ್ಯಾಥ್ಯೂ ವೇಡ್ (ಆಸ್ಟ್ರೇಲಿಯಾ) 2 ಕೋಟಿ ರೂ

ಉಮೇಶ್ ಯಾದವ್ (ಭಾರತ) 2 ಕೋಟಿ ರೂ

ಅಮಿತ್ ಮಿಶ್ರಾ (ಭಾರತ) 1.50 ಕೋಟಿ

ಆದಿಲ್ ರಶೀದ್ (ಇಂಗ್ಲೆಂಡ್) 2 ಕೋಟಿ ರೂ

ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ) 2 ಕೋಟಿ ರೂ

ಮುಜೀಬ್ ಝದ್ರಾನ್ (ಅಫ್ಘಾನಿಸ್ತಾನ) 2 ಕೋಟಿ ರೂ

ಆಡಮ್ ಝಂಪಾ (ಆಸ್ಟ್ರೇಲಿಯಾ) 2 ಕೋಟಿ ರೂ

ಸಿ. ಹರಿ ನಿಶಾಂತ್ (ಭಾರತ) 20 ಲಕ್ಷ

ರಜತ್ ಪಾಟಿದಾರ್ (ಭಾರತ) 20 ಲಕ್ಷ

ಅನ್ಮೋಲ್ಪ್ರೀತ್ ಸಿಂಗ್ (ಭಾರತ) 20 ಲಕ್ಷ

ಮೊಹಮ್ಮದ್ ಅಜರುದ್ದೀನ್ (ಭಾರತ) 20 ಲಕ್ಷ

ಎನ್. ಜಗದೀಸನ್ (ಭಾರತ) 20 ಲಕ್ಷ

ವಿಷ್ಣು ಸೋಲಂಕಿ (ಭಾರತ) 20 ಲಕ್ಷ

ವಿಷ್ಣು ವಿನೋದ್ (ಭಾರತ) 20 ಲಕ್ಷ

ಎಂ ಸಿದ್ಧಾರ್ಥ್ (ಭಾರತ) 20 ಲಕ್ಷ

ಸಂದೀಪ್ ಲಮಿಚಾನೆ (ನೇಪಾಳ) 40 ಲಕ್ಷ

Story first published: Sunday, February 13, 2022, 15:50 [IST]
Other articles published on Feb 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+