ಐಪಿಎಲ್ 2022: ಮುಂಬೈ ಇಂಡಿಯನ್ಸ್‌ನಲ್ಲಿ ಅಬ್ಬರಿಸಿದ ಎಬಿಡಿ; ಬುಮ್ರಾ ಎಸೆತಗಳಿಗೆ ಭರ್ಜರಿ ಹೊಡೆತ

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮಾರ್ಚ್ 26ರಂದು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಇನ್ನು ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ಮಾರ್ಚ್ 27ರಂದು ನಡೆಯಲಿದೆ. ಹಾಗೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಭಿನ್ನತೆಗಳಿಂದ ಕೂಡಿರಲಿದ್ದು, ಹೊಸ ನಾಯಕರು, ಹೊಸ ತಂಡಗಳು, ಹೊಸ ನಿಯಮಗಳು ಹಾಗೂ ಹೊಸ ಆಟಗಾರರು ಇರಲಿದ್ದಾರೆ.
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಮೀಪಿಸುತ್ತಿದ್ದಂತೆ ಎಲ್ಲಾ ತಂಡಗಳ ಆಟಗಾರರು ಮೈದಾನಕ್ಕಿಳಿದು ಕಠಿಣ ಅಭ್ಯಾವನ್ನು ಆರಂಭಿಸಿದ್ದು, ತಂಡದ ನಾಯಕ ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಇನ್ನುಳಿದ ಆಟಗಾರರು ಭಾಗವಹಿಸಿದ್ದಾರೆ. ಹೀಗೆ ನಡೆದಿರುವ ಅಭ್ಯಾಸದಲ್ಲಿ ಇಂದು ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ತಂಡದ ಸಹ ಆಟಗಾರರಿಗೆ ಬೌಲಿಂಗ್ ಮಾಡಿದ್ದು, ಈ ವೇಳೆ ಬೇಬಿ ಎಬಿಡಿ ಬುಮ್ರಾ ಎಸೆದ ಎಸೆತಗಳಿಗೆ ಭರ್ಜರಿ ಹೊಡೆತಗಳನ್ನು ಬಾರಿಸಿದ್ದಾರೆ. ಬೇಬಿ ಎಬಿಡಿ ಬುಮ್ರಾ ಎಸೆತಗಳಿಗೆ ದೊಡ್ಡ ಹೊಡೆತಗಳನ್ನು ಬಾರಿಸಿರುವ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಹಾಗೂ ವೈರಲ್ ಆಗಿರುವ ಆ ವಿಡಿಯೋ ಈ ಕೆಳಕಂಡಂತಿದೆ ನೋಡಿ.

ನೆಟ್ ಅಭ್ಯಾಸದ ವೇಳೆ ಎಬಿಡಿ ರೀತಿಯೇ ಬ್ಯಾಟ್ ಬೀಸಿದ ಬೇಬಿ ಎಬಿಡಿ
ದಕ್ಷಿಣ ಆಫ್ರಿಕಾದ ಡಿವಾಲ್ಡ್ ಬ್ರೆವಿಸ್ ತಮ್ಮ ಬ್ಯಾಟಿಂಗ್ ಶೈಲಿಯಿಂದಲೇ ಬೇಬಿ ಎಬಿ ಡಿವಿಲಿಯರ್ಸ್ ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ. ಕಣಕ್ಕಿಳಿದು ಥೇಟ್ ಎಬಿ ಡಿವಿಲಿಯರ್ಸ್ ರೀತಿಯೇ ಬ್ಯಾಟಿಂಗ್ ಮಾಡುವ 18 ವರ್ಷದ ಬ್ರೆವಿಸ್ ಕಳೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಪರ ಅಬ್ಬರಿಸಿದ್ದರು. ಹೀಗೆ ಎಬಿಡಿ ರೀತಿ ಬ್ಯಾಟ್ ಬೀಸಿ ಬೇಬಿ ಎಬಿಡಿ ಎಂಬ ಹೆಸರನ್ನು ಮಾಡಿರುವ ಡಿವಾಲ್ಡ್ ಬ್ರೆವಿಸ್ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 3 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದು, ಸದ್ಯ ನೆಟ್ ಅಭ್ಯಾಸದಲ್ಲಿಯೂ ಎಬಿಡಿ ರೀತಿಯೇ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ. ಮೊದಲಿಗೆ ನಿಧಾನವಾಗಿ ಬ್ಯಾಟ್ ಬೀಸಿದ ಬ್ರೆವಿಸ್ ನೆಲಕಚ್ಚಿ ನಿಂತ ನಂತರ ದೊಡ್ಡ ಹೊಡೆತಗಳನ್ನು ಬಾರಿಸಿದ್ದು, ಎಬಿಡಿ ರೀತಿಯೇ 360 ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ಹಂಚಿಕೊಂಡಿರುವ ಈ ವಿಡಿಯೋ ಕಂಡ ನೆಟ್ಟಿಗರು ಈತ ನಿಜವಾಗಿಯೂ ಜೂನಿಯರ್ ಎಬಿಡಿ ಎಂದಿದ್ದಾರೆ.

ಆರ್‌ಸಿಬಿ ಬೇಬಿ ಎಬಿಡಿಯ ನೆಚ್ಚಿನ ತಂಡ
ಇನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಪಾಲಾಗಿರುವ ಡಿವಾಲ್ಡ್ ಬ್ರೆವಿಸ್‌ನ ನೆಚ್ಚಿನ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಐಪಿಎಲ್ ಪ್ರವೇಶಿಸುವುದಕ್ಕೂ ಮುನ್ನವೇ ತನ್ನ ಬಾಲ್ಯದಿಂದಲೂ ಆರ್‌ಸಿಬಿಗೆ ಬೆಂಬಲ ನೀಡುತ್ತಾ ಬಂದಿರುವ ಡಿವಾಲ್ಡ್ ಬ್ರೆವಿಸ್ ತಾನು ಎಬಿಡಿ ಹಾಗೂ ವಿರಾಟ್ ಕೊಹ್ಲಿ ಪ್ರತಿನಿಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ಹಾಗೂ ಡಿವಾಲ್ಡ್ ಬ್ರೆವಿಸ್ ಈ ಹಿಂದಿನಿಂದಲೂ ಎಬಿಡಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಂಬಲ ಸೂಚಿಸಿದ್ದ ಚಿತ್ರಗಳನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ಕಾಣಬಹುದಾಗಿದೆ.

ಮುಂಬೈ ಇಂಡಿಯನ್ಸ್ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ಬೆಸಿಲ್ ಥಂಪಿ, ಮುರುಗನ್ ಅಶ್ವಿನ್, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಾಂಡೆ, ಎನ್ ತಿಲಕ್ ವರ್ಮಾ, ಸಂಜಯ್ ಯಾದವ್, ಜೋಫ್ರಾ ಆರ್ಚರ್, ಡೇನಿಯಲ್ ಸಾಮ್ಸ್, ಟಿಮಲ್ ಮಿಲ್ಸ್ ಡೇವಿಡ್, ರಿಲೆ ಮೆರೆಡಿತ್, ಮೊಹಮ್ಮದ್ ಅರ್ಷದ್ ಖಾನ್, ಅನ್ಮೋಲ್ಪ್ರೀತ್ ಸಿಂಗ್, ರಮಣದೀಪ್ ಸಿಂಗ್, ರಾಹುಲ್ ಬುದ್ಧಿ, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಆರ್ಯನ್ ಜುಯಲ್, ಫ್ಯಾಬಿಯನ್ ಅಲೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications