For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಎರಡನೇ ವಾರದಲ್ಲಿ ಆಡುವ ಅವಕಾಶ ಸಿಗದೇ ಬೆಂಚ್ ಕಾದ 11 ಉತ್ತಮ ಆಟಗಾರರಿವರು!

IPL 2022: Best 11 players who have benched on second week of the season

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ವಾರ ಮುಕ್ತಾಯವಾಗಿದ್ದು, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡಗಳು ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಗೆಲುವೇ ಸಿಗದೇ ಮಂಕಾಗಿವೆ. ಹೌದು, ಏಪ್ರಿಲ್ 8ರಂದು ನಡೆದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯ ಈ ಬಾರಿಯ ಐಪಿಎಲ್ ಟೂರ್ನಿಯ ಎರಡನೇ ವಾರದ ಅಂತಿಮ ಪಂದ್ಯವಾಗಿದ್ದು, ಬಲಿಷ್ಠ ತಂಡಗಳು ಗೆಲುವೇ ಕಾಣಲಾಗದೇ ಪರದಾಡಿದರೆ, ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕಣಕ್ಕಿಳಿದಿರುವ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿವೆ.

ಅದರಲ್ಲಿಯೂ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 3 ಪಂದ್ಯಗಳನ್ನಾಡಿ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು ಬೀಗಿದೆ. ಇನ್ನು ಮತ್ತೊಂದು ನೂತನ ತಂಡ ಲಕ್ನೋ ಸೂಪರ್ ಜೈಂಟ್ಸ್ 4 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು, ಉಳಿದೊಂದು ಪಂದ್ಯದಲ್ಲಿ ಸೋತಿದೆ. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಊಹಿಸಿರದ ರೀತಿಯ ಫಲಿತಾಂಶಗಳು ಹೊರಬಿದ್ದಿದ್ದು, ಟೂರ್ನಿಯ ಎರಡನೇ ವಾರದಲ್ಲಿ ವಿವಿಧ ತಂಡಗಳ ಕೆಲ ಆಟಗಾರರು ಆಡುವ ಅವಕಾಶ ಸಿಗದೇ ಹೊರಗುಳಿದಿದ್ದರು. ಹೀಗೆ ಆಡುವ ಅವಕಾಶ ಸಿಗದೇ ತಂಡಗಳಿಂದ ಹೊರಗುಳಿದ ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವಿರುವ 11 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

1. ಡಿವೋನ್ ಕಾನ್ವೆ

1. ಡಿವೋನ್ ಕಾನ್ವೆ

ಚೆನ್ನೈ ಸೂಪರ್ ಕಿಂಗ್ಸ್ ಪರ ಮೊದಲ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಡಿವೊನ್ ಕಾನ್ವೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಆ ಪಂದ್ಯದಲ್ಲಿ 8 ಎಸೆತಗಳಲ್ಲಿ 3 ರನ್ ಗಳಿಸಿದ್ದರು. ಹೀಗೆ ಮೊದಲ ಪಂದ್ಯದಲ್ಲಿ ನಿರೀಕ್ಷಿಸಿದಷ್ಟು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದ ಡಿವೋನ್ ಕಾನ್ವೆಗೆ ಸಿಎಸ್‌ಕೆ ನಂತರದ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ನೀಡಿಲ್ಲ. ನಂತರದ ಪಂದ್ಯಗಳಲ್ಲಿ ಮೊಯಿನ್ ಅಲಿ ಆಗಮನವಾದ ಕಾರಣ ಕಾನ್ವೆ ಎರಡನೇ ವಾರದ ಪೂತ್ತಿ ಬೆಂಚ್ ಕಾದಿದ್ದಾರೆ. ಇನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವ ಕಾನ್ವೆ 20 ಪಂದ್ಯಗಳನ್ನಾಡಿ 602 ರನ್ ಕಲೆಹಾಕಿದ್ದಾರೆ.

2. ರಹ್ಮನುಲ್ಲಾ ಗುರ್ಬಜ್

2. ರಹ್ಮನುಲ್ಲಾ ಗುರ್ಬಜ್

ಅಪ್ಘಾನಿಸ್ತಾನದ ಆರಂಭಿಕ ಆಟಗಾರ ರಹ್ಮನುಲ್ಲಾ ಗುರ್ಬಜ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದು, 20 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿ 534 ರನ್ ಕಲೆಹಾಕಿದ್ದಾರೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜೇಸನ್ ರಾಯ್ ಬದಲಾಗಿ ಗುಜರಾತ್ ಟೈಟನ್ಸ್ ತಂಡ ಸೇರಿದ ಇವರಿಗೆ ತಂಡ ತನ್ನ ಯಾವುದೇ ಪಂದ್ಯದಲ್ಲಿಯೂ ಸಹ ಅವಕಾಶ ನೀಡಿಲ್ಲ.

3. ಕೆಎಸ್ ಭರತ್

3. ಕೆಎಸ್ ಭರತ್

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದು 8 ಪಂದ್ಯಗಳನ್ನಾಡಿ 191 ರನ್ ಕಲೆಹಾಕಿದ್ದ ಕೆಎಸ್ ಭರತ್ ಈ ಬಾರಿಯ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದಾರೆ. ಇನ್ನು ಉತ್ತಮ ವಿಕೆಟ್ ಕೀಪಿಂಗ್ ಮಾಡುವ ಸಾಮರ್ಥ್ಯದ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಇವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಸಹ ಕಣಕ್ಕಿಳಿಯುವ ಅವಕಾಶ ನೀಡದ ಕಾರಣ ಭರತ್ ಇಲ್ಲಿಯವರೆಗೂ ಬೆಂಚ್ ಕಾದಿದ್ದಾರೆ.

4. ಯಶ್ ದುಲ್

4. ಯಶ್ ದುಲ್

2022ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಭಾರತಕ್ಕೆ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿರುವ ಯಶ್ ದುಲ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರನಾಗಿದ್ದಾರೆ. ವಿಶ್ವಕಪ್ ಗೆಲುವಿನ ನಂತರ ರಣಜಿಗೆ ಪದಾರ್ಪಣೆ ಮಾಡಿದ ಯಶ್ ದುಲ್ ಆಡಿದ ಪ್ರಥಮ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿಯೂ ಶತಕ ಬಾರಿಸಿ ಮಿಂಚಿದ್ದರು. ಹೀಗೆ ಉತ್ತಮ ಪ್ರದರ್ಶನ ನೀಡಬಲ್ಲ ಯಶ್ ದುಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದು, ಇದುವರೆಗೂ ಆಡುವ ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ.

5. ಶೆಲ್ಡನ್ ಜಾಕ್ಸನ್

5. ಶೆಲ್ಡನ್ ಜಾಕ್ಸನ್

35 ವರ್ಷದ ಶೆಲ್ಡನ್ ಜಾಕ್ಸನ್ ಈ ಬಾರಿಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದು, ಹಲವು ಆವೃತ್ತಿಗಳಲ್ಲಿ ಕಣಕ್ಕಿಳಿಯುವ ಅವಕಾಶ ಸಿಗದೇ ಬೆಂಚ್ ಕಾದ ನಂತರ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್‌ನ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದು ಐಪಿಎಲ್ ಪದಾರ್ಪಣೆ ಮಾಡಿದ್ದರು. ಹೀಗೆ ಆಡಿದ ಈ ಪಂದ್ಯಗಳಲ್ಲಿ ಉತ್ತಮ ವಿಕೆಟ್ ಕೀಪಿಂಗ್ ಮಾಡಿದ ಶೆಲ್ಡನ್ ಜಾಕ್ಸನ್ ಬ್ಯಾಟಿಂಗ್‌ನಲ್ಲಿ ವಿಫಲವಾದ ಕಾರಣ ತಂಡದಿಂದ ಹೊರಬಿದ್ದಿದ್ದು, ಎರಡನೇ ವಾರದಲ್ಲಿ ಆಡುವ ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ. ಒಟ್ಟಾರೆ 67 ಟಿ ಟ್ವೆಂಟಿ ಪಂದ್ಯಗಳಲ್ಲಿ 1500 ರನ್‌ಗಳನ್ನು ಶೆಲ್ಡನ್ ಜಾಕ್ಸನ್ ಕಲೆಹಾಕಿದ್ದಾರೆ.

6. ಮೊಹಮ್ಮದ್ ನಬಿ

6. ಮೊಹಮ್ಮದ್ ನಬಿ

ಅಪ್ಘಾನಿಸ್ತಾನದ ಪ್ರತಿಭಾವಂತ ಆಲ್‌ರೌಂಡರ್ ಆಟಗಾರ ಮೊಹಮ್ಮದ್ ನಬಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆಕೆಆರ್ ತಂಡದಲ್ಲಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಮಿಂಚಬಲ್ಲ ಸಾಮರ್ಥ್ಯ ಇರುವ ನಬಿಗೆ ಈ ಬಾರಿಯ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಅವಕಾಶ ನೀಡದೇ ಬೆಂಚ್ ಕಾಯಿಸುತ್ತಿದೆ.

7. ಮಹಿಪಾಲ್ ಲೊಮ್ರೊರ್

7. ಮಹಿಪಾಲ್ ಲೊಮ್ರೊರ್

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಮಹಿಪಾಲ್ ಲೊಮ್ರೊರ್ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ್ದನ್ನು ನಾವೆಲ್ಲಾ ಕಂಡಿದ್ದೇವೆ. ಸ್ಫೋಟಕ ಆಟವನ್ನಾಡಬಲ್ಲ ಬ್ಯಾಟ್ಸ್‌ಮನ್ ಆಗಿರುವ ಮಹಿಪಾಲ್ ಲೊಮ್ರರ್ ಈ ಬಾರಿಯ ಟೂರ್ನಿಯಲ್ಲಿ ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ.

8. ರಾಜವರ್ಧನ್ ಹಂಗರ್ಗೆಕರ್

8. ರಾಜವರ್ಧನ್ ಹಂಗರ್ಗೆಕರ್

2022ರ ಅಂಡರ್ 19 ವಿಶ್ವಕಪ್ ಮೂಲಕ ಬೆಳಕಿಗೆ ಬಂದ ರಾಜವರ್ಧನ್ ಹಂಗರ್ಗೆಕರ್ ತನ್ನ ಉತ್ತಮ ವೇಗದ ಬೌಲಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮಸ ಸೆಳೆದಿದ್ದರು. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿರುವ ರಾಜವರ್ಧನ್ ದೀಪಕ್ ಚಹರ್ ಬದಲು ಕಣಕ್ಕಿಸಬಹುದಾದ ಆಟಗಾರನಾಗಿದ್ದು, ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ.

9. ಮಾರ್ಕೊ ಜನ್ಸೆನ್

9. ಮಾರ್ಕೊ ಜನ್ಸೆನ್

ಇತ್ತೀಚಿನ ದಿನಗಳಲ್ಲಿ ತನ್ನ ವೇಗದ ಬೌಲಿಂಗ್ ಮೂಲಕ ಸಾಕಷ್ಟು ಸದ್ದು ಮಾಡಿರುವ ದಕ್ಷಿಣ ಆಫ್ರಿಕಾದ ಬೌಲರ್ ಮಾರ್ಕೊ ಜನ್ಸೆನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾರೆ. ಅಂತರರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡುವ ಮುಂಚೆಯೇ ಐಪಿಎಲ್ ಆಡಿರುವ ಅನುಭವವಿರುವ ಮಾರ್ಕೊ ಜನ್ಸೆನ್ ಟೂರ್ನಿಯ ಮೊದಲ ಎರಡು ವಾರಗಳಲ್ಲಿ ನಡೆದ ಯಾವುದೇ ಪಂದ್ಯಗಳಲ್ಲಿಯೂ ಆಡುವ ಅವಕಾಶ ಪಡೆದುಕೊಂಡಿಲ್ಲ.

10. ಮಯಾಂಕ್ ಮಾರ್ಕಂಡೆ

10. ಮಯಾಂಕ್ ಮಾರ್ಕಂಡೆ

ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ರಾಜಸ್ತಾನ್ ರಾಯಲ್ಸ್ ಪರ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ್ದ ಯುವ ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಇದುವರೆಗೂ 18 ಐಪಿಎಲ್ ಪಂದ್ಯಗಳನ್ನಾಡಿ 16 ವಿಕೆಟ್ ಪಡೆದಿದ್ದಾರೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ತಂಡ ಸೇರಿರುವ ಮಯಾಂಕ್ ಮಾರ್ಕಂಡೆ ಇಲ್ಲಿಯವರೆಗೂ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡಿಲ್ಲ.

Pandya ತಾನೇ ಔಟ್ ಆಗಿ Miller ಮೇಲೆ ಸಿಟ್ಟಾದರು | Oneindia Kannada
11. ಚೇತನ್ ಸಕಾರಿಯಾ

11. ಚೇತನ್ ಸಕಾರಿಯಾ

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಚೇತನ್ ಸಕಾರಿಯಾ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದಾರೆ. ಆದರೆ, ಟೂರ್ನಿಯಲ್ಲಿ ಇಲ್ಲಿಯವರೆಗೂ ಯಾವುದೇ ಪಂದ್ಯದಲ್ಲಿಯೂ ಕಣಕ್ಕಿಳಿಯುವ ಅವಕಾಶ ಸಿಕ್ಕಿರದ ಚೇತನ್ ಸಕಾರಿಯಾ ಬೆಂಚ್ ಕಾದಿದ್ದಾರೆ.

Story first published: Saturday, April 9, 2022, 18:26 [IST]
Other articles published on Apr 9, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+