For Quick Alerts
ALLOW NOTIFICATIONS  
For Daily Alerts
 

"ಯಾವ ತಂಡದ ಜರ್ಸಿ ಮಿಸ್ಸಾಗಿದೆ ನೆನ್ಪಾಗ್ತಿಲ್ಲ": 9ನೇ ತಂಡದ ಪರ ಆಡಲು ಸಜ್ಜಾದ ಆರೋನ್ ಫಿಂಚ್

IPL 2022:Australian skipper Aaron Finch reaction for signing KKR as record 9th team

ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಆರೋನ್ ಫಿಂಚ್ ಹರಾಜು ಪ್ರಕ್ರಿಯೆಯಲ್ಲಿ ಹರಾಜಾಗದೆ ಉಳಿದುಕೊಂಡಿದ್ದರೂ ಬದಲಿ ಆಟಗಾರನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಳ್ಳುವ ಮೂಲಕ ಫಿಂಚ್ ಐಪಿಎಲ್‌ನಲ್ಲಿ 9ನೇ ತಂಡದ ಪರವಾಗಿ ಆಡಲು ಸಜ್ಜಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ತಂಡಗಳನ್ನು ಪ್ರತಿನಿಧಿಸುತ್ತಿರುವ ವಿಶೇಷ ದಾಖಲೆಗೂ ಫಿಂಚ್ ಪಾತ್ರರಾಗಿದ್ದಾರೆ. ಅಲೆಕ್ಸ್ ಹೀಲ್ಸ್ ಬಯೋಬಬಲ್ ಕಾರಂದಿಂದಾಗಿ ಟೂರ್ನಿಯಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿರುವ ಕಾರಣ ಕೆಕೆಆರ್ ಆರೋನ್ ಫಿಂಚ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ.

ಆರೋನ್ ಫಿಂಚ್ ಐಪಿಎಲ್‌ನಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿದಿದ್ದು 2020ರ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿ. ಇದೀಗ ಕೆಕೆಆರ್ ತಂಡದ ಪರವಾಗಿ ಆಡುವ ಮೂಲಕ 9ನೇ ತಂಡದೊಂದಿಗೆ ಕಣಕ್ಕಿಳಿಯಲು ಫಿಳಚ್ ಸಜ್ಜಾಗಿದ್ದಾರೆ. 2010ರಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುವ ಮೂಲಕ ಚೊಚ್ಚಲ ಪಾರಿಗೆ ಐಪಿಎಲ್‌ನಲ್ಲಿ ಕಣಕ್ಕಿಳಿದಿದ್ದ ಫಿಂಚ್ ನಂತರ ಡೆಲ್ಲಿ ಡೇರ್‌ಡೆವಿಲ್ಸ್, ಪುಣೆ ವಾರಿಯರ್ಸ್, ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್ ಹಾಗೂ ಪಂಜಾಬ್ ಕಿಂಗ್ಸ ಜೊತೆಗೆ ಕಣಕ್ಕಿಳಿದಿದ್ದರು.

ಈ ಹಿನ್ನೆಲೆಯಲ್ಲಿ ಆರೋನ್ ಫಿಂಚ್ ಕ್ರಿಕೆಟ್.ಕಾಮ್.ಎಯು ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ನಗುತ್ತಾ ಐಪಿಎಲ್‌ನಲ್ಲಿ ಒಂದು ತಂಡದ ಜರ್ಸಿ ಮಿಸ್ಸಾಗಿದೆ. ಅದು ಯಾವುದು ಎಂಬುದು ನೆನಪಾಗ್ತಿಲ್ಲ" ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

"ನಾನು ನನ್ನ ಪತ್ನಿಯ ಜೊತೆಗೆ ಭೋಜನದಲ್ಲಿದ್ದೆ. ಪತ್ನಿಯೊಂದಿಗೆ ರಜಾ ಅವಧಿ ಕಳೆಯಲು ಯೋಜನೆ ರೂಪಿಸುವ ಮೊದಲು ಬ್ರೆಂಡನ್ ಮೆಕ್ಕಲಮ್ ಅವರಿಗೆ ಪತ್ರವನ್ನು ಬರೆದಿದ್ದೆ. ಕಳೆದ ಆರು ವರ್ಷಗಳಲ್ಲಿ ಪ್ರತೀ ಬಾರಿ ಪತ್ನಿಯೊಂದಿಗೆ ರಜಾ ದಿನಗಳನ್ನು ಕಳೆಯಲು ಯೋಜಿಸಿದಾಗ ಕೊನೇಯ ಕ್ಷಣದಲ್ಲಿ ಏನಾದರೂ ಅಡ್ಡಿಯಾಗುತ್ತದೆ. ಈ ಮಧ್ಯೆ ಕೋವಿಡ್ ಸಂದರ್ಭದಲ್ಲಿ ಇಬ್ಬರಿಗೂ ಕಷ್ಟವಾಗಿತ್ತು. ಕೆಕೆಆರ್ ತಂಡದಿಂದ ಈ ಕರೆ ಬಂದಾಗ ನನ್ನ ಪತ್ನಿಗೆ ಅಚ್ಚರಿಯಾಗಲಿಲ್ಲ. ನನಗೆ ಆಕೆ ಬೆಂಬಲವನ್ನು ನೀಡಿದ್ದಾರೆ. ನನ್ನ ಪತ್ನಿ ಹಾಗೂ ಮಗಳು ಎಸ್ತರ್ ಟೂರ್ನಿಯ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ" ಎಂದು ಆರೋನ್ ಫಿಂಚ್ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡದ ಸೀಮಿತ ಓವರ್‌ಗಳ ನಾಯಕನಾಗಿರುವ ಆರೋನ್ ಫಿಂಚ್ ಪಾಕಿಸ್ತಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿರುವ ಕಾರಣ ಆರಂಭಿಕ ಕೆಲ ಪಂದ್ಯಗಳಲ್ಲಿ ಭಾಗಿಯಾಗುವುದು ಅನುಮಾನವಾಗಿದೆ. ಕೆಕೆಆರ್ ತಂಡವನ್ನು ಕೂಡಿಕೊಂಡ ಬಳಿಕವೂ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳಲು ಫಿಂಚ್ ಸಾಕಷ್ಟು ಸ್ಪರ್ಧೆಯನ್ನು ತಂಡದ ಒಳಗೆ ಎದುರಿಸಬೇಕಿದೆ.

Story first published: Wednesday, March 23, 2022, 11:06 [IST]
Other articles published on Mar 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+