IPL 2022: ಸೂಪರ್‌ಸ್ಟಾರ್ ಆಗಬಲ್ಲ ಎಲ್ಲಾ ಸಾಮರ್ಥ್ಯಗಳು ಈ ಕ್ರಿಕೆಟಿಗನಲ್ಲಿದೆ: ಬ್ರೆಂಡನ್ ಮಕ್ಕಲಮ್

ಶನಿವಾರ ಸಂಜೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದ್ದು 15ನೇ ಆವೃತ್ತಿಯ ಟೂರ್ನಿಗೆ ಚಾಲನೆ ದೊರೆಯಲಿದೆ. ಈ ಪಂದ್ಯದಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕ್ಕಲಮ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ಯುವ ಕ್ರಿಕೆಟಿಗ ಕೆಕೆಆರ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.
ಶ್ರೇಯಸ್ ಐಯ್ಯರ್ ಅವರು ಕ್ರಿಕೆಟ್ ಆಟದಲ್ಲಿ ಭವಿಷ್ಯದ ಸೂಪರ್ ಸ್ಟಾರ್ ಆಗುವ ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ ಎಂದಿರುವ ಮೆಕ್ಕಲಮ್ ಕೆಕೆಆರ್ ಪ್ರಾಂಚೈಸಿ ಪರವಾಗಿ ದಶಕದ ಆಟಗಾರನಾಗುವ ಸಾಮರ್ಥ್ಯ ಕೂಡ ಐಯ್ಯರ್ ಅವರಲ್ಲಿದೆ ಎಂದಿದ್ದಾರೆ.
"ಶ್ರೇಯಸ್ ಐಯ್ಯರ್ ಅವರನ್ನು ಫ್ರಾಂಚೈಸಿ ಕೊಂಡುಕೊಂಡಿರುವುದು ಶ್ರೇಷ್ಠವಾದ ಅಂಶವಾಗಿದೆ. ಈ ದಶಕದ ಅವಧಿಯಲ್ಲಿ ಫ್ರಾಂಚೈಸಿ ಪರವಾಗಿ ಅದ್ಭುತ ಆಟಗಾರನೆನಿಸುವ ಸಾಮರ್ಥ್ಯ ಶ್ರೇಯಸ್ ಐಯ್ಯರ್ ಅವರಲ್ಲಿದೆ. ನಾಳೆಯಿಂದ ಇದಕ್ಕೆ ಚಾಲನೆ ದೊರೆಯಲಿದೆ" ಎಂದು ಐಪಿಎಲ್ ಟೂರ್ನಿಯ ಆರಂಭದ ಮುನ್ನಾದಿನ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದಾರೆ.
"ತಮ್ಮ ಆಟ ಹಾಗೂ ಸಾಧನೆಯಿಂದಾಗಿ ಅವರು ಈಗಾಗಲೇ ಕ್ರಿಕೆಟ್ ಲೋಕದಲ್ಲಿ ಗೌರವವನ್ನು ಸಂಪಾದಿಸಿದ್ದಾರೆ. ಅವರ ಅತ್ಯುತ್ತಮ ಆವೃತ್ತಿ ಈಗ ಅವರ ಮುಂದಿದೆ. ಅದ್ಭುತ ಸೂಪರ್ ಸ್ಟಾರ್ ಎನಿಸುವ ಎಲ್ಲಾ ಅರ್ಹತೆಯೂ ಅವರಲ್ಲಿದೆ. ಅವರೊಂದಿಗೆ ಕರ್ತವ್ಯ ನಿರ್ವಹಿಸಲು ನಾನು ಸಾಕಷ್ಟು ಉತ್ಸುಕನಾಗಿದ್ದೇನೆ" ಎಂದು ಶ್ರೇಯಸ್ ಐಯ್ಯರ್ ಬಗ್ಗೆ ಬ್ರೆಂಡನ್ ಮೆಕ್ಕಲಮ್ ಅಭಿಪ್ರಾಯಪಟ್ಟಿದ್ದಾರೆ.
2020 ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಆ ಫ್ರಾಂಚೈಸಿಯನ್ನು ಚೊಚ್ಚಲ ಬಾರಿಗೆ ಫೈನಲ್ ಹಂತಕ್ಕೆ ಮು್ನನಡೆಸಿದ್ದರು ಶ್ರೇಯಸ್ ಐಯ್ಯರ್. 2022ರ ಆವೃತ್ತಿಗಾಗಿ ನಡೆದ ಬಿಡ್ಡಿಂಗ್‌ನಲ್ಲಿ ಅಯ್ಯರ್ ಅವರನ್ನು ಸೇರ್ಪಡೆಗೊಳಿಸಲು ಸಾಕಷ್ಟು ಪೈಪೋಟಿ ಉಂಟಾಗಿತ್ತು. ಅಂತಿಮವಾಗಿ 12.25 ಕೋಟಿಗೆ ಕೆಕೆಆರ್ ಫ್ರಾಂಚೈಸಿ ಶ್ರೇಯಸ್ ಐಯ್ಯರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.
ಕೆಕೆಆರ್ ಫ್ರಾಂಚೈಸಿ: ಶ್ರೇಯಸ್ ಐಯ್ಯರ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ನಿತೀಶ್ ರಾಣಾ, ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅನುಕುಲ್ ರಾಯ್, ರಸಿಖ್ ದಾರ್, ಚಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ಬಾಬಾ ಇಂದ್ರಜಿತ್ , ಅಭಿಜೀತ್ ತೋಮರ್, ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಹೇಲ್ಸ್, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಅಮನ್ ಖಾನ್, ಉಮೇಶ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications