ಧೋನಿ ಮಾಸ್ಟರ್‌ಮೈಂಡ್: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರೆಲ್ಲಾ ಸೂರತ್‌ಗೆ!

ಎಲ್ಲಾ ಯೋಜನೆಗಳಂತೆ ನಡೆದರೆ ಮುಂಬರುವ ಮಾರ್ಚ್ 26ರಿಂದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭಾರತ ನೆಲದಲ್ಲಿಯೇ ಆರಂಭಗೊಳ್ಳಲಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಕಳೆದ ಬಾರಿಯ ರೀತಿ ಅಚಾತುರ್ಯಗಳು ನಡೆಯಬಾರದು ಎಂಬ ಕಾರಣದಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದೆ. ಹೌದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭಾರತ ನೆಲದಲ್ಲಿ ಆರಂಭವಾಗಿತ್ತಾದರೂ ಸಹ ಕೊರೋನಾವೈರಸ್ ಸೋಂಕು ಟೂರ್ನಿ ಮಧ್ಯದಲ್ಲಿ ವಿವಿಧ ಆಟಗಾರರಿಗೆ ತಗುಲಿದ ಕಾರಣದಿಂದಾಗಿ ಟೂರ್ನಿಯನ್ನು ಮಧ್ಯಂತರದಲ್ಲಿಯೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮುಂದೂಡಲಾಗಿತ್ತು. ಈ ರೀತಿಯ ಘಟನೆ ಮರುಕಳಿಸಬಾರದು ಎಂಬ ನಿಟ್ಟಿನಿಂದ ಈ ಬಾರಿಯ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಆದಷ್ಟು ಒಂದೇ ನಗರದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದ್ದು, ಆಟಗಾರರು ಕಡಿಮೆ ಪ್ರಯಾಣ ಮಾಡಿದಷ್ಟು ಕೊರೋನಾ ಸೋಂಕು ಹರಡುವ ಸಾಧ್ಯತೆಗಳು ಕಡಿಮೆ ಇರುತ್ತವೆ ಎಂಬುದು ಬಿಸಿಸಿಐನ ಮುಂದಾಲೋಚನೆ.
ಈ ರೀತಿಯ ಯೋಜನೆಯನ್ನು ಹಾಕಿಕೊಂಡಿರುವ ಬಿಸಿಸಿಐ ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಮುಂಬೈ ಮತ್ತು ಪುಣೆ ನಗರಗಳಲ್ಲಿರುವ ಕ್ರೀಡಾಂಗಣಗಳಲ್ಲಿ ನಡೆಸಲು ಮುಂದಾಗಲಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭ ಸಮೀಪಿಸುತ್ತಿದ್ದು, ವಿವಿಧ ತಂಡಗಳ ಆಟಗಾರರು ಇನ್ನೇನು ಕೆಲ ದಿನಗಳಲ್ಲಿಯೇ ಅಭ್ಯಾಸಗಳನ್ನು ನೆಡೆಸಲು ಆರಂಭಿಸಲಿದ್ದಾರೆ. ಎಲ್ಲಾ ಫ್ರಾಂಚೈಸಿಯ ಆಟಗಾರರು ತಮ್ಮ ಫ್ರಾಂಚೈಸಿ ಪ್ರತಿನಿಧಿಸಲಿರುವ ನಗರಗಳ ಕ್ರೀಡಾಂಗಣಗಳನ್ನು ತಲುಪಲಿದ್ದು ಅಭ್ಯಾಸಗಳನ್ನು ಆರಂಭಿಸಲಿದ್ದಾರೆ. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಆಟಗಾರರು ಕೂಡ ಇನ್ನೇನು ಕೆಲವೇ ದಿನಗಳಲ್ಲಿ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಹೀಗಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಪಾಳಯದಿಂದ ವಿಭಿನ್ನವಾದ ಸುದ್ದಿಯೊಂದು ಹೊರಬಿದ್ದಿದ್ದು, ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಅಭ್ಯಾಸವನ್ನು ನಡೆಸುವುದರ ಬದಲು ಬೇರೆ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಅಷ್ಟಕ್ಕೂ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಚೆನ್ನೈ ಬಿಟ್ಟು ಬೇರೆ ನಗರದ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಮುಂದಾಗಿರುವುದಾದರೂ ಏಕೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

ಚೆನ್ನೈನಿಂದ ಸೂರತ್ ಕ್ರೀಡಾಂಗಣಕ್ಕೆ ಅಭ್ಯಾಸ ಸ್ಥಳಾಂತರವಾಗಲು ಇದೇ ಕಾರಣ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಅಭ್ಯಾಸವನ್ನು ಆರಂಭಿಸಲಿರುವ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಸೂರತ್ ನಗರದ ಲಾಲ್‌ಭಾಯ್ ಕಂಟ್ರ್ಯಾಕ್ಟರ್ ಕ್ರೀಡಾಂಗಣ ತಲುಪಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ನಡೆಸಲು ಚೆಪಾಕ್ ಕ್ರೀಡಾಂಗಣ ಬಿಟ್ಟು ಈ ಕ್ರೀಡಾಂಗಣಕ್ಕೆ ಬರಲು ಕಾರಣ ಮುಂಬೈ ಕ್ರೀಡಾಂಗಣಗಳಲ್ಲಿ ಬಳಸಿರುವ ಮಣ್ಣನ್ನೇ ಈ ಕ್ರೀಡಾಂಗಣದ ಪಿಚ್ ತಯಾರಿಸಲು ಕೂಡ ಬಳಸಿರುವುದು. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಎಂಎಸ್ ಧೋನಿ ಈ ಬಾರಿಯ ಅಭ್ಯಾಸವನ್ನು ಸೂರತ್ ಕ್ರೀಡಾಂಗಣದಲ್ಲಿಯೇ ನಡೆಸಲು ತೀರ್ಮಾನಿಸಿಬಿಟ್ಟಿದ್ದಾರೆ. ಈ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರೆ ಟೂರ್ನಿಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎಂಬ ಮುಂದಾಲೋಚನೆಯಿಂದ ಧೋನಿ ಈ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದಾರೆ.

ಸ್ಪಷ್ಟನೆ ನೀಡಿದ ಕ್ರೀಡಾಂಗಣದ ಕಾರ್ಯದರ್ಶಿ
ಸೂರತ್ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿಯಾಗಿರುವ ನೈನೇಶ್ ದೇಸಾಯಿ ಕೂಡ ಈ ಕುರಿತಾಗಿ ಮಾತನಾಡಿದ್ದು ಎಂಎಸ್ ಧೋನಿ, ಡ್ವೇನ್ ಬ್ರಾವೊ ಮತ್ತು ರವೀಂದ್ರ ಜಡೇಜಾ ರೀತಿಯ ಖ್ಯಾತ ಕ್ರಿಕೆಟಿಗರು ಇಲ್ಲಿ ನಡೆಯಲಿರುವ ಅಭ್ಯಾಸದಲ್ಲಿ ಭಾಗವಹಿಸಲಿದ್ದು ಮುಂಬೈ ಕ್ರೀಡಾಂಗಣಗಳಲ್ಲಿ ಬಳಸಲಾಗಿರುವ ಮಣ್ಣನ್ನೇ ಇಲ್ಲಿಯೂ ಬಳಸಿರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ಕ್ರೀಡಾಂಗಣವನ್ನು ಅಭ್ಯಾಸಕ್ಕೆ ಆಯ್ಕೆಮಾಡಿಕೊಂಡಿದೆ ಎಂದಿದ್ದಾರೆ.

ಈ ಬಾರಿಯ ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್
ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ಅಂಬಟಿ ರಾಯುಡು, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಶ್, ಭಗದೀಸನ್, ಭಗದೀಶ್ ವರ್ದನ್, ರಾಬಿನ್ ಉತ್ತಪ್ಪ, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಮರ್ಜಿತ್ ಸಿಂಗ್, ಡೆವೊನ್ ಕಾನ್ವೇ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications