For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಆಟಗಾರರ ಆಗಮನಕ್ಕೆ ದಿನಾಂಕ ಫಿಕ್ಸ್; ದೇಶಿ ಮತ್ತು ವಿದೇಶಿ ಆಟಗಾರರಿಗೆ ವಿಭಿನ್ನ ಕ್ವಾರಂಟೈನ್ ನಿಯಮ

IPL 2022: BCCI instructs all IPL Teams to reach Mumbai by March 8

ಎಲ್ಲಾ ಯೋಜನೆಯಂತೆ ನಡೆದರೆ ಮುಂಬರುವ ಮಾರ್ಚ್ 26ರಿಂದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲಿದೆ. ಸದ್ಯ ಬಿಸಿಸಿಐ ನಡೆಸುತ್ತಿರುವ ಯೋಜನೆಗಳ ಪ್ರಕಾರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲ್ಲಾ ಪಂದ್ಯಗಳೂ ಕೂಡ ಸಂಪೂರ್ಣವಾಗಿ ಭಾರತದ ನೆಲದಲ್ಲಿಯೇ ನಡೆಯಲಿವೆ. ಸದ್ಯ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಂಬೈ ಹಾಗೂ ಪುಣೆ ನಗರಗಳಲ್ಲಿ ನಡೆಯುವುದಾಗಿ ಮಾಹಿತಿಗಳು ಹರಿದಾಡುತ್ತಿದ್ದು, ಪ್ಲೇ ಆಫ್ ಹಂತದ ಪಂದ್ಯಗಳನ್ನು ಅಹಮದಾಬಾದ್ ನಗರದ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಸಲು ಚಿಂತನೆಗಳು ನಡೆಯುತ್ತಿವೆ. ಹೀಗೆ ಟೂರ್ನಿ ಆಯೋಜನೆಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ದಿನದಿಂದ ದಿನಕ್ಕೆ ಕುತೂಹಲಗಳು ಹೆಚ್ಚಾಗುತ್ತಿವೆ.

ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ವಿವಿಧ ತಂಡದ ಆಟಗಾರರು ಮುಂಬೈ ತಲುಪಲಿದ್ದಾರೆ. ಹೌದು, ಈ ಬಾರಿಯ ಲೀಗ್ ಹಂತದ ಪಂದ್ಯಗಳನ್ನು ಮುಂಬೈ ಮತ್ತು ಪುಣೆ ನಗರಗಳಲ್ಲಿ ನಡೆಸಲು ತೀರ್ಮಾನಿಸಿರುವುದರಿಂದ ಎಲ್ಲಾ 10 ಫ್ರಾಂಚೈಸಿಯ ಆಟಗಾರರು ಮಾರ್ಚ್ 8ರೊಳಗೆ ಮುಂಬೈ ನಗರವನ್ನು ತಲುಪಬೇಕು ಎಂದು ಬಿಸಿಸಿಐ ಸೂಚನೆಯನ್ನು ನೀಡಿದೆ. ಹೀಗೆ ಬಿಸಿಸಿಐ ಸೂಚನೆ ಪ್ರಕಾರ ಮುಂಬೈ ತಲುಪಲಿರುವ ಆಟಗಾರರು ಕಠಿಣ ಕ್ವಾರಂಟೈನ್ ನಿಯಮಕ್ಕೆ ಒಳಗಾಗಲಿದ್ದಾರೆ.

ಭಾರತೀಯ ಮತ್ತು ವಿದೇಶಿ ಕ್ರಿಕೆಟಿಗರು ಮುಂಬೈ ತಲುಪಲಿದ್ದು, ಭಾರತೀಯ ಆಟಗಾರರು 3 ದಿನಗಳ ಕ್ವಾರಂಟೈನ್ ನಿಯಮವನ್ನು ಅನುಸರಿಸಬೇಕಾದರೆ, ವಿದೇಶಿ ಕ್ರಿಕೆಟಿಗರು 5 ದಿನಗಳ ಕ್ವಾರಂಟೈನ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಹೀಗೆ ಕ್ವಾರಂಟೈನ್ ನಿಯಮ ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರವಷ್ಟೇ ಆಟಗಾರರನ್ನು ತಮ್ಮ ತಮ್ಮ ತಂಡಗಳನ್ನು ಸೇರಲು ಅವಕಾಶ ನೀಡಲಾಗುತ್ತದೆ. ಇನ್ನು 5 ದಿನಗಳ ಕ್ವಾರಂಟೈನ್ ನಿಯಮವನ್ನು ಅನುಸರಿಸುವ ಆಟಗಾರರಿಗೆ ಮೊದಲ ದಿನ, ತೃತೀಯ ದಿನ ಹಾಗೂ ಐದನೇ ದಿನದಂದು ಕೊರೋನಾ ಪರೀಕ್ಷೆ ನಡೆದರೆ, 3 ದಿನಗಳ ಕಾಲ ಕ್ವಾರಂಟೈನ್ ನಿಯಮಕ್ಕೆ ಒಳಗಾಗುವ ಆಟಗಾರರಿಗೆ ಪ್ರತಿದಿನವೂ ಪರೀಕ್ಷೆ ನಡೆಯಲಿದೆ ಹಾಗೂ ಈ ಎಲ್ಲ ಪರೀಕ್ಷೆಗಳಲ್ಲಿಯೂ ಆಟಗಾರರ ಕೊರೋನಾ ವರದಿ ನೆಗೆಟಿವ್ ಬಂದರೆ ಮಾತ್ರ ಬಯೋ ಬಬಲ್ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ ಎಂದು ಐಪಿಎಲ್ ಬಲ್ಲ ಮೂಲವೊಂದು ಮಾಹಿತಿ ನೀಡಿದೆ.

ವಿರಾಟ್ ಕೊಹ್ಲಿ ಮತ್ತು ಇತರೆ ಆಟಗಾರರ ಆಗಮನ ವಿಳಂಬ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಸೇರಿದಂತೆ ಇನ್ನೂ ಹಲವಾರು ಪ್ರಮುಖ ಭಾರತೀಯ ಕ್ರಿಕೆಟಿಗರು ಸದ್ಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ನಿರತರಾಗಿದ್ದು, ಈ ಸರಣಿ ಮಾರ್ಚ್ 16ರಂದು ಅಂತ್ಯಗೊಳ್ಳಲಿದೆ. ಹೀಗಾಗಿ ಈ ಸರಣಿಯಲ್ಲಿ ಪಾಲ್ಗೊಳ್ಳುವ ಹಲವಾರು ಭಾರತೀಯ ಕ್ರಿಕೆಟಿಗರು ಮಾರ್ಚ್ 16ರ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ಬಯೋ ಬಬಲ್ ಪ್ರವೇಶಿಸಲಿದ್ದಾರೆ.

ಐಪಿಎಲ್ 2022 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಆಕಾಶ್ ದೀಪ್, ಜೋಶ್ ಹ್ಯಾಜಲ್‌ವುಡ್, ಜೇಸನ್ ಬೆಹ್ರೆನ್‌ಡಾರ್ಫ್, ಚಾಮಾ ಮಿಲಿಂದ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಮಾಹಿ ಶೆಪಾಲ್ ಅಹ್ಮದ್ ರುದರ್‌ಫೋರ್ಡ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್

Story first published: Wednesday, March 2, 2022, 16:28 [IST]
Other articles published on Mar 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+