For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಆಸಿಸ್ ಸ್ಟಾರ್ ಮಿಚೆಲ್ ಮಾರ್ಶ್‌ಗೆ ಗಾಯ; ಐಪಿಎಲ್‌ಗೆ ಸಂಪೂರ್ಣ ಅಲಭ್ಯ?

IPL 2022: Australian star all-rounder Mitchell Marsh likely to miss IPL 15

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಸೀಮಿತ ಓವರ್‌ಗಳ ಸರಣಿಗೆ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಮಿಚೆಲ್ ಮಾರ್ಶ್ ಗಾಯಗೊಂಡಿದ್ದು ಪಾಕಿಸ್ತಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಸಂಪೂರ್ಣ ಹೊರಗುಳಿಯಲಿದ್ದಾರೆ. ತರಬೇತಿಯ ಸಂದರ್ಭದಲ್ಲಿ ಮಿಚೆಲ್ ಮಾರ್ಶ್ ಗಾಯಗೊಂಡಿದ್ದು ಮಾರ್ಶ್‌ಗೆ ಬದಲಿಯಾಗಿ ಕ್ಯಾಮರೂನ್ ಗ್ರೀನ್ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮಿಚೆಲ್ ಮಾರ್ಶ್ ಗಾಯಗೊಂಡಿರುವ ಕಾರಣ ಐಪಿಎಲ್‌ಗೂ ಅವರು ಅಲಭ್ಯವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 6.50 ಕೋಟಿಗೆ ಹರಾಜಾಗಿದ್ದ ಮಿಚೆಲ್ ಮಾರ್ಶ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಡಿಸಿ ತಂಡದ ಆಟಗಾರನಾಗಿದ್ದ ಮಾರ್ಕಸ್ ಸ್ಟೋಯ್ನಿಸ್‌ಗೆ ಬದಲಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ ಮಿಚೆಲ್ ಮಾರ್ಶ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು.

ಮಿಚೆಲ್ ಮಾರ್ಶ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಏಪ್ರಿಲ್ 6ರಂದು ಕೂಡಿ ಕೊಳ್ಳುವವರಿದ್ದರು. ಆದರೆ ಇದೀಗ ಗಾಯಗೊಂಡಿರುವ ಕಾರಣ ಸಂಪೂರ್ಣ ಟೂರ್ನಿಗೆ ಅಲಭ್ಯವಾಗುವ ಸಾಧ್ಯತೆಯಿದೆ. 2021ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಮಾರ್ಶ್ ಬಯೋಬಬಲ್ ಕಾರಣಕ್ಕೆ ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದರು.

ಇನ್ನು ಮಿಚೆಲ್ ಮಾರ್ಶ್ ಗಾಯದ ಬಗ್ಗೆ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ತಂಡದ ನಾಯಕ ಆರೋನ್ ಫಿಂಚ್ ಪ್ರತಿಕ್ರಿಯಿಸಿದ್ದಾರೆ. "ಮಿಚೆಲ್ ಮಾರ್ಶ್ ಗಾಯಕ್ಕೆ ಒಳಗಾಗಿದ್ದಾರೆ. ತರಬೇತಿಯ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದಾರೆ. ಹಾಗಾಗಿ ಮುಂದೇನಾಗಲಿದೆ ಎಂಬುದನ್ನು ನಾವು ಕಾದು ನೋಡಲಿದ್ದೇವೆ. ನಿನ್ನೆಯ ಪರಿಸ್ಥಿತಿಯನ್ನು ನೋಡಿದರೆ ಅವರು ಈ ಸರಣಿಗೆ ಅಲಭ್ಯವಾಗಲಿದ್ದಾರೆ" ಎಂದು ಪಾಕಿಸ್ತಾನ ವಿರುದ್ಧದ ಸರಣಿಯ ವಿಚಾರವಾಗಿ ಆರೋನ್ ಫಿಂಚ್ ಹೇಳಿಕೆ ನೀಡಿದ್ದಾರೆ. ಫೀಲ್ಡಿಂಗ್ ಅಭ್ಯಾಸದ ವೇಳೆ ಮಾರ್ಶ್ ಗಾಯಕ್ಕೆ ಒಳಗಾಗಿದ್ದಾರೆ. ಅವರು ತೀವ್ರ ನೋವನ್ನು ಅನುಭವಿಸಿದ್ದಾರೆ ಎಂದಿದ್ದಾರೆ ಆರೋನ್ ಫಿಂಚ್

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳ ಮಧ್ಯೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಅಂತ್ಯವಾಗಿದೆ. ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಆಸ್ಟ್ರೇಲಿಯಾ ವಶಕ್ಕೆ ಪಡೆದುಕೊಂಡಿದೆ. ಇನ್ನು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು ಮಂಗಳವಾರದಿಂದ ಈ ಸರಣಿ ಆರಂಭವಾಗಲಿದೆ. ಅದಾದ ಒಂದು ಟಿ20 ಪಂದ್ಯದಲ್ಲಿ ಕೂಡ ಪಾಕಿಸ್ತಾನ ತಂಡವನ್ನು ಆಸ್ಟ್ರೇಲಿಯಾ ಎದುರಿಸಲಿದೆ. 30ರ ಹರೆಯದ ಮಿಚೆಲ್ ಮಾರ್ಶ್ ಇತ್ತಿಚಿನ ದಿನಗಳಲ್ಲಿ ಆಸ್ಟ್ರೇಲಿಯಾ ಕಂಡ ಅತ್ಯುತ್ತಮ ವೈಟ್ ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ 2022: ರಿಷಬ್ ಪಂತ್ (ನಾಯಕ), ಅಕ್ಸರ್ ಪಟೇಲ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾರ್ದೂಲ್ ಠಾಕೂರ್, ಮುಸ್ತಫಿಜುರ್ ರೆಹಮಾನ್, ಕುಲದೀಪ್ ಯಾದವ್, ಅಶ್ವಿನ್ ಹೆಬ್ಬಾರ್, ಅಭಿಷೇಕ್ ಶರ್ಮಾ, ಕಮಲೇಶ್ ನಾಗರಕೋಟಿ, ಕೆಎಸ್ ಭರತ್, ಮನ್ದೀಪ್ ಸಿಂಗ್, ಖಲೀಲ್ ಅಹ್ಮದ್, ಚೇತನ್ ಸಕರಿಯಾ, ಲಲಿತ್ ಯಾದವ್, ರಿಪಾಲ್ ಪಟೇಲ್, ಯಶ್ ಧುಲ್, ರೋವ್ಮನ್ ಪೊವೆಲ್, ಪ್ರವೀಣ್ ದುಬೆ, ಲುಂಗಿ ಎನ್ಗಿಡಿ, ವಿಕ್ಕಿ ಓಸ್ತ್ವಾಲ್, ಸರ್ಫರಾಜ್ ಖಾನ್

Story first published: Tuesday, March 29, 2022, 10:51 [IST]
Other articles published on Mar 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+