
ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರರ ಪಟ್ಟಿಯಲ್ಲಿ ದೀಪಕ್ ಚಾಹರ್ ಎರಡನೇ ಸ್ಥಾನದಲ್ಲಿದ್ದಾರೆ. ದೀಪಕ್ ಚಾಹರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 14 ಕೋಟಿ ನೀಡಿ ಮರಳಿ ಸೇರ್ಪಡೆಗೊಳಿಸಿದೆ. ಕಳೆದ ಬಾರಿಯ ಐಪಿಎಲ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದ ಚಾಹರ್ ಈ ಬಾರಿ ಸಹಜವಾಗಿಯೇ ಸಾಕಷ್ಟು ಬೇಡಿಕೆ ಪಡೆಯಲಿದ್ದಾರೆ ಎಂಬ ನಿರೀಕ್ಷೆಯಿತ್ತು. ಆದರೆ ಅದು 14 ಕೋಟಿಯನ್ನು ತಲುಪಲಿದೆ ಎಂದು ಯಾರೂ ಊಹಿಸಲಿರಲಿಲ್ಲ. ಆದರೆ ಸಿಎಸ್‌ಕೆ ಫ್ರಾಂಚೈಸಿ ದೀಪಕ್ ಚಾಹರ್ ಅವರನ್ನು ಕೊಂಡುಕೊಳ್ಳಲೇಬೇಕೆಂದು ನಿರ್ಧಾರ ಮಾಡಿದ ಕಾರಣ ದೊಡ್ಡ ಮೊತ್ತವನ್ನು ಗಳಿಸಿದ್ದಾರೆ.
ಈ ಹರಾಜಿನಲ್ಲಿ ಉತ್ತಮ ಮೊತ್ತವನ್ನು ಪಡೆದುಕೊಂಡಿರುವ ವಿಚಾರವಾಗಿ ದೀಪಕ್ ಚಾಹರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನನ್ನು ಮತ್ತೊಮ್ಮೆ ಖಂಡಿತಾ ಕೊಂಡುಕೊಳ್ಳಲಿದ್ದಾರೆ ಎಂಬ ವಿಶ್ವಾಸ ನನಗಿತ್ತು ಎಂದಿದ್ದಾರೆ ದೀಪಕ್ ಚಾಹರ್.
ಈ ಬಾರಿಯ ಹರಾಜಿಗೂ ಮುನ್ನ ನಡೆದಿದ್ದ ರೀಟೆನ್ಶನ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ದೀಪಕ್ ಚಾಹರ್ ಅವರನ್ನು ರೀಟೈಮ್ ಮಾಡಿಕೊಂಡಿರಲಿಲ್ಲ. ರೀಟೈನ್ ಅವಕಾಶವಿದ್ದ ನಾಲ್ಕು ಆಟಗಾರರ ಪೈಕಿ ಎಂಎಸ್ ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್ ಹಾಗೂ ಮೊಯೀನ್ ಅಲಿಯನ್ನು ಉಳಿಸಿಕೊಂಡಿತ್ತು. ಹೀಗಾಗಿ ಹರಾಜಿನಲ್ಲಿ ದೀಪಕ್ ಚಾಹರ್ ಅವರನ್ನು ಮರಳಿ ಪಡೆಯಲು ಸರ್ವ ಪ್ರಯತ್ನವನ್ನು ನಡೆಸಿ ಯಶಸ್ವಿಯಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ 10 ಕೋಟಿ ತಲುಪುವವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಹರಾಜು ಕಣಕ್ಕೆ ಧುಮುಕಿರಲಿಲ್ಲ. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಟಿಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಯುವ ವೇಗಿಗಾಗಿ ಪೈಪೋಟಿಗಿಳಿದಿದ್ದವು. 11 ಕೋಟಿಗೆ ಮೊದಲಿಗೆ ಬಿಡ್ಡಿಂಗ್‌ಗೆ ಇಳಿದಿತ್ತು ಸಿಎಸ್‌ಕೆ ನಂತರ ವಶಕ್ಕೆ ಪಡೆಯುವವರೆಗೂ ಎದುರಾಳಿಗಳಿಗೆ ಅವಕಾಶವನ್ನೇ ನೀಡಲಿಲ್ಲ.
ಸಿಎಸ್‌ಕೆ ಪರವಾಗಿ ನಂಭಿಕಾರ್ಹ ಬೌಲರ್ ಆಗಿ ದೀಪಕ್ ಚಾಹರ್ ಗುರುತಿಸಿಕೊಂಡಿದ್ದಾರೆ. ಪವರ್‌ಪ್ಲೇ ಓವರ್‌ಗಳಲ್ಲಿ ದೀಪಕ್ ಚಾಹರ್ ಅವನ್ನು ನಾನು ಎಂಎಸ್ ಧೋನಿ ಅದ್ಭುತವಾಗಿ ಬಳಸಿಕೊಂಡಿದ್ದರು. 2018ರಲ್ಲಿ ಸಿಎಸ್‌ಕೆ ತಂಡವನ್ನು ಸೇರಿಕೊಂಡ ಬಳಿಕ ಚಾಹರ್ 63 ಪಂದ್ಯಗಳಲ್ಲಿ 59 ವಿಕೆಟ್ ಸಂಪಾದಿಸಿದ್ದಾರೆ.
"ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಿರುವ ಕಾರಣದಿಂದಾಗಿ ನಾನು ಸಹವಾಗಿ ಸಂತಗೊಂಡಿದ್ದೇನೆ. ಈ ಬಾರಿ ಸಿಎಸ್‌ಕೆ ತಂಡಕ್ಕೆ ಮರಳಿದಾಗ ಬದಲಾವಣೆಯಾಗಿರಲಿದೆ ಎಂದು ನನಗೆ ಅನಿಸುತ್ತಿಲ್ಲ. ನಾನು ತಂಡಕ್ಕೆ ಮರಳಿದಾಗ ಕಳೆದ ನಾಲ್ಕು ವರ್ಷಗಳಲ್ಲಿ ತಂಡದಲ್ಲಿ ಕಂಡಿದ್ದ ಆಟಗಾರರನ್ನೇ ಮತ್ತೆ ಕಾಣಲಿದ್ದೇನೆ. ಬಹುಶಃ 6 ವರ್ಷಗಳಿಂದ ಇದೇ ಆಟಗಾರರ ತಂಡದಲ್ಲಿ ಆಡುತ್ತಿದ್ದೇನೆ. ಯಾಕೆಂದರೆ ನಾನು ಪುಣೆ ತಂಡದಲ್ಲಿ ಆಡುತ್ತಿದ್ದೆ. ಅಲ್ಲಿದ್ದ ಅರ್ಧದಷ್ಟು ಆಡಗಾರರು ಸಿಎಸ್‌ಕೆ ತಂಡದಲ್ಲಿದ್ದರು. ನಾನು ಇದಕ್ಕಿಂತ ಉತ್ತಮವಾದ ಹರಾಜನ್ನು ಹೊಂದಿರಲು ಸಾಧ್ಯವಿಲ್ಲ" ಎಂದು ಚಾಹರ್ ಸ್ಟಾರ್‌ಸ್ಪೋರ್ಟ್ಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ರೀಟೆನ್ಶನ್ ವಿಚಾರವಾಗಿ ನಾನು ಎಂಎಸ್ ಧೋನಿ ಅವರೊಂದಿಗಾಗಲಿ ಅಥವಾ ಮ್ಯಾನೇಜ್‌ಮೆಂಟ್ ಜೊತೆಗಾಗಲಿ ಚರ್ಚೆಯನ್ನು ನಡೆಸಿಲ್ಲ. ನನಗೆ ಅವರು 2018ರಲ್ಲಿಯೇ ಭರವಸೆ ನೀಡಿದ್ದರು. ನಾನು ಕಾಸಿ ಸರ್(ಕಾಸಿ ವಿಶ್ವನಾಥನ್) ಹಾಗೂ ಶ್ರೀನಿವಾಸನ್ (ಎನ್ ಶ್ರೀನಿವಾಸನ್) ಅವರನ್ನು ಭೇಟಿಯಾಗಿದ್ದಾಗ ಅವರು ನನ್ನ ಬಳಿ ನೀನು ಯಾವಾಗಲೂ ಚೆನ್ನೈ ಪರವಾಗಿ ಆಡುತ್ತೀಯಾ ಎಂದಿದ್ದರು" ಎಂದು ದೀಪಕ್ ಚಾಹರ್ ಹೇಳಿದ್ದಾರೆ.
"ನಾನು ಅವರು ಅಂದು ಆಡಿದ ಆ ಮಾತನ್ನು ನಂಬಿಕೊಂಡಿದ್ದೆ. ಹಾಗಾಗಿ ನಾನು ರೀಟೆನ್ಶನ್ ಬಗ್ಗೆಯಾಗಲಿ ಯಾವುದೇ ವಿಚಾರದ ಬಗ್ಗೆ ಅವರಲ್ಲಿ ಮಾತುಕತೆ ನಡೆಸಿಯೇ ಇಲ್ಲ. ಸಿಎಸ್‌ಕೆ ನನ್ನನ್ನು ಕೊಂಡುಕೊಳ್ಳಲಿದೆ ಎಂದು ನನಗೆ ಗೊತ್ತಿತ್ತು" ಎಂದಿದ್ದಾರೆ ದೀಪಕ್ ಚಾಹರ್. ಮತ್ತೊಂದು ಗಮನಾರ್ಹ ಅಂಶವೆಂದರೆ ಐಪಿಎಲ್ ಹರಾಜಿನ ಇತಿಹಾಸದಲ್ಲಿ ಒಂದೇ ಆಟಗಾರನ ಮೇಲೆ 10 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿರುದು ಇದೇ ಮೊದಲು.