ಐಪಿಎಲ್ 2022: ಯಾವುದೂ ಅಂದುಕೊಂಡಂತೆ ಆಗುತ್ತಿಲ್ಲ; ಮೆಗಾ ಹರಾಜಿಗೆ ಕೈಕೊಟ್ಟ ಬೆಂಗಳೂರು

ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದೆ ಎನ್ನುವ ಕುತೂಹಲ ಒಂದೆಡೆಯಾದರೆ, ಈ ಟೂರ್ನಿ ಆರಂಭಕ್ಕೂ ಮುನ್ನ ನಡೆಯಬೇಕಿರುವ ಮೆಗಾ ಹರಾಜು ಕಾರ್ಯಕ್ರಮಕ್ಕೆ ಆಗುತ್ತಿರುವ ಅಡೆತಡೆಗಳು ಮತ್ತೊಂದೆಡೆ.
ಹೌದು, ಮುಂಬರಲಿರುವ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 2 ನೂತನ ತಂಡಗಳು ಸೇರ್ಪಡೆಯಾಗುತ್ತಿದ್ದು ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಪೈಪೋಟಿ ಏರ್ಪಡಲಿದೆ. ಇತ್ತೀಚೆಗಷ್ಟೇ ನಡೆದ ಫ್ರಾಂಚೈಸಿ ಹರಾಜು ಪ್ರಕ್ರಿಯೆಯಲ್ಲಿ ಅಹಮದಾಬಾದ್ ಮತ್ತು ಲಕ್ನೋ ನಗರಗಳು ನೂತನ ಫ್ರಾಂಚೈಸಿಗಳಾಗಿ ಹೊರಹೊಮ್ಮಿದ್ದವು. ಹೀಗಾಗಿ ಮುಂಬರಲಿರುವ ಐಪಿಎಲ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ಕಡ್ಡಾಯವಾಗಿ ನಡೆಸಲೇಬೇಕಾಗಿದೆ. ಈ ಹಿಂದೆ ಮೆಗಾ ಹರಾಜು ಪ್ರಕ್ರಿಯೆಯನ್ನು ಜನವರಿ ಮೊದಲನೇ ವಾರದಲ್ಲಿ ನಡೆಸಲಾಗುವುದು ಎಂದು ತೀರ್ಮಾನವನ್ನು ಕೈಗೊಂಡಿದ್ದ ಬಿಸಿಸಿಐ ನಂತರ ಅದನ್ನು ಫೆಬ್ರವರಿ ತಿಂಗಳಿಗೆ ಮುಂದೂಡಿತ್ತು.
ಹೌದು, ಫೆಬ್ರವರಿ ತಿಂಗಳಿಗೆ ಮೆಗಾ ಹರಾಜು ಪ್ರಕ್ರಿಯೆಯನ್ನು ಮುಂದೂಡಿದ್ದ ಬಿಸಿಸಿಐ 12 ಮತ್ತು 13ನೇ ತಾರೀಕಿನಂದು ಬೆಂಗಳೂರು ನಗರದ ಹೋಟೆಲ್ ಒಂದರಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಿತ್ತು. ಹಾಗೂ ಈ ಕುರಿತಾಗಿ ಎಲ್ಲಾ ಫ್ರಾಂಚೈಸಿಗಳಿಗೂ ಸೂಚನೆಯನ್ನು ನೀಡಿದ್ದ ಬಿಸಿಸಿಐ ಫೆಬ್ರವರಿ 11ರ ಸಂಜೆಯಂದೇ ಸಂಬಂಧಪಟ್ಟ ಎಲ್ಲಾ ಫ್ರಾಂಚೈಸಿಗಳ ಮಾಲೀಕರು ಕೂಡ ಬೆಂಗಳೂರು ನಗರವನ್ನು ತಲುಪಿರಬೇಕು ಎಂದು ಆದೇಶವನ್ನು ಹೊರಡಿಸಿತ್ತು. ಹೀಗೆ ಇಷ್ಟೆಲ್ಲಾ ಯೋಜನೆಯನ್ನು ಮಾಡಿಕೊಂಡಿದ್ದ ಬಿಸಿಸಿಐಗೆ ಬೆಂಗಳೂರಿನ ಪರಿಸ್ಥಿತಿ ಕೈ ಕೊಟ್ಟಿದೆ.
ಹೌದು, ಬೆಂಗಳೂರು ನಗರದಲ್ಲಿ ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ದಿಡೀರ್ ಏರಿಕೆಯನ್ನು ಕಂಡಿದ್ದು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಹೀಗಾಗಿ ಸ್ಥಳೀಯ ಸರ್ಕಾರ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಯಾವ ರೀತಿಯ ಕೊರೋನಾ ನಿಯಂತ್ರಣಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬುದು ಸದ್ಯ ಐಪಿಎಲ್ ಹರಾಜಿನ ಮೇಲೆ ಪ್ರಭಾವವನ್ನು ಬೀರಿದೆ.
ಈ ಕುರಿತು ಮಾತನಾಡಿರುವ ಬಿಸಿಸಿಐನ ಅಧಿಕಾರಿಯೋರ್ವರು ಕರ್ನಾಟಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮುಂಬರುವ ದಿನಗಳಲ್ಲಿ ಲಾಕ್ ಡೌನ್ ನಿಯಮವನ್ನು ಜಾರಿಗೆ ತರಬಹುದು. ಹೀಗಾಗಿ ಈಗಲೇ ಹೋಟೆಲ್ ಬುಕಿಂಗ್ ಮಾಡುವ ಬದಲು ಇನ್ನೊಂದಷ್ಟು ದಿನಗಳ ಕಾಲ ಕಾದು ಪರಿಸ್ಥಿತಿ ಯಾವ ರೀತಿ ಇರಲಿದೆ ಎಂಬುದನ್ನು ತಿಳಿದ ನಂತರ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ. ಅಷ್ಟೇ ಅಲ್ಲದೇ ಬೆಂಗಳೂರಿನಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಬೇರೆ ಯಾವುದಾದರೊಂದು ನಗರದಲ್ಲಿ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಲಿದ್ದೇವೆ ಎಂದು ಕೂಡ ತಿಳಿಸಿದರು.
ಹೀಗೆ ಬೆಂಗಳೂರು ನಗರದಲ್ಲಿ ನಡೆಯಬೇಕಿದ್ದ ಮೆಗಾ ಹರಾಜು ಪ್ರಕ್ರಿಯೆಗೆ ಇದೀಗ ಅಡ್ಡಿಯುಂಟಾಗಿದ್ದು ಮೆಗಾ ಹರಾಜಿನ ದಿನಾಂಕಗಳಲ್ಲಿಯೂ ಕೂಡ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಸದ್ಯ ಬೆಂಗಳೂರು ನಗರದಲ್ಲಿ ಫೆಬ್ರವರಿ 12 ಹಾಗೂ 13ರಂದು ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸುವ ಉದ್ದೇಶವನ್ನು ಬಿಸಿಸಿಐ ಹೊಂದಿದ್ದು ಮುಂದಿನ ದಿನಗಳಲ್ಲಿ ಮೆಗಾ ಹರಾಜು ಕಾರ್ಯಕ್ರಮದ ಸ್ಥಳ ಬದಲಾವಣೆಯಾಗುವುದರ ಜೊತೆಗೆ ಸಮಯ ಕೂಡ ಮುಂದೂಡಲ್ಪಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications