ಐಪಿಎಲ್ ಮೆಗಾ ಹರಾಜು: ಸಮಯ, ನೇರ ಪ್ರಸಾರ, ಲೈವ್ ಸ್ಟ್ರೀಮಿಂಗ್

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು ಶನಿವಾರ ಹಾಗೂ ಭಾನುವಾರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಮೆಗಾ ಹರಾಜಿನಲ್ಲಿ ಒಟ್ಟು 590 ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಇವರಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಎಲ್ಲಾ ಫ್ರಾಂಚೈಸಿಗಳು ಲೆಕ್ಕಾಚಾರವನ್ನು ನಡೆಸುತ್ತಿದೆ. ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆಯಲಿದ್ದು 370 ಭಾರತೀಯರು ಹಾಗೂ 220 ವಿದೇಶಿ ಆಟಗಾರರು ಹರಾಜಿಗಾಗಿ ಎದುರು ನೋಡುತ್ತಿದ್ದಾರೆ.
ಈ ಬಾರಿಯ ಹರಾಜಿನಲ್ಲಿ ಕೆಲ ಪ್ರಮುಖ ಆಟಗಾರರ ಹೆಸರಿದ್ದು ಈ ಆಟಗಾರರು ಯಾವ ತಂಡದ ಪಾಲಾಗಲಿದ್ದಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ಶ್ರೇಯಸ್ ಐಯ್ಯರ್, ಇಶಾನ್ ಕಿಶನ್, ಆರ್ ಅಶ್ವಿನ್ ಮುಂತಾದ ಆಟಗಾರರ ಹರಾಜಿನ ಮೇಲೆ ತೀವ್ರ ಕುತೂಹಲವಿದೆ.
ಸಮಯ ಹಾಗೂ ಸ್ಥಳ: ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಶನಿವಾರ ಹಾಗೂ ಫೆಬ್ರವರಿ 13 ಭಾನುವಾರ ನಡೆಯಲಿದೆ. ಬೆಂಗಳೂರು ಹರಾಜು ನಡೆಯುವ ಕೇಂದ್ರವಾಗಿದ್ದು ಬಯೋಬಬಲ್ ವಾತಾವರಣದಲ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.
ನೇರಪ್ರಸಾರ ಹಾಗೂ ಲೈವ್ ಸ್ಟ್ರೀಮಿಂಗ್: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಈ ಹರಾಜು ಪ್ರಕ್ರಿಯೆಯ ನೇರಪ್ರಸಾರವನ್ನು ಮಾಡಲಿದೆ. ಡಿಸ್ನಿ+ ಹಾಟ್‌ಸ್ಟಾರ್ ಈ ಹರಾಜಿನ ಲೈವ್‌ಸ್ಟ್ರೀಮಿಂಗ್ ಮಾಡಲಿದೆ. ಮೈಖೇಲ್ ಕನ್ನಡ ಕೂಡ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನಿಮ್ಮ ಮುಂದಿಡಲಿದೆ.
ಸಮಯ: ಹರಾಜು ಪ್ರಕ್ರಿಯೆಯ ನೇರ ಪ್ರಸಾರ ಶನಿವಾರ ಬೆಳಿಗ್ಗೆ 11 ಗಂಟೆಯಿಂದಲೇ ಆರಂಭವಾಗಲಿದೆ. ಮಧ್ಯಾಹ್ನ 12ರ ಸುಮಾರಿಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಆದರೆ ಹರಾಜುಗೆ ಸಂಬಂಧಿಸಿದ ಚಟುವಟಿಕಗಳು ಬೆಳಗ್ಗನಿಂದಲೇ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications