ಐಪಿಎಲ್ 2022: ಕೆಕೆಆರ್‌ಗೆ ಭಾರೀ ಹಿನ್ನೆಡೆ: ಮೊದಲ ಐದು ಪಂದ್ಯಗಳಿಗೆ ಇಬ್ಬರು ಸ್ಟಾರ್ ಆಟಗಾರರು ಅಲಭ್ಯ!

ಐಪಿಎಲ್ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ತಂಡಗಳ ಸಿದ್ಧತೆಗಳು ಭರದಿಂದ ಸಾಗಿದೆ. ಎಲ್ಲಾ ತಂಡಗಳ ಬಹುತೇಕ ಆಟಗಾರರು ಈಗಾಗಲೇ ತಮ್ಮ ತಮ್ಮ ತಂಡಗಳನ್ನು ಸೇರಿಕೊಂಡಿದ್ದು ಕೆಲ ಆಟಗಾರರು ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ತಡವಾಗಿ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ.
ಅದರಲ್ಲೂ ಈ ಬಾರಿಯ ಟೂರ್ನಿಯಲ್ಲಿ ಶ್ರೇಯಸ್ ಐಯ್ಯರ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಟೂರ್ನಿಯ ಆರಂಭದಲ್ಲಿಯೇ ಭಾರೀ ಹಿನ್ನಡೆ ಉಂಟಾಗಿದೆ. ಕೆಕೆಆರ್ ತಂಡದ ಇಬ್ಬರು ಸ್ಟಾರ್ ಆಟಗಾರರು ಆರಂಭಿಕ ಐದು ಪಂದ್ಯಗಳಿಂದ ಹೊರಗುಳಿಯುತ್ತಿದ್ದಾರೆ. ಈ ಬಗ್ಗೆ ಕೆಕೆಆರ್ ತಂಡದ ಮೆಂಟರ್ ಡೇವಿಡ್ ಹಸ್ಸಿ ಬುಧವಾರ ಖಚಿತಪಡಿಸಿದ್ದಾರೆ.

5 ಪಂದ್ಯಗಳಿಂದ ಹೊರಗುಳಿಯಲಿರುವ ಆಟಗಾರರು ಯಾರು?
ಈ ಬಾರಿಯ ಐಪಿಎಲ್‌ನ ಮೊದಲ ಐದು ಪಂದ್ಯಗಳಿಂದ ಹೊರಗುಳಿಯಲಿರುವ ಕೆಕೆಆರ್ ತಮಡದ ಪ್ರಮುಖ ಆಟಗಾರರು ಯಾರೆಂದರೆ ಪ್ಯಾಟ್ ಕಮ್ಮಿನ್ಸ್ ಹಾಗೂ ಆರೋನ್ ಫಿಂಚ್. ಇಬ್ಬರು ಕೂಡ ಆಸ್ಟ್ರೇಲಿಯಾ ತಂಡದ ನಾಯಕನಾಗಿದ್ದು ಪ್ಯಾಟ್ ಕಮಿನ್ಸ್ ಟೆಸ್ಟ್ ತಂಡದ ನಾಯಕನಾಗಿದ್ದರೆ ಫಿಂಚ್ ವೈಟ್‌ಬಾಲ್ ತಂಡದ ನಾಯಕನಾಗಿದ್ದಾರೆ. ಪಾಕಿಸ್ತಾನ ವಿರುದ್ಧಧ ಸೀಮಿತ ಓವರ್‌ಗಳಲ್ಲಿ ಭಾಗಿಯಾಗುತ್ತಿರುವ ಕಾರಣ ಈ ಆಟಗಾರರು ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಅಲಭ್ಯವಾಗುತ್ತಿದ್ದಾರೆ.

ಪ್ರಮುಖ ಆಟಗಾರರಿಲ್ಲದಿರುವುದು ಕಳವಳ ಮೂಡಿಸುತ್ತದೆ
"ಪ್ರಮುಖ ಆಟಗಾರರು ಲಭ್ಯವಾಗದಿರುವುದು ಕಳವಳ ಮೂಡಿಸುತ್ತದೆ ನಿಜ. ನೀವು ನಿಮ್ಮ ತಂಡದ ಅತ್ಯುತ್ತಮ ಆಟಗಾರರು ಲಭ್ಯವಿರಬೇಕೆಂದು ಬಯಸುತ್ತೀರಿ. ಆದರೆ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ಪ್ರತಿಯೊಬ್ಬ ಕ್ರಿಕೆಟಿಗ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಬಯಸಬೇಕು. ಅವರು ಆ ರೀತಿಯ ಬದ್ಧತೆಯನ್ನು ಹೊಂದಿರುತ್ತಾರೆ. ಫಿಂಚ್ ಹಾಗೂ ಕಮ್ಮಿನ್ಸ್ ಮೊದಲ ಐದು ಪಂದ್ಯಗಳಲ್ಲಿ ಆಡುವುದಿಲ್ಲ. ಆದರೆ ಅವರು ಕ್ರಿಕೆಟ್‌ಗಾಗಿ ಸಮರ್ಥವಾಗಿದ್ದು ಸದಾ ಸಿದ್ದವಾಗಿರುತ್ತಾರೆ" ಎಂದು ಡೇವಿಡ್ ಹಸ್ಸಿ ಹೇಳಿಕೆ ನೀಡಿದ್ದಾರೆ.

