ಐಪಿಎಲ್ 2022: CSKಗೆ ಮತ್ತೊಂದು ಆಘಾತ: ರೀಟೈನ್ ಮಾಡಿಕೊಂಡ ಆಟಗಾರನಿಗೆ ಗಾಯ!

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ತಂಡವಾಗಿ ಕಣಕ್ಕಿಳಿದಿದ್ದರೂ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳ ಪೈಕಿ ಸಿಎಸ್‌ಕೆ ಗೆದ್ದಿರುವುದು ಕೇವಲ 2 ಪಂದ್ಯಗಳನ್ನು ಮಾತ್ರ. ಹೀಗಾಗಿ ಸಿಎಸ್‌ಕೆ ಈ ಬಾರಿಯ ಆವೃತ್ತಿಯಲ್ಲಿ ಪ್ಲೇಆಫ್‌ಗೇರುವ ಅವಕಾಶಗಳು ಕ್ಷೀಣಿಸಿದೆ. ಸತತವಾಗಿ ಸೋಲು ಅನುಭವಿಸುತ್ತಿರುವುದು ಹಾಲಿ ಚಾಂಪಿಯನ್ನರ ಪಾಲಿಗೆ ಭಾರೀ ಆಘಾತ ನೀಡಿದೆ.
ಈಗಾಗಲೇ ಭಾರೀ ಬೆಲೆ ನೀಡಿ ಖರೀದಿಸಿರುವ ವೇಗದ ಬೌಲಿಂಗ್ ಆಲ್‌ರೌಂಡರ್ ದೀಪಕ್ ಚಾಹರ್ ಅಲಭ್ಯತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆ. ಈ ಸಂದರ್ಭದಲ್ಲಿ ಮತ್ತೋರ್ವ ಪ್ರಮುಖ ಆಲ್‌ರೌಂಡರ್ ಆಟಗಾರ ಕೂಡ ಗಾಯಗೊಂಡಿದ್ದು ಮುಂದಿನ ಕೆಲ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ಭಾರಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ತಂಡವೆನಿಸಲು ಮೊಯೀನ್ ಅಲಿ ಪಾತ್ರ ಕೂಡ ಮಹತ್ವದ್ದಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಅಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದರು. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಮೊಯೀನ್ ಅಲಿ ತಂಡಕ್ಕೆ ನೆರವಾಗಿದ್ದು ಯಶಸ್ಸಿನಲ್ಲಿ ದೊಡ್ಡ ಪಾತ್ರವಹಿಸಿತ್ತು. ಹಾಗಾಗಿ ಈ ಬಾರಿಯ ಮೆಗಾ ಆಕ್ಷನ್‌ಗೂ ಸಿಎಸ್‌ಕೆ ರೀಟೈನ್ ಮಾಡಿಕೊಂಡ ನಾಲ್ವರು ಆಟಗಾರರ ಪೈಕಿ ಮೊಯೀನ್ ಅಲಿ ಕೂಡ ಒಬ್ಬರಾಗಿದ್ದರು. ಆದರೆ ಈ ಬಾರಿಯ ಮೊಯೀನ್ ಅಲಿಯಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಬಾರಲಿಲ್ಲ. ಈ ಸಂದರ್ಭದಲ್ಲಿಯೇ ಮೊಯೀನ್ ಅಲಿ ಪಾದದ ಗಾಯಕ್ಕೆ ತುತ್ತಾಗಿದ್ದಾರೆ.
ಕ್ರಿಕ್‌ಇನ್ಫೋ ವರದಿಯ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಮೊಯೀನ್ ಅಲಿ ಶನಿವಾರದಂದು ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ರವೀಂದ್ರ ಜಡೇಜಾ ನೇತೃತ್ವದ ಸಿಎಸ್‌ಕೆ ತಂಡ ಮೊಯೀನ್ ಅಲಿಯ ಗಾಯದ ಪ್ರಮಾಣದ ಬಗ್ಗೆ ಮಾಹಿತಿ ತಿಳಿಯಲು ಸ್ಕ್ಯಾನಿಂಗ್ ವರದಿಗಾಗಿ ಕಾಯುತ್ತಿದೆ. ಹೀಗಾಗಿ ಮುಂದಿನ ಕೆಲ ದಿನಗಳ ಪಂದ್ಯಗಳಿಗೆ ಮೊಯೀನ್ ಅಲಿ ಅಲಭ್ಯವಾಗುವ ಸಾಧ್ಯತೆ ಹೆಚ್ಚಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ವಾರ ಎರಡು ಪಂದ್ಯಗಳು ನಿಗದಿಯಾಗಿದೆ. ಇದರಲ್ಲಿ ಒಂದು ಪಂದ್ಯ ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದು ಈ ಪಂದ್ಯದಲ್ಲಿ ಸಿಎಸ್‌ಕೆ 11 ರನ್‌ಗಳ ಅಂತರದಿಂದ ಸೋಲು ಅನುಭವಿಸಿತ್ತು. ಮುಂದಿನ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮೇ 1ರಂದು ಆಡಲಿದೆ. ಮೊಯೀನ್ ಅಲಿ ಅಂತಿಮವಾಗಿ ಸಿಎಸ್‌ಕೆ ಪರ ಗುಜರಾತ್ ಟೈಟನ್ಸ್ ವಿರುದ್ಧ ಏಪ್ರಿಲ್ 17ರಂದು ಆಡಿದ್ದರು.
ಗಾಯಗೊಳ್ಳುವುದಕ್ಕೂ ಮುನ್ನ ಮೊಯೀನ್ ಅಲಿ 2022ರ ಆವೃತ್ತಿಯಲ್ಲಿ ಸಾಕಷ್ಟು ಪರದಾಡಿದ್ದಾರೆ. ವೀಸಾ ಸಮಸ್ಯೆ ಉಂಟಾಗಿದ್ದ ಕಾರಣದಿಂದಾಗಿ ತಡವಾಗಿ ತಂಡವನ್ನು ಸೇರಿಕೊಂಡಿದ್ದ ಅಲಿ ನಂತರ ಪ್ರದರ್ಶನದಲ್ಲಿಯೂ ಹಿನ್ನಡೆ ಅನುಭವಿಸಿದರು. ಆಡಿದ 5 ಪಂದ್ಯಗಳಲ್ಲಿ ಮೊಯೀನ್ ಅಲಿ 17.40 ಸರಾಸರಿಯಲ್ಲಿ 87 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಅಲ್ಲದೆ ಬೌಲಿಂಗ್‌ನಲ್ಲಿ 8 ಓವರ್‌ಗಳನ್ನು ಎಸೆದಿದ್ದು ಒಂದು ವಿಕೆಟ್ ಸಂಪಾದಿಸಲು ಕೂಡ ಸಾಧ್ಯವಾಗಿಲ್ಲ.
ಈ ಬಾರಿಯ ಆವೃತ್ತಿಯ್ಲಲಿ ಸಿಎಸ್‌ಕೆ ತಂಡಕ್ಕೆ ಗಾಯದ ಸಮಸ್ಯೆ ಕೂಡ ಬಹುವಾಗಿ ಕಾಡುತ್ತಿದೆ. ದೀಪಕ್ ಚಹರ್ ಹಾಗೂ ಆಡಮ್ ಮಿಲ್ನೆ ಗಾಯದ ಕಾರಣದಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಆಡಿರುವ 8 ಪಂದ್ಯಗಳ ಪೈಕಿ 6 ಸೋಲು ಹಾಘೂ 2 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡ 9ನೇ ಸ್ಥಾನದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ (ನಾಯಕ), ಶಿವಂ ದುಬೆ, ಎಂಎಸ್ ಧೋನಿ (ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ತುಷಾರ್ ದೇಶಪಾಂಡೆ, ಕ್ರಿಸ್ ಜೋರ್ಡಾನ್, ರಾಜವರ್ಧನ್ ಹಂಗರ್ಗೇಕರ್, ಮಹೇಶ್ ತೀಕ್ಷಣ, ಹರಿ ನಿಶಾಂತ್, ಎನ್ ಜಗದೀಸನ್, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ಕೆಎಂ ಆಸಿಫ್, ಭಗತ್ ವರ್ಮಾ, ಮೊಯಿನ್ ಅಲಿ, ಡ್ವೈನ್ ಪ್ರಿಟೋರಿಯಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications