Bring Raina Back : Mr. IPL ರೈನಾ ಕರೆಸಿಕೊಳ್ಳಿ, CSK ಅಭಿಮಾನಿಗಳಿಂದ ಬೇಡಿಕೆ
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸೋಲುವ ಮೂಲಕ 15ನೇ ಆವೃತ್ತಿಯಲ್ಲಿ ಕಳಪೆ ಆರಂಭ ಪಡೆದುಕೊಂಡಿದೆ. ಸತತ ಮೂರನೇ ಪಂದ್ಯದಲ್ಲಿ ಕೈ ಚೆಲ್ಲಿರುವ ಚೆನ್ನೈ ತಂಡಕ್ಕೆ ಫ್ಯಾನ್ಸ್ ಪಾಠ ಮಾಡಿದ್ದಾರೆ.
ಚೆನ್ನೈ ಮತ್ತೊಮ್ಮೆ ಹೆಣಗಾಡುತ್ತಿದೆ ಮತ್ತು ಮಿ. ಐಪಿಎಲ್, 'ಚಿನ್ನ ತಲಾ' ಬೆಲೆ ಈಗ ಮ್ಯಾನೇಜ್ಮೆಂಟ್ ಗೆ ತಿಳಿಯುತ್ತಿದೆ. ರೈನಾ ಕೈಬಿಟ್ಟು, ಹರಾಜು ಕೂಡಾ ಕೂಗದ ಚೆನ್ನೈ ಮ್ಯಾನೇಜ್ಮೆಂಟ್ ಬಗ್ಗೆ ರೈನಾ ಅಭಿಮಾನಿಗಳು ಸಹಜವಾಗಿ ಬೇಸರಗೊಂಡಿದ್ದರು. ಇತರೆ ಫ್ರಾಂಚೈಸಿಗಳು ಕೂಡ ರೈನಾ ಬಗ್ಗೆ ತಮ್ಮ ಆಸಕ್ತಿಯನ್ನು ತೋರಿಸಲಿಲ್ಲ.

2020 ರಲ್ಲಿ ಯುಎಇಯಲ್ಲಿ ಲೀಗ್ ನಡೆದಾಗ ರೈನಾ ಲೀಗ್ ಪ್ರಾರಂಭವಾಗುವ ಮೊದಲು ಕೆಲವು ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ಮರಳಿದ್ದರು ನಂತರ ತಂಡದಿಂದ ಪ್ರತ್ಯೇಕವಾಗಿದ್ದಲ್ಲದೇ, ತಂಡದಿಂದ ಶಾಶ್ವತವಾಗಿ ದೂರಾಗಿಬಿಟ್ಟರು.
ಆಗಿದ್ದು ಆಗಿ ಹೋಯ್ತು ಸುರೇಶ್ ರೈನಾ ಅವರನ್ನು ಮತ್ತೆ ತಂಡಕ್ಕೆ ಕರೆಸಿಕೊಳ್ಳಿ, ಚೆನ್ನೈಗೆ ಬಲತುಂಬಿ ಮತ್ತೊಮ್ಮೆ ಗೆಲುವಿನ ಲಯಕ್ಕೆ ಮರಳುವಂತೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಕಾಮೆಂಟರಿ ಬಾಕ್ಸ್‌ನಲ್ಲಿ ಕಂಡುಬರುವ ರೈನಾ ಅವರನ್ನು ಮರಳಿ ಕರೆತರುವಂತೆ ಸುಮ್ಮನೆ ಮನವಿ ಮಾಡುತ್ತಿಲ್ಲ, ಬದಲಿಗೆ ಟ್ರಾಲ್ಸ್, ಮೀಮ್ಸ್ ಮೂಲಕ ರೈನಾ ಇದ್ದರೆ ತಂಡ ಹೇಗಿರಬಹುದು, ಇಲ್ಲದೆ ಈಗ ತಂಡ ಏನಾಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ತೋರಿಸುತ್ತಿದ್ದಾರೆ.
ಸುರೇಶ್ ರೈನಾ 205 ಐಪಿಎಲ್ ಪಂದ್ಯಗಳಲ್ಲಿ 39 ಅರ್ಧ ಶತಕ ಮತ್ತು 136.76 ಸ್ಟ್ರೈಕ್ ರೇಟ್‌ನಲ್ಲಿ ಒಂದು ಶತಕದೊಂದಿಗೆ 5528 ರನ್ ಗಳಿಸಿದ್ದಾರೆ.
ರೈನಾ ಇದ್ದಾಗ ಹಾಗೂ ಇಲ್ಲದಾಗ ಚೆನ್ನೈ ತಂಡ ಹೇಗಿರುತ್ತೆ?
ದೀಪಕ್ ಚಾಹರ್ ಬರುವಿಕೆಗಾಗಿ ಕಾದಿರುವ ಚೆನ್ನೈ ಮ್ಯಾನೇಜ್ಮೆಂಟ್ ಏನು ಮಾಡುತ್ತಿದೆ
ಧೋನಿ ನಾಯಕತ್ವ ತೊರೆಯಲು ಇಲ್ಲಿದೆ ನಿಜವಾದ ಕಾರಣ?
ರೈನಾ ಬಂದರೆ ಮಾತ್ರ ಇರುವುದಿಲ್ಲ ತೊಂದರೆ
ಚೆನ್ನೈ ಮುಂದಿನ ಪಂದ್ಯಕ್ಕೆ ತಯಾರಿ ಹೇಗಿರುತ್ತೆ
ಸಿಎಸ್ ಕೆ ಫ್ಯಾನ್ಸ್ ಜೋಶ್ ಹೇಗಿದೆ?
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