ಅಚ್ಚರಿ ಮೂಡಿಸಿದ ಹಸ್ಸಿ ಹೇಳಿಕೆ
ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಕಾರಣ ಆಸಿಸ್ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕನಿಷ್ಟ ಮೂರು ಪಂದ್ಯಗಳಿಂದ ಹೊರಗುಳಿಯುವ ಬಗ್ಗೆ ಸ್ಪಷ್ಟಪಡಿಸಿದ್ದರು. ಆದರೆ ಮತ್ತೆರಡು ಪಂದ್ಯಗಳಿಗೆ ಪ್ಯಾಟ್ ಕಮ್ಮಿನ್ಸ್ ಅಲಭ್ಯವಾಗುತ್ತಿರುವುದಕ್ಕೆ ಸ್ಪಷ್ಟತೆಗಳು ಸದ್ಯಕ್ಕೆ ದೊರೆತಿಲ್ಲ. ಆಸ್ಟ್ರೇಲಿಯಾದ ಟೆಸ್ಟ್ ಸರಣಿ ಮಾರ್ಚ್ 25ಕ್ಕೆ ಅಂತ್ಯವಾಗಲಿದ್ದು ಮೂರು ದಿನಗಳ ಕ್ವಾರಂಟೈನ್ ಮುಗಿಸಿ ಏಪ್ರಿಲ್ 6ರಿಂದ ಆರಂಭವಾಗಲಿರುವ ಪಂದ್ಯಕ್ಕೆ ಪ್ಯಾಟ್ ಕಮ್ಮಿನ್ಸ್ ಲಭ್ಯವಾಗುವ ನಿರೀಕ್ಷೆಯಿತ್ತು. ಆದರೆ ಡೇವಿಡ್ ಹಸ್ಸಿ ಮೊದಲ ಐದು ಪಂದ್ಯಗಳಿಗೆ ಹೊರಗುಳಿಯಲಿದ್ದಾರೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪಾಕ್ ವಿರುದ್ಧ ಆಸಿಸ್ ಪಡೆಯನ್ನು ಮುನ್ನಡೆಸಲಿದ್ದಾರೆ ಫಿಂಚ್
ಆರೋನ್ ಫಿಂಚ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಅಲೆಕ್ಸ್ ಹೇಲ್ಸ್‌ಗೆ ಬದಲಿ ಆಟಗಾರನಾಗಿ ಸೇರ್ಪಡೆಯಾಗಲಿದ್ದಾರೆ. ಆದರೆ ಈ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನದ ವಿರುದ್ಧ ವೈಟ್ ಬಾಲ್ ಸಿರೀಸ್‌ನಲ್ಲಿ ಆಡಲಿರುವ ಕಾರಣ ಆಸಿಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಆರೋನ್ ಫಿಂಚ್ ಸರಣಿ ಮುಕ್ತಾಯದ ಬಳಿಕವೇ ಕೆಕೆಆರ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬುದು ಮೊದಲೇ ಖಚಿತವಾಗಿತ್ತು. ಏಪ್ರಿಲ್ 5ರಂದು ಟಿ20 ಸರಣಿ ಅಂತ್ಯವಾಗುವ ಮೂಲಕ ಆಸ್ಟ್ರೇಲಿಯಾ ತಂಡದ ಪಾಕ್ ಪ್ರವಾಸ ಅಂತ್ಯವಾಗಲಿದ್ದು ಮೂರು ದಿನಗಳ ಕ್ವಾರಂಟೈನ್ ಮುಗಿಸಿ ಏಪ್ರಿಲ್ 9ಕ್ಕೆ ಆರೋನ್ ಫಿಂಚ್ ಕೆಕೆಆರ್ ತಂಡವನ್ನು ಸೇರ್ಪಡೆಯಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications