CSK vs MI Preview: ಪಿಚ್ ವರದಿ, ಸಂಭಾವ್ಯ ಆಡುವ ಬಳಗ ಮತ್ತು ಹವಾಮಾನ ವರದಿ

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿಹೆಚ್ಚು ಯಶಸ್ಸು ಸಾಧಿಸಿರುವ ತಂಡಗಳು ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ಎರಡೂ ತಂಡಗಳೂ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅಕ್ಷರಶಃ ಮುಗ್ಗರಿಸಿದ್ದು, ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಂಬತ್ತನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ಅಂತಿಮ ಸ್ಥಾನದಲ್ಲಿದೆ.
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇತ್ತಂಡಗಳ ಪೈಕಿ ಎರಡೂ ತಂಡಗಳೂ ಸಹ ಪ್ಲೇಆಫ್ ಪ್ರವೇಶಿಸಲು ಇರುವ ಎಲ್ಲಾ ಸಾಧ್ಯತೆಗಳನ್ನು ಕಳೆದುಕೊಂಡಿದ್ದು, ಇತ್ತಂಡಗಳ ನಡುವಿನ ಈ ಪಂದ್ಯದ ಫಲಿತಾಂಶ ಉಳಿದ ತಂಡಗಳ ಮೇಲೆ ಹಾಗೂ ಪ್ಲೇಆಫ್ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎನ್ನಬಹುದು. ಈ ಎರಡು ತಂಡಗಳ ನಡುವಿನ ಈ ಹಣಾಹಣಿ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯದ ಹವಾಮಾನ ವರದಿ, ಪಿಚ್ ವರದಿ, ಸಂಭಾವ್ಯ ಆಡುವ ಬಳಗಗಳ ಮಾಹಿತಿ ಈ ಕೆಳಕಂಡಂತಿದೆ..
ಪಂದ್ಯದ ಮಾಹಿತಿ: ಈ ಪಂದ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಟೂರ್ನಿಯ 59ನೇ ಪಂದ್ಯವಾಗಿದ್ದು, ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೇ 12ರಂದು ಸಂಜೆ 7.30ಕ್ಕೆ ಆರಂಭವಾಗಲಿದೆ.
ಹವಾಮಾನ ವರದಿ: ವೆದರ್.ಕಾಮ್ ವೆಬ್ ತಾಣದ ಪ್ರಕಾರ ಮೇ 12ರ ಗುರುವಾರದಂದು ಮುಂಬೈ ನಗರದ ಉಷ್ಣಾಂಶವು ಹಗಲಿನ ವೇಳೆ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ರಾತ್ರಿ ವೇಳೆ 29 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು ಹಗಲು ಮತ್ತು ರಾತ್ರಿ ವೇಳೆ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಮಳೆ ಬರುವ ಸಾಧ್ಯತೆ ಮಧ್ಯಾಹ್ನದ ವೇಳೆ ಶೇ. 5 ಮತ್ತು ರಾತ್ರಿ ವೇಳೆ ಶೇ.10ರಷ್ಟು ಇರಲಿದೆ.
ಪಿಚ್ ವರದಿ: ಮುಂಬೈನ ವಾಂಖೆಡೆ ಸ್ಟೇಡಿಯಂ ಹೆಚ್ಚು ಸ್ಕೋರ್ ಮಾಡುವ ಮೈದಾನವಾಗಿದೆ. ಕ್ರೀಡಾಂಗಣದಲ್ಲಿ ಟಿ ಟ್ವೆಂಟಿ ಪಂದ್ಯದಗಳಲ್ಲಿ ಕಲೆಹಾಕಿರುವ ಸರಾಸರಿ 1 ನೇ ಇನ್ನಿಂಗ್ಸ್ ರನ್ 192 ಆದರೆ ಸರಾಸರಿ 2 ನೇ ಇನ್ನಿಂಗ್ಸ್ ರನ್ ಒಟ್ಟು 184. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯ ಈ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2022ರ ಕೊನೆಯ ಪಂದ್ಯವಾಗಿದ್ದು ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿ 190+ ರನ್ ಬಾರಿಸಿತ್ತು.
ಸಂಭಾವ್ಯ ಆಡುವ ಬಳಗಗಳು:
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಆಡುವ ಬಳಗ:
1. ರುತುರಾಜ್ ಗಾಯಕವಾಡ
2. ಡೆವೊನ್ ಕಾನ್ವೇ
3. ರಾಬಿನ್ ಉತ್ತಪ್ಪ
4. ಅಂಬಟಿ ರಾಯುಡು
5. ರವೀಂದ್ರ ಜಡೇಜಾ / ಶಿವಂ ದುಬೆ
6. ಮೊಯಿನ್ ಅಲಿ
7. MS ಧೋನಿ (ನಾಯಕ & ವಿಕೆಟ್ ಕೀಪರ್)
8. ಡ್ವೈನ್ ಪ್ರಿಟೋರಿಯಸ್
9. ಸಿಮರ್ಜೀತ್ ಸಿಂಗ್
10. ಮಹೇಶ ತೀಕ್ಷಣ
11. ಮುಖೇಶ್ ಚೌಧರಿ
ಮುಂಬೈ ಇಂಡಿಯನ್ಸ್ ಸಂಭಾವ್ಯ ಆಡುವ ಬಳಗ:
1. ರೋಹಿತ್ ಶರ್ಮಾ ( ನಾಯಕ )
2. ಇಶಾನ್ ಕಿಶನ್
3. ತಿಲಕ್ ವರ್ಮ
4. ರಮಣದೀಪ್ ಸಿಂಗ್/ಅನ್ಮೋಲ್ಪ್ರೀತ್ ಸಿಂಗ್
5. ಕೀರಾನ್ ಪೊಲಾರ್ಡ್/ಡೆವಾಲ್ಡ್ ಬ್ರೆವಿಸ್
6. ಟಿಮ್ ಡೇವಿಡ್
7. ಡೇನಿಯಲ್ ಸ್ಯಾಮ್ಸ್
8. ಕುಮಾರ್ ಕಾರ್ತಿಕೇಯ
9. ಮುರುಗನ್ ಅಶ್ವಿನ್
10. ಜಸ್ಪ್ರೀತ್ ಬುಮ್ರಾ
11. ರಿಲೆ ಮೆರೆಡಿತ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications